ಕರ್ನಾಟಕ

ಮಗುವಿಗೆ ಸ್ತನ್ಯಪಾನ ಯಾಕೆ ನೀಡಬೇಕು ಎನ್ನುವ ಬಗ್ಗೆ ಸಂಪೂರ್ಣ ವಿವರಗಳು..!

Pinterest LinkedIn Tumblr

breast_feeding_baby

ಮಂಗಳೂರು: ಜನಿಸಿದ ಮಗುವಿನೊಂದಿಗೆ ತಾಯಿಯ ಪ್ರಮುಖ ಕರ್ತವ್ಯವಾಗಿದೆ ಎದೆ ಹಾಲುಣಿಸುವುದು. ತಾಯಿಯ ಶರೀರದಲ್ಲಿ ಅಲ್ಲಾಹನು ಮಗುವಿಗಾಗಿ ಮಾಡಿಟ್ಟಿರುವ ಪರಿಪೂರ್ಣ ಆಹಾರವಾಗಿದೆ ಎದೆ ಹಾಲು. ಅದು ಮಗುವಿನ ಅವಕಾಶವಾಗಿದೆ. ಪವಿತ್ರ ಕುರ್’ಆನಿನಲ್ಲಿ ಮೊಲೆ ಹಾಲುಣಿಸುವ ಬಗ್ಗೆ ಮೂರು ಸಲ ವಿವರಿಸಲಾಗಿದೆ. ಸ್ತನ್ಯಪಾನ ಎಂದರೆ ಮಗುವಿಗೆ ಕೇವಲ ಆಹಾರ ಕೊಡುವುದು ಮಾತ್ರವಲ್ಲ ಬದಲಾಗಿ ಅದರ ಮೂಲಕ ಪ್ರೀತಿಯ ವಿನಿಮಯ ಮತ್ತು ಆತ್ಮ ಬಲಪಡಿಸುವಿಕೆಯೂ ಕೂಡಾ ನಡೆಯುತ್ತದೆ.

ಅದೊಂದು ಅದ್ಭುತವಾದ ದ್ರಾವಣವಾಗಿದೆ, ಬೇರೆ ಯಾವುದೇ ಪ್ರಾಣಿಗಳ ಹಾಲು ಮನುಷ್ಯ ಜೀವಿಯ ಎದೆಹಾಲಿಗೆ ಸಮನಾಗಲು ಸಾಧ್ಯವಿಲ್ಲ. ಬೇರೆ ಜೀವಿಗಳ ಎದೆ ಹಾಲಿನ ಘಟಕಾಂಶಗಳನ್ನು ತೆಗೆದು ನೋಡಿದರೆ ನಮಗದು ಸ್ಪಷ್ಟವಾಗಬಹುದು. ಅವುಗಳಲ್ಲೆಲ್ಲಾ ಪ್ರೊಟೀನ್, ಕ್ಯಾಲ್ಸಿಯಂ ಅಧಿಕವಾಗಿರುತ್ತದೆ, ಕಾರ್ಬೋಹೈಡ್ರೇಟ್ ಪ್ರಮಾಣ ಕಡಿಮೆಯಾಗಿರುತ್ತದೆ. ಮನುಷ್ಯನ ಎದೆಹಾಲು ಪರೀಕ್ಷಿಸಿದರೆ, ಕಾರ್ಬೋಹೈಡ್ರೇಟ್ ಅಧಿಕವಾಗಿರುತ್ತದೆ ಮತ್ತು ಪ್ರೊಟೀನ್ ಮತ್ತು ಕ್ಯಾಲ್ಸಿಯಂ ಅಂಶ ಕಡಿಮೆಯಾಗಿರುತ್ತದೆ. ಅದಕ್ಕೆ ಕಾರಣಗಳೂ ಇವೆ. ಬೇರೆಲ್ಲಾ ಜೀವಿಗಳಿಗೆ ಮಾಂಸ ಖಂಡಗಳು, ಎಲುಬುಗಳು ಬೇಗನೇ ಬೆಳೆಯಬೇಕಾಗಿರುವುದರಿಂದ ಕ್ಯಾಲ್ಸಿಯಂ ಅಧಿಕ ಪ್ರಮಾಣದಲ್ಲಿ ಅಗತ್ಯವಿದೆ. ಮನುಷ್ಯನಿಗೆ ಮೆದುಳು ಬೇಗನೇ ಬೆಳೆಯಬೇಕು, ಆದುದರಿಂದ ಕಾರ್ಬೋಹೈಡ್ರೇಟ್ ಅಧಿಕ ಪ್ರಮಾಣದಲ್ಲಿ ಅಗತ್ಯವಿದೆ.

ಸ್ತನ್ಯಪಾನ ಅಥವಾ ಎದೆ ಹಾಲುಣಿಸುವ ಮೂಲಕ ಶಾರೀರಿಕವಾದ ಕಾರ್ಯ ಅಥವಾ ನಂಟು ಮಾತ್ರವಲ್ಲ. ಇತ್ತೀಚಿನ ಸಂಶೋಧನೆಗಳ ಪ್ರಕಾರ ಎದೆ ಹಾಲು ಮಾನಸಿಕವಾಗಿಯೂ, ಪರಸ್ಪರ ಬಂಧಕ್ಕೆ ಕೂಡ ಅತ್ಯಗತ್ಯವಾಗಿದೆ. ಇದೊಂದು ಅದ್ಭುತವಾದ ವಿಷಯ. ತಾಯಿಯ ಸ್ತನ, ಮಗು ಚೀಪುವ ಆ ಸಂದರ್ಭದಲ್ಲಿ ಮೊಲೆ ತೊಟ್ಟಿನ ಸುತ್ತಲಿರುವ ಕೋಶಗಳು ಉದ್ದೀಪನಗೊಂಡು ಆಕ್ಸಿಟೋಸಿನ್ (oxytocin) ಎಂಬ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಈ ಉತ್ಪತ್ತಿಯಾದ ‘ಆಕ್ಸಿಟೋಸಿನ್’ ಮೊಲೆ ಹಾಲಿನ ಮೂಲಕ ಮಗುವಿಗೆ ಲಭಿಸುತ್ತದೆ. ಒಂದು ಮಗುವಿಗೆ ತನ್ನ ತಾಯಿಯ ಮೂಲಕ ಸಿಗಬೇಕಾದ ಪ್ರಮಾಣದಲ್ಲಿ ಆಕ್ಸಿಟೋಸಿನ್ ಸಿಕ್ಕಾಗ ಮಾತ್ರ ಆ ಎರಡು ಜೀವಗಳ ನಡುವಿನ ಸಂಬಂಧವು ಬಹಳ ಉತ್ತಮವಾಗಿರುತ್ತದೆ.

ಎದೆಹಾಲೂಡಿಸುವ ಉಪಯೋಗಗಳು:
ಎದೆಹಾಲು ಪೌಷ್ಟಿಕ ಆಹಾರವಷ್ಟೇ ಅಲ್ಲ- ಅದು ತಾಯಿ ಮತ್ತು ಮಗುವಿನ ಆರೋಗ್ಯವನ್ನು ಹೆಚ್ಚಿಸುತ್ತದೆ:
ಮಗುವಿನ ಮೊದಲ ಆರು ತಿಂಗಳ ಕಾಲ ಕೇವಲ ನಿಮ್ಮ ಎದೆಹಾಲನ್ನಷ್ಟೇ ನೀಡುವುದು ಒಳ್ಳೆಯದು. ಇದು ವಾಂತಿ ಬೇಧಿ ಸಮಸ್ಯೆಯಿಂದ ಮಗುವನ್ನು ರಕ್ಷಿಸುತ್ತದೆ. ಅದನ್ನು ಜೀರ್ಣಿಸಿಕೊಳ್ಳುವುದು ಸುಲಭ. ಇದರಿಂದ ಮಲಬದ್ಧತೆಯುಂಟಾಗುವುದಿಲ್ಲ. ಅಲ್ಲದೆ ಮಗುವನ್ನು ವಾಂತಿಬೇಧಿಯಿಂದ ರಕ್ಷಿಸುತ್ತದೆ.
ಎದೆ ಹಾಲೂಡಿಸುವುದರಿಂದ ಅದು ಅಸ್ತಮಾ ಮತ್ತು ಕಿವಿಯ ಸೋಂಕಿನಿಂದ ಮಗುವನ್ನು ರಕ್ಷಿಸುತ್ತದೆ. ಮೂಗು ಮತ್ತು ಬಾಯಿಯಲ್ಲಿ ಲೋಳೆ ಪದರವನ್ನು ಸೃಷ್ಟಿ ಮಾಡುವ ಮೂಲಕ ಅದು ಸೋಂಕನ್ನು ದೂರವಿಡುತ್ತದೆ.

ಹಸುವಿನ ಹಾಲು ಅನೇಕ ಮಕ್ಕಳಲ್ಲಿ ಅಲರ್ಜಿಗೆ ಕಾರಣವಾಗಬಹುದು. ಎದೆಹಾಲು ನೂರಕ್ಕೆ ನೂರರಷ್ಟು ಸುರಕ್ಷಿತ. ಎದೆ ಹಾಲು ಕುಡಿದ ಮಕ್ಕಳು ಮುಂದಿನ ವರ್ಷಗಳಲ್ಲಿ ಧಡೂತಿ ದೇಹದವರಾಗುವ ಸಾಧ್ಯತೆ ಕಡಿಮೆ- ತಮಗೆ ಬೇಕಾದಷ್ಟನ್ನು ಮಾತ್ರ ಕುಡಿದು ಚಿಕ್ಕ ವಯಸ್ಸಿನಿಂದಲೇ ಹೆಚ್ಚಿನ ತೂಕವನ್ನು ಹೊಂದುವುದಿಲ್ಲ.

ಸ್ತನ್ಯಪಾನ ಮಾಡಿದ ಮಕ್ಕಳಲ್ಲಿ ಮುಂದಿನ ಜೀವನದಲ್ಲಿ ರಕ್ತ ಕ್ಯಾನ್ಸರ್‌, ಟೈಪ್‌ 1 ಡಯಾಬಿಟಿಸ್‌ ಮತ್ತು ಏರು ರಕ್ತದೊತ್ತಡಗಳಿಂದ ಬಳಲುವುದು ಕಡಿಮೆ.ಎದೆಹಾಲಿನಿಂದ ಮಕ್ಕಳ ಬುದ್ದಿಮತ್ತೆ ಹೆಚ್ಚಾಗತ್ತ, ತಾಯಿ ಮತ್ತು ಮಗುವಿನ ನಡುವೆ ಭಾವನಾತ್ಮಕ ಬೆಸುಗೆಯಾಗುವುದಂರಿ ಹೀಗಾಗುತ್ತದೆ. ಅಲ್ಲದೆ ಅನೇಕ ಬಗೆಯ ಫ್ಯಾಟಿ ಆಸಿಡ್‌ಗಳು ಮಗುವಿನ ಬುದ್ದಿಮತ್ತೆ ಬೆಳೆಯಲು ಕಾರಣವಾಗತ್ತೆ..
ಗರ್ಭಧಾರಣೆಯ ಅವಧಿಯಲ್ಲಿ ತೂಕ ಹೆಚ್ಚಾಗಿದ್ದ ಮಹಿಳೆಯು ಮಗುವಿಗೆ ಹಾಲೂಡಿಸುವುದರಿಂದ ಸಾಮಾನ್ಯ ಸ್ಥಿತಿಗೆ ಬರುತ್ತಾರೆ. ಅಲ್ಲದೆ ಸ್ಟ್ರಸ್‌ ಮತ್ತು ಹೆರಿಗೆಯನಂತರದ ರಕ್ತಸ್ರಾವವನ್ನು ತಡೆಗಟ್ಟುವಲ್ಲಿ ಸಹಾಯಕವಾಗುತ್ತದೆ.
ಸ್ತನ ಮತ್ತು ಅಂಡಾಣು ಕ್ಯಾನ್ಸರ್‌ ಗಳ ಅಪಾಯವನ್ನು ಕಡಿಮೆ ಮಾಡತ್ತೆ.
ಎದೆಹಾಲೂಡಿಸುವುದು ಕಡಿಮೆ ಖರ್ಚಿನ, ಅನುಕೂಲಕರವಾದ ವಿಧಾನ ದುಬಾರಿ ಫರ್ಮುಲಾಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಖರ್ಚಿನದ್ದು ಎದೆಹಾಲು. ಮಗುವಿನೊಂದಿಗೆ ತಾಯಿಗೆ ಭಾವನಾತ್ಮಕ ಅನುಬಂಧ ಬೆಳೆಯುತ್ತದೆ.
ಮಗುವಿನ ದೈಹಿಕ ಸಂಪರ್ಕದಿಂದ ಮಗುವಿಗೆ ಆನಂದವಾಗುತ್ತದೆ.

ಮಗುವಿಗೆ ಎಂದಿನಿಂದ ಎದೆಹಾಲೂಡಿಸಲು ಆರಂಭಿಸಬೇಕು ?
ಮಗು ಹುಟ್ಟಿದ ತಕ್ಷಣವೇ ಮಗುವಿಗೆ ಎದೆಹಾಲೂಡಿಸಲು ಆರಂಭಿಸಬೇಕು. ಮಗುವನ್ನು ಬಟ್ಟೆಯಿಂದ ಸುತ್ತುವ ಮೊದಲೇ (ಮಗುವನ್ನು ಒರೆಸಿದ ನಂತರ ತಾಯಿಯ ಎದೆಯ ಹತ್ತಿರ ಹಿಡಿಯ ಬೇಕು, ತಾಯಿ ಮಗುವಿನ ನಡುವೆ ಸಂಪರ್ಕವೇರ್ಪಡಬೇಕು. ಇದು ಎದೆಹಾಲು ಸರಾಗವಾಗಿ ಹರಿಯುವುದನ್ನು ಪ್ರಚೋದಿಸುತ್ತದೆ. ಅಲ್ಲದೆ ತಾಯಿ ಮತ್ತು ಮಗುವಿನ ನಡುವಿನ ಭಾವನಾತ್ಮಕ ನಂಟು ಬೆಳೆಯಲು ಸಹಾಯಕವಾಗುತ್ತದೆ.
ಮಗುವಿಗೆ ಎದೆಹಾಲೂಡಿಸುವುದನ್ನು ಬೇಗ ಆರಂಭಿಸಬೇಕು ಏಕೆ?ಅದಕ್ಕೆ ನಾಲ್ಕು ಪ್ರಮುಖ ಕಾರಣಗಳಿವೆ:
ಮಗುವು ಮೊದಲ ೩೦ ರಿಂದ ೬೦ ನಿಮಿಷಗಳ ಕಾಲ ಅತ್ಯಂತ ಚಟುವಟಿಕೆಯಿಂದ ಇರುತ್ತದೆ
ಈ ಸಮಯದಲ್ಲಿ ಮಗುವಿನ ಹೀರುವಿಕೆಯ ಪ್ರತಿಕ್ರಿಯೆ ಅತ್ಯಂತ ಹೆಚ್ಚಿರುತ್ತದೆ.
ಬೇಗ ಶುರುಮಾಡಿದಷ್ಟು ಯಶಸ್ವಿ ಎದೆಹಾಲೂಡಿಸುವಿಕೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಕೊಲಸ್ಟ್ರ, ಅಂದರೆ ಮೊದಲ ಹಾಲು ಎದೆಯಿಂದ ಬರುವ ಹಳದಿ ದ್ರವಕ್ಕೆ ಸೋಂಕುಗಳಿಂದ ಮಗುವನ್ನು ರಕ್ಷಿಸುವ ಶಕ್ತಿಯಿದೆ. ಇದು ಬಹುತೇಕ ರೋನಿರೋಧಕ ಲಸಿಕೆ ಇದ್ದಂತೆ.
ಇದರಿಂದ ಎದೆ ಬಾವು, ನೋವು ಬರುವುದಿಲ್ಲ ಮತ್ತು ಹೆರಿಗೆಯ ನಂತರದ ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ.

ಸಿಸೇರಿನ್‌ ಸೆಕ್ಷನ್‌ ಹೆರಿಗೆಯಾದ ಮಹಿಳೆಯರು ಮಗುವಿಗೆ ಎದೆಹಾಲೂಡಿಸಬಹುದೇ?
ಶಸ್ತ್ರಚಿಕಿತ್ಸೆಯಾದ ನಾಲ್ಕುತಾಸುಗಳ ನಂತರ ಎದೆಹಾಲೂಡಿಸಬೇಕು ಅಥವಾ ಅರವಳಿಕೆಯ ಪ್ರಭಾವ ಕಡಿಮೆಯಾದ ನಂತರ ಹಾಲೂಡಿಸಿ, ನೀವು ಮಲಗಿಯೇ ಒಂದು ಕಡೆ ಹೊರಳಿ ಮತ್ತು ಹಾಲೂಡಿಸಲು ಪ್ರಾರಂಭಿಸಿ, ಅಥವಾ ನಿಮ್ಮ ಹೊಟ್ಟೆಯ ಮೇಲೆ ಮಲಗಿಸಿಕೊಂಡು ಹಾಲೂಡಿಸಿ. ಸಿಸರಿನ್‌ ಸೆಕ್ಷನ್‌ ಹೆರಿಗೆಯಾದ ಎಲ್ಲ ಮಹಿಳೆಯರು ಯಶಸ್ವಿಯಾಗಿ ಹಾಲೂಡಿಸಬಹುದು.

ಮಗುವಿಗೆ ಎಷ್ಟು ಕಾಲದವರೆಗೆ ಹಾಲೂಡಿಸಬೇಕು ?
ಮಗುವಿಗೆ ಆರು ತಿಂಗಳು ತುಂಬುವವರೆಗೆ ಬರಿ ಎದೆಯ ಹಾಲನ್ನೇ ಕುಡಿಸಬೇಕು. ನಂತರ ಮಗುವಿಗೆ ಎರಡು ವರ್ಷಗಳು ಅಥವಾ ಅದಕ್ಕೂ ಹೆಚ್ಚುಕಾಲ ಎದೆಹಾಲೂಡಿಸಬಹುದು.

ಮಗುವಿಗೆ ಹಾಲೂಡಿಸಿದ ಮೇಲೂ ಹಾಲು ಸೋರುತ್ತಿದ್ದರೆ ಏನು ಮಾಡಬೇಕು ?
ಇದು ಅತ್ಯಂತ ಸಹಜ ಮತ್ತು ತಾತ್ಕಾಲಿಕವಾದ ಸಮಸ್ಯೆ. ಹಾಗೊಂದು ವೇಳೆ ಸೋರುತ್ತಿದ್ದರೆ ನಿಮ್ಮ ಭುಜವನ್ನು ಎದೆಯ ಹೊರವಲಕ್ಕೆ ಒತ್ತಿಕೊಳ್ಳಿ. ಇದರಿಂದ ಹಾಲು ಸೋರುವುದು ಕಡಿಮೆಯಾಗಬಹುದು.

ತಾನು ಅನಾರೋಗ್ಯಪೀಡಿತಾಗಿದ್ದಾಗ್ಯೂ ಕೂಡ ತಾಯಿ ಮಗುವಿಗೆ ಹಾಲೂಡಿಸಬಹುದೇ ?
ಹೌದು. ಬಹುತೇಕ ರೋಗಗಳು ಮಕ್ಕಳ ಮೇಲೆ ಪರಿಣಾಮ ಬೀರುವುದಿಲ್ಲ. ಟೈಫಾಯ್ಡ್‌, ಮಲೇರಿಯಾ, ಕ್ಷಯ, ಜಾಂಡೀಸ್‌ ಅಥವಾ ಕುಷ್ಠರೋಗಗಳಿದ್ದಾಗಲೂ ಎದೆಹಾಲೂಡಿಸುವುದನ್ನು ನಿಲ್ಲಿಸುವ ಅಗತ್ಯವಿಲ್ಲ.
ಅತಿಸಾರ ಮತ್ತು ನ್ಯಮೊನಿಯಾದಂತಹ ರೋಗಗಳಲ್ಲಿ ಎಳೆಯ ಮಕ್ಕಳು ಅತ್ಯಂತ ಅಪಾಯಕ್ಕೊಳಪಡುತ್ತಾರೆ.

ಈ ಲೇಖನ ನಿಮಗೆ ಇಷ್ಟವಾದರೇ ಇತರಿಗೆ ಶೇರ್ ಮಾಡಿ ಇದರ ಬಗ್ಗೆ ಆರಿಯಲು ಸಹಕರಿಸಿ

Comments are closed.