ಪ್ರಮುಖ ವರದಿಗಳು

ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ದಂಪತಿಗೆ ಸಾರ್ವಜನಿಕರೆದುರು ಹೊಡೆದ ಗೂಂಡಾಗಳು…ವೈರಲ್ ಆಯಿತು ವೀಡಿಯೊ

Pinterest LinkedIn Tumblr

https://youtu.be/A7Z__lrzPxs

ಮೈನ್‌ಪುರಿ: ಉತ್ತರಪ್ರದೇಶಲ್ಲಿ ನಡೆದ ಹೇಯ ಘಟನೆಯೊಂದರಲ್ಲಿ ಮಹಿಳೆಯೊಬ್ಬಳನ್ನು ಚುಡಾಯಿಸುತ್ತಿದ್ದುದಕ್ಕೆ ಪ್ರತಿರೋಧ ತೋರಿದ ದಂಪತಿಗೆ ಗೂಂಡಾಗಳಿಬ್ಬರು ಜನನಿಬಿಡ ಮಾರುಕಟ್ಟೆಯಲ್ಲಿ ನೂರಾರು ಜನರ ಎದುರೆ ಬಡಿಗೆಯಿಂದ ಹಿಗ್ಗಾಮುಗ್ಗಾ ಥಳಿಸಿ ಕ್ರೌರ್ಯ ಮೆರೆದಿದ್ದಾರೆ. ಈ ವಿಡಿಯೋ ಇದೀಗ ವೈರಲ್‌ ಆಗಿದೆ.

ಹಲ್ಲೆಗೊಳಗಾದ ಮಹಿಳೆಯ ತಲೆಯಿಂದ ರಕ್ತ ಸುರಿಯುತ್ತಿತ್ತು, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆಯಾದರೂ ಇದುವರೆಗೂ ಗೂಂಡಾಗಳ ಬಂಧನವಾಗಿಲ್ಲ. ಹಲ್ಲೆ ಆರೋಪಿಗಳ ಪೈಕಿ ಓರ್ವ ಆನಂದ್‌ ಯಾದವ್‌ ಎಂದು ಹೇಳಲಾಗಿದೆ.

Comments are closed.