ಕರಾವಳಿ

ಕುಂದಾಪುರ(ವಕ್ವಾಡಿ): ಫಾಲಿಶ್ ನೆಪದಲ್ಲಿ ಚಿನ್ನ ಕದ್ದ ಖದೀಮನಿಗೆ ಸಾರ್ವಜನಿಕರಿಂದ ಧರ್ಮದೇಟು..! (ವಿಡಿಯೋ ವರದಿ)

Pinterest LinkedIn Tumblr

ಕುಂದಾಪುರ: ಒಬ್ಬೊಂಟಿಯಾಗಿದ್ದ ಮಹಿಳೆಯ ಮನೆಗೆ ಬಂದ ಖದೀಮನೋರ್ವ ಉಚಿತವಾಗಿ ಚಿನ್ನಾಭರಣ ಫಾಲಿಶ್ ಮಾಡಿ ಕೊಡುವ ನೆಪದಲ್ಲಿ ಚಿನ್ನ ಲಪಾಟಯಿಸಿ ಪರಾರಿಯಾಗುವ ವೇಳೆ ಸಾರ್ವಜನಿಕರು ಅಡ್ಡಗಟ್ಟಿ ಆತನಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಸೋಮವಾರ ಕುಂದಾಪುರ ತಾಲೂಕಿನ ವಕ್ವಾಡಿ ಎಂಬಲ್ಲಿ ನಡೆದಿದೆ. ಬಿಹಾರ ಮೂಲದ ರಾಮಚಂದ್ರ ಯಾದವ್ ಬಂಧಿತ ಆರೋಪಿ.

kundapura_gold-theft_accused-arrest-3 kundapura_gold-theft_accused-arrest-6 kundapura_gold-theft_accused-arrest-7

(ಆರೋಪಿ ರಾಮಚಂದ್ರ ಯಾದವ್)

kundapura_gold-theft_accused-arrest-4 kundapura_gold-theft_accused-arrest-8

(ಮೋಸಕ್ಕೊಳಗಾದ ನೋವಿನಲ್ಲಿ ಬಾಬಿ)

kundapura_gold-theft_accused-arrest-9 kundapura_gold-theft_accused-arrest-1 kundapura_gold-theft_accused-arrest-5

ಒಂಟಿ ಮಹಿಳೆಯರೇ ಟಾರ್ಗೇಟ್..?
ಕುಂದಾಪುರದ ಕೋಟೇಶ್ವರ ಸಮೀಪದ ವಕ್ವಾಡಿ ಬಾಬಿ ಬಂಡಾರಿ ಅವರು ಮನೆಯಲ್ಲಿ ಒಬ್ಬೊಂಟಿಯಾಗಿದ್ದ ವೇಳೆ ಮನೆಗೆ ಬಂದ ರಾಮಚಂದ್ರ ಯಾದವ್, ತಾನು ಸಮೀಪದ ಊರಲ್ಲಿ ಚಿನ್ನಾಭರಣ ಕೆಲಸ ಮಾಡಿಕೊಂಡಿದ್ದು ಉಚಿತವಾಗಿ ಚಿನ್ನವನ್ನು ಫಾಲಿಶ್ ಮಾಡಿಕೊಡುವುದಾಗಿ ತಿಳಿಸಿದ್ದಾನೆ. ಇದನ್ನೇ ನಂಬಿದ ಬಾಬಿ ತನ್ನ ಬಳಿಯಿದ್ದ 3 ಫವನ್ ತೂಕದ ಮಾಂಗಲ್ಯ ಸರ ಹಾಗೂ ಒಂದೂವರೆ ಫವನ್ ತೂಕದ ಚಿನ್ನದ ಸರವನ್ನು ಆತನ ಕೈಗಿಟ್ಟಿದ್ದಾರೆ. ಚಿನ್ನವನ್ನು ಪಡೆದ ಆತ ತನ್ನ ಬಳಿಯಿದ್ದ ಯಾವುದೋ ರಾಸಾಯನಿಕ ಮಿಶ್ರಿತ ನೀರಿಗೆ ಈ ಚಿನ್ನವನ್ನು ಹಾಕಿ ಒಂದಷ್ಟು ಹೊತ್ತು ಬೆಂಕಿಯಲ್ಲಿ ಕಾಯಿಸಿದ್ದಾನೆ. ಬಳಿಕ ಚಿನ್ನವನ್ನು ಬಾಬಿಯವರಿಗೆ ವಾಪಾಸ್ ನೀಡುತ್ತಾನೆ.ಆದರೇ ಆಗ ಚಿನ್ನದ ಬಣ್ಣ ಸಂಪೂರ್ಣ ಮಾಸಿದ್ದು ಮಾತ್ರವಲ್ಲದೇ ಸರವು ಕೂಡ ತುಂಡರಿಸಿ ಹೋಗಿತ್ತು. ಇದಕ್ಕೆಲ್ಲಾ ಸಬೂಬು ಹೇಳಿ ಅಲ್ಲಿಂದ ಕಾಲ್ಕಿತ್ತ ರಾಮಚಂದ್ರನ ಬಗ್ಗೆ ಮಹಿಳೆ ಕೂಡಲೇ ಸಂಬಂಧಿಕರಿಗೆ ಸುದ್ದಿ ಮುಟ್ಟಿಸುತ್ತಾರೆ.

ಹಿಡಿದು ಥಳಿಸಿ..ಪೊಲೀಸರಿಗೆ ಒಪ್ಪಿಸಿದ್ರು..
ಊರಲ್ಲಿ ಇಂತಹ ಘಟನೆ ನಡೆದಿದೆ ಎನ್ನುವುದು ಗಮನಕ್ಕೆ ಬರುತ್ತಲೇ ವಕ್ವಾಡಿ ಪೇಟೆಯಲ್ಲಿದ್ದ ಸಂತೋಷ್, ವಿ.ಕೆ. ರಾಘವೇಂದ್ರ, ಗಿರೀಶ್, ಚಂದ್ರ ಮೊದಲಾದವರು ಎಲ್ಲೆಡೆ ಹುಡುಕಾಟ ನಡೆಸಿ ಆರೋಪಿ ರಾಮಚಂದ್ರ ಯಾದವನನ್ನು ಅಡ್ದಗಟ್ಟಿ ಹಿಡಿಯುತ್ತಾರೆ. ಕಳ್ಳನನ್ನು ಹಿಡಿದ ವಿಚಾರ ತಿಳಿಯುತ್ತಲೇ ಅಲ್ಲಿ ಜಮಾಯಿಸಿದ ಸಾರ್ವಜನಿಕರು ರಾಮಚಂದ್ರನಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಕರೆ ಮಾಡಿ ಆತನನ್ನು ಕುಂದಾಪುರ ಪೊಲೀಸರಿಗೆ ಒಪ್ಪಿಸುತ್ತಾರೆ.

ನಾನೇನು ತಪ್ಪು ಮಾಡಿಲ್ಲ….!
ಇನ್ನು ಬಂಧಿತನಾದ ಆರೋಪಿ ಈ ಮೊದಲು ಕೇರಳದಲ್ಲಿ ಫಾಲಿಶ್ ಕೆಲಸ ಹಾಗೂ ಟೈಲ್ಸ್ ಕೂರಿಸುವ ಕೆಲಸ ಮಾಡಿಕೊಂಡಿದ್ದು ಇಂದಷ್ಟೇ ಕುಂದಾಪುರಕ್ಕೆ ಬಂದಿದ್ದ ಎನ್ನಲಾಗಿದೆ. ಕೇವಲ ಇಪ್ಪತ್ತು ರೂಪಾಯಿ ಪಡೆದು ಚಿನ್ನ ಪಾಲೀಶ್ ಮಾಡಿಕೊಡುತ್ತಿರುವೆ. ತಾನೇನು ತಪ್ಪು ಮಾಡಿಲ್ಲ ಎನ್ನುವ ಹೇಳಿಕೆಯನ್ನು ನೀಡುವ ಆತನನ್ನು ಪೊಲೀಸರು ವಿಚಾರಣೆ ನಡೆಸುವುದು ಮಾತ್ರವಲ್ಲದೇ ಈ ರೀತಿಯ ಜಾಲದ ಬಗ್ಗೆ ಮಾಹಿತಿ ಕಲೆ ಹಾಕಿ ಸೂಕ್ತ ಕ್ರಮಕೈಗೊಳ್ಳಬೇಕಿದೆ.

——————-
ವರದಿ- ಯೋಗೀಶ್ ಕುಂಭಾಸಿ

Comments are closed.