ರಾಷ್ಟ್ರೀಯ

ಈಗ ಮತ್ತೊಬ್ಬ ಸಿಆರ್‌ಪಿಎಫ್‌ ಯೋಧನ ಫೇಸ್‌ಬುಕ್‌ ವಿಡಿಯೋ

Pinterest LinkedIn Tumblr

ಆಗ್ರಾ/ ಮಥುರಾ: ಬಿಎಸ್‌ಎಫ್‌ ಯೋಧ ತೇಜ್‌ ಬಹದ್ದೂರ್ ಯಾದವ್‌ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಫೇಸ್‌ಬುಕ್‌ನಲ್ಲಿ ವಿಡಿಯೊ ಹಾಕಿದ ಬೆನ್ನಲೇ ಕೇಂದ್ರ ಮೀಸಲು ಪೊಲೀಸ್‌ ಪಡೆ(ಸಿಆರ್‌ಪಿಎಫ್‌)ಯ ಮತ್ತೊಬ್ಬ ಯೋಧ ಸೌಕರ್ಯಗಳು ಸರಿ ಇಲ್ಲ ವಿಡಿಯೊ ಅಪ್‌ಲೋಡ್‌ ಮಾಡಿದ್ದಾರೆ.

ಕೇಂದ್ರ ಸರ್ಕಾರದ ಅರೆಸೇನಾ ಪಡೆಗೆ ಸೇರಿರುವ ಸಿಆರ್‌ಪಿಎಫ್‌ ಬೆಟಾಲಿಯನ್‌ನ ಯೋಧ ಜೀತ್‌ ಸಿಂಗ್‌ ಫೇಸ್‌ಬುಕ್‌ನಲ್ಲಿ ವಿಡಿಯೊ ಅಪ್‌ಲೋಡ್‌ ಮಾಡಿದ್ದಾರೆ.

ವಿಡಿಯೊದಲ್ಲಿ ಏನಿದೆ?
ಯೋಧ ಜೀತ್‌ ಸಿಂಗ್‌ ಅರೆ ಸೇನಾಪಡೆಯಲ್ಲಿ ನೀಡುತ್ತಿರುವ ಸೌಕರ್ಯಗಳ ಬಗ್ಗೆ ಅಸಮಾದಾನ ವ್ಯಕ್ತಪಡಿಸಿ, ಉತ್ತಮ ಸೌಲಭ್ಯಗಳನ್ನು ಕಲ್ಪಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ.

‍‘ನಾವು ಗ್ರಾಮಪಂಚಾಯಿತಿ ಹಾಗೂ ಎಲ್ಲ ಹಂತದ ಚುನಾವಣೆಗಳಲ್ಲಿ ಕೆಲಸ ಮಾಡುತ್ತವೆ, ಸಂಸತ್, ವಿಮಾನ ನಿಲ್ದಾಣ, ಮಸೀದಿ ಸೇರಿದಂತೆ ವಿಐಪಿಗಳಿಗೆ ಭದ್ರತೆ ನೀಡಿದರೂ ನಮಗೆ ಸೇನಾ ಯೋಧರಿಗೆ ಸಿಗುವಂತಹ ಸೌಲಭ್ಯಗಳು ಸಿಗುತ್ತಿಲ್ಲ’ ಎಂದು ಜೀತ್‌ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರ, ಶಿಕ್ಷಕರಿಗೆ 50 ರಿಂದ 60 ಸಾವಿರ ರೂಪಾಯಿ ಸಂಬಳ ಹಾಗೂ ಸಾಕಷ್ಟು ರಜೆಗಳನ್ನು ಕೊಡುತ್ತದೆ. ಆದರೆ ಕಾಡು ಮೇಡು, ಬೆಟ್ಟ ಗುಡ್ಡ, ನಕ್ಸಲ್‌ ಪೀಡಿತ ಸ್ಥಳಗಳಲ್ಲಿ ಕೆಲಸ ಮಾಡುವ ನಮಗೆ ಕಡಿಮೆ ವೇತನ ನೀಡಲಾಗುತ್ತಿದೆ. ನಾವು ನಿವೃತ್ತರಾದರೆ ಮಾಜಿ ಸೈನಿಕರಿಗೆ ಸಿಗುವ ಪಿಂಚಣಿ, ವೈದ್ಯಕೀಯ ಸೌಲಭ್ಯಗಳು ನಮಗೆ ಸಿಗುತ್ತಿಲ್ಲ ಎಂದು ಜೀತ್‌ಸಿಂಗ್ ವಿಡಿಯೊದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

Comments are closed.