ಅಂತರಾಷ್ಟ್ರೀಯ

ಭಾರತೀಯ ಉದ್ಯೋಗಿಗಳಿಗೆ ಶಾಕ್ ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್

Pinterest LinkedIn Tumblr

ವಾಶಿಂಗ್‌ಟನ್,ಜ.೧೨-ಅಮೇರಿಕಾದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತ ಅಧಿಕಾರಕ್ಕೇರುವ ಮುನ್ನ ಭಾರತೀಯ ಐಟಿ ಉದ್ಯೋಗಿಗಳಿಗೆ ಶಾಕ್ ನೀಡಿದೆ.
ಅಮೇರಿಕಾಕ್ಕೆ ಉದ್ಯೋಗಕ್ಕೆ ಬರುವ ಭಾರತೀಯರು ಎಚ್-೧ಬಿ ಮತ್ತು ಎಲ್೧ ವೀಸಾಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪದ ಮೇಲೆ ಈ ವೀಸಾಗಳ ಮೇಲೆ ನಿರ್ಬಂಧ ಹೇರಲು ಮುಂದಾಗಿರುವುದಾಗಿ ನಿಯೋಜಿತ ಅಟಾರ್ನಿ ಜನರಲ್ ಹೇಳಿಕೆ ನೀಡಿದ್ದಾರೆ. ಇದು ಅಮೇರಿಕಾದಲ್ಲಿ ಕೆಲಸ ಮಾಡಲು ಬಯಸುವ ಭಾರತೀಯ ಐಟಿ ಉದ್ಯೋಗಿಗಳಿಗೆ ಶಾಕ್ ನೀಡಿದಂತಾಗಿದೆ.
ಅಮೇರಿಕಾದ ಜನತೆಯ ಸೇವೆಗೆ ಮೊದಲು ನಾವು ಬದ್ಧರಾಗಿದ್ದೇವೆ. ಇಲ್ಲಿಯ ನಾಗರಿಕರಿಗೆ ಉದ್ಯೋಗ ನೀಡುವುದು ನಮ್ಮ ಉದ್ದೇಶ. ಉದ್ಯೋಗ ಅರಸಿ ಭಾರತ ಸೇರಿದಂತೆ ವಿವಿಧ ದೇಶಗಳಿಂದ ಎಚ್-೧ ಬಿ ಮತ್ತು ಎಲ್೧ ವೀಸಾ ಪಡೆಯುತ್ತಿದ್ದು ಈ ವೀಸಾಗಳು ಬಹುತೇಕ ಸಮಯದಲ್ಲಿ ದುರುಪಯೋಗವಾಗಲಿದೆ. ಇಂತಹದುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಟ್ರಂಟ್ ಆಡಳಿತ ಈ ನೀತಿಯನ್ನು ಜಾರಿಗೆ ತಂದರೆ ಭಾರತದ ಐಟಿ ಉದ್ಯೋಗಿಗಳು ಮತ್ತು ಕಂಪನಿಗಳ ಮೇಲೆ ಹೊಡೆತ ಬೀಳುವುದು ಗ್ಯಾರಂಟಿ ಎನ್ನಲಾಗುತ್ತಿದೆ.

Comments are closed.