ಪ್ರಮುಖ ವರದಿಗಳು

ತ್ರಿಪುರಾದಲ್ಲಿ ವಿಧಾನಸಭಾ ಕಲಾಪ ನಡೆಯುತ್ತಿದ್ದ ವೇಳೆ ಸ್ಪೀಕರ್ ಅಧಿಕಾರ ದಂಡ ಕಿತ್ತುಕೊಂಡು ಓಡಿದ ಟಿಎಂಸಿ ಶಾಸಕ..ಇಲ್ಲಿದೆ ವೀಡಿಯೊ

Pinterest LinkedIn Tumblr

ಅಗರ್ತಲಾ: ತ್ರಿಪುರಾದಲ್ಲಿ ವಿಧಾನಸಭಾ ಕಲಾಪ ನಡೆಯುತ್ತಿದ್ದ ವೇಳೆ ಟಿಎಂಸಿ ಶಾಸಕರೊಬ್ಬರು ಸ್ಪೀಕರ್ ಅವರ ಸಾಂಕೇತಿಕ ಬೆಳ್ಳಿಯ ದಂಡವನ್ನು ಕಸಿದುಕೊಂಡು ಸದನದ ತುಂಬಾ ಓಡುತ್ತಾ, ಕಲಾಪವನ್ನು ತಡೆದ ವಿಲಕ್ಷಣಕಾರಿ ಘಟನೆಯೊಂದು ಮಂಗಳವಾರ ನಡೆದಿದೆ.

ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕ ಸುದೀಪ್ ರಾಯ್ ಬರ್ಮನ್ ಅವರು ತ್ರಿಪುರಾದ ಸ್ಪೀಕರ್ ರಾಮೇಂದ್ರ ಚೇಂದ್ರ ದೇಬ್ ನಾಥ್ ಅವರ ಅಧಿಕಾರ ದಂಡವನ್ನು ಕಿತ್ತುಕೊಂಡು ಸದನದಿಂದ ಓಡಿ ಕಲಾಪಕ್ಕೆ ಭಂಗವನ್ನುಂಟು ಮಾಡಿದ್ದಾರೆಂದು ವರದಿಗಳು ತಿಳಿಸಿವೆ.

ಸಿಪಿಐ-ಎಂ ಪಕ್ಷದ ನಾಯಕರು ಶಾಮಿಲಾಗಿದ್ದಾರೆಂಬ ಲೈಂಗಿಕ ಹಗರಣದ ಪ್ರಕರಣ ಕುರಿತು ಸದನದಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ತೃಣಮೂಲ ಪಕ್ಷದ ಶಾಸಕ ಸುದೀಪ್ ರಾಯ್ ಅವರು, ಸ್ಪೀಕರ್ ಅವರ ದಂಡವನ್ನು ಕಿತ್ತುಕೊಂಡು ಸದನದ ಹೊರಗೆ ಓಡಲು ಆರಂಭಿಸಿದ್ದರು. ಈ ವೇಳೆ ಸದನ ಕಲಾಪ ಹಠಾತ್ತನೇ ನಿಂತಿತು.

ಸ್ಪೀಕರ್ ಅವರ ಲಾಂಛನವನ್ನು ಕಸಿದುಕೊಂಡು ಓಡುತ್ತಿದ್ದ ಬರ್ಮನ್ ಅವರನ್ನು ಕೂಡಲೇ ಸದನದ ಭದ್ರತಾ ಸಿಬ್ಬಂದಿಗಳು, ಕಾಂಗ್ರೆಸ್ ಹಾಗೂ ಟಿಎಂಸಿ ಶಾಸಕರು ಬೆನ್ನಟ್ಟಿದರು. ಕೆಲ ಹೊತ್ತಿನ ಬಳಿದ ಭದ್ರತಾ ಸಿಬ್ಬಂದಿಗಳು ದಂಡವನ್ನು ಸ್ಪೀಕರ್ ಅವರಿಗೆ ಹಿಂತಿರುಗಿಸಿದರು.

ಬರ್ಮನ್ ಅವರು ಯಾವುದೇ ಪೂರ್ವ ಸೂಚನೆಯನ್ನು ನೀಡದೆಯೇ ಶೂನ್ಯ ವೇಳೆಯಲ್ಲಿ ಲೈಂಗಿಕ ಹಗರಣದ ವಿಷಯವನ್ನು ಸದನದಲ್ಲಿ ಪ್ರಸ್ತಾಪ ಮಾಡಿದರು. ಈ ವೇಳೆ ವಿರೋಧ ಪಕ್ಷದವರು ಸದನದ ಬಾವಿಗಿಳಿದು ಘೋಷಣೆ ಕೂಗಲು ಆರಂಭಿದ್ದರು.

ಈ ವೇಳೆ ಸ್ಪೀಕರ್ ಅವರು ವಿಚಾರವನ್ನು ಚರ್ಚೆ ನಡೆಸಲು ನಿರಾಕಸಿಸಿದ್ದರು. ಇದಕ್ಕೆ ಕುಪಿತರಾದ ಬರ್ಮನ್ ಅವರು ಸ್ಪೀಕರ್ ಅವರ ಲಾಂಛನವನ್ನು ಕಿತ್ತುಕೊಂಡು ಓಡಲು ಆರಂಭಿಸಿದ್ದರೆಂದು ವರದಿಗಳು ತಿಳಿಸಿವೆ.

Comments are closed.