ಮನೋರಂಜನೆ

ಬ್ಯೂಟಿಫುಲ್ ಮನಸ್ಸುಗಳು ಬಿಡುಗಡೆಗೆ ಸಿದ್ಧ

Pinterest LinkedIn Tumblr


ನೀರ್‌ದೋಸೆ”ಚಿತ್ರದ ಯಶಸ್ಸಿನ ಬಳಿಕ ನಿರ್ಮಾಪಕ ಪ್ರಸನ್ನ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಅದುವೇ “ಬ್ಯೂಟಿಫುಲ್ ಮನಸ್ಸುಗಳು”. ಕಳೆದ ಡಿಸೆಂಬರ್‌ನಲ್ಲಿಯೇ ಚಿತ್ರ ಬಿಡುಗಡೆಗೆ ಸಿದ್ದತೆ ನಡೆಸಿದ್ದ ಚಿತ್ರತಂಡಕ್ಕೆ ನೋಟು ಅಮಾನ್ಯ ಅಡ್ಡಿಯಾಗಿತ್ತು. ನೋಟಿನ ಸಮಸ್ಯೆ ತಕ್ಕ ಮಟ್ಟಿಗೆ ಬಗೆಹರಿದಿರುವ ಹಿನ್ನೆಲೆಯಲ್ಲಿ ಮುಂದಿನವಾರ ಚಿತ್ರವನ್ನು ರಾಜ್ಯಾದ್ಯಂತ ತೆರೆಗೆ ತರುವ ಉದ್ದೇಶ ಚಿತ್ರತಂಡಕ್ಕಿದೆ.

ಜನರು ನೋಟಿಗಾಗಿ ಬ್ಯಾಂಕ್ ಮುಂದೆ ಪರದಾಡುವ ಸ್ಥಿತಿಯಲ್ಲಿ ಚಿತ್ರಮಂದಿರದ ಮುಂದೆ ನಿಲ್ಲುವುದಿಲ್ಲ ಎಂದು ಅರಿತು ಈಗ ಚಿತ್ರವನ್ನು ಬಿಡುಗಡೆ ಮಾಡಲು ಮುಂದಾಗಿದ್ದೇವೆ. ಚಿತ್ರವನ್ನು ಕುಟುಂಬದ ಸದಸ್ಯರಿಗೆ ತೋರಿಸಿದೆ, ಎಲ್ಲರೂ ಒಳ್ಳೆಯ ಚಿತ್ರ ಮಾಡಿದ್ದೀಯ ಎಂದು ಬೆನ್ನು ತಟ್ಟಿ ಮೆಚ್ಚುಗೆಯ ಮಾತನಾಡಿದರು ಇದು ನನ್ನಲ್ಲಿ ಗೆಲುವಿನ ಖುಷಿ ಮೂಡಿಸಿದೆ ಎಂದು ಮಾತಿಗಿಳಿದರು ನಿರ್ಮಾಪಕ ಪ್ರಸನ್ನ.

ಚಿತ್ರರಂಗಕ್ಕೆ ಯಾಕೆ ಬರುತ್ತೀಯ ಎನ್ನುವ ಕುಟುಂಬದ ಸದಸ್ಯರ ಮಧ್ಯೆ ನಮ್ಮ ಕುಟುಂಬದ ಸದಸ್ಯರು ಚಿತ್ರ ನೋಡಿ ಖುಷಿಪಟ್ಟಿದ್ದಾರೆ. ಇದೊಂದು ಭಾವುಕತೆಯ ಕಥೆ. ಚಿತ್ರ ನೋಡಿದ ಎಲ್ಲರಿಗೂ ಚಿತ್ರ ಇಷ್ಟವಾಗಲಿದೆ. ಎಲ್ಲರ ಮನಸ್ಸುಗಳು ಭಾವುಕವಾಗಲಿವೆ ಇದರಲ್ಲಿ ಯಾವುದೇ ಸಂಶಯವಿಲ್ಲ.ನೋಟು ಅಮಾನ್ಯದಿಂದ ಚಿತ್ರದ ಬಗ್ಗೆ ಇದ್ದ ಎಲ್ಲ ಭಯ ದೂರವಾಗಿದೆ. ಚಿತ್ರ ಧೈರ್ಯ ತಂದುಕೊಟ್ಟಿದೆ. ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿಕೊಂಡರು ಪ್ರಸನ್ನ.

ನಟಿ ಶೃತಿ ಹರಿಹರನ್, ಇದುವರೆಗಿನ ಚಿತ್ರ ಜೀವನದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ. ನಂದಿನಿ ಪಾತ್ರ ನನ್ನನ್ನು ಇನ್ನೂ ಕಾಡುತ್ತಿದೆ. ಈಗಿನ ಪರಿಸ್ಥಿತಿಗೆ ತಕ್ಕದಾದ ಚಿತ್ರ ಎಂದರು. ಬಹುಶಃ ಎಂಟರಿಂದ ಒಂಭತ್ತು ಚಿತ್ರಗಳಲ್ಲಿ ನಟಿಸಿರಬೇಕು ಎಂದು ತನ್ನ ಚಿತ್ರದ ಬಗ್ಗೆ ಅನುಮಾನದಿಂದಲೇ ಮಾತಿಗಿಳಿದ ನಟ ನೀನಾಸಂ ಸತೀಶ್,ಪ್ರತಿಭಾರಿಯೂ ಭಯದಿಂದಲೇ ಚಿತ್ರ ಮಾಡುತ್ತೇನೆ ಎಂದರು.

ಹಾಡು ಬರೆದಿರುವ ಪತ್ರಕರ್ತ ಮದನ್ ಕುಮಾರ್, ಹಾಗು ರಘು ನಿಡುವಳ್ಳಿ ಚಿತ್ರ ಯಶಸ್ವಿಯಾದರೆ ನಮ್ಮ ಪ್ರಯತ್ನಕ್ಕೆ ಫಲ ಸಿಕ್ಕಂತಾಗುತ್ತದೆ ಎಂದರು.

ಸಂಗೀತ ನಿರ್ದೇಶಕ ಭರತ್, ಕಾಮಿಡಿ ಸನ್ನಿವೇಶಗಳಿಗೆ ಸಂಗೀತ ನೀಡುವುದು ಕಷ್ಟದ ಕೆಲಸ ಎಂದರೆ ಕಲಾವಿದ ಸಂದೀಪ್ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು. ನಿರ್ದೇಶಕ ಜಯತೀರ್ಥ, ಈ ತಿಂಗಳ ೨೦ ರಂದು ಚಿತ್ರ ಮಾಡುತ್ತಿದ್ದೇವೆ, ಎಲ್ಲರ ಸಹಕಾರ ಬೇಕು ಎಂದರು.

Comments are closed.