ಕರ್ನಾಟಕ

ಸಾಮಾನ್ಯವಾಗಿ ಕೆಲವು ಪುರುಷರಲ್ಲಿ ಲೈಂಗಿಕ ಆಸಕ್ತಿ ಕಡಿಮೆ ಇರಲು ಮೂಲ ಕಾರಣ ಗೊತ್ತೇ..?

Pinterest LinkedIn Tumblr

man_female_sex

ಮಂಗಳೂರು: ಲೈಂಗಿಕ ಬಯಕೆಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಅಷ್ಟೇ ಅಲ್ಲದೆ ಅದೇ ವ್ಯಕ್ತಿಯ ಜೀವನದಲ್ಲಿ ಸಹ ಕಾಲಕ್ಕೆ ಅನುಗುಣವಾಗಿ ಇದು ಬದಲಾಗುತ್ತಾ ಸಾಗುತ್ತದೆ. ಸಾಮಾನ್ಯವಾಗಿ ಕಡಿಮೆ ಲೈಂಗಿಕ ಆಸಕ್ತಿಯು ಸಾಮಾನ್ಯವಾಗಿ ಪುರುಷರಲ್ಲಿ ಸಮಸ್ಯೆಯಾಗಿ ಪರಿಗಣಿಸಲ್ಪಟ್ಟಿರುವುದಿಲ್ಲ. ಆದರೂ ಲೈಂಗಿಕಾಸಕ್ತಿಯು ಕಡಿಮೆಯಾಗುವುದಕ್ಕೆ ಯಾವುದೇ ಸ್ಪಷ್ಟ ಕಾರಣಗಳು ಇಲ್ಲದಿದ್ದಲ್ಲಿ ಮತ್ತು ಅದರಿಂದ ಆತನಿಗೆ ಅಂದರೆ ಆತನ ಸಂಸಾರದಲ್ಲಿ ಸಮಸ್ಯೆಗಳು ಉಂಟಾದರೆ, ಆಗ ಅಂತಹವರು ವೈದ್ಯರ ಸಲಹೆಯನ್ನು ಪಡೆಯಬೇಕಾಗುತ್ತದೆ.

ಕಾಮಾಸಕ್ತಿ ಕಡಿಮೆ ಇರುವುದು ಎಂದರೇನು?
ಕಡಿಮೆ ಕಾಮಾಸಕ್ತಿ ಅಥವಾ ಕಾಮವಾಂಛೆ ಎಂಬುದು ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಡಿಮೆಯಾಗುವುದನ್ನು ಸೂಚಿಸುತ್ತದೆ. ಕಾಮಾಸಕ್ತಿ ಅಥವಾ ಲೈಂಗಿಕ ಬಯಕೆಯು ಜೈವಿಕ, ಸಂಬಂಧ ಮತ್ತು ವೈಯಕ್ತಿಕ ಅಂಶಗಳ ಮಿಶ್ರಣವನ್ನು ಅವಲಂಬಿಸಿರುತ್ತದೆ.

ಪುರುಷರಲ್ಲಿ ಕಡಿಮೆ ಕಾಮಾಸಕ್ತಿಗೆ ಕಾರಣಗಳೇನು?
ಪುರುಷರಲ್ಲಿನ ಕಾಮಾಸಕ್ತಿಯ ಬದಲಾವಣೆಗಳು ಜೈವಿಕ ಮತ್ತು ಮನೋವೈಙ್ಞಾನಿಕ ಅಂಶಗಳಿಂದ ಉಂಟಾಗಬಹುದು. ಬನ್ನಿ ಅವು ಯಾವುವು ಎಂದು ನೋಡೋಣ.
1. ಒತ್ತಡ: ಜೀವನದಲ್ಲಿ ಒತ್ತಡಕ್ಕೆ ಗುರಿಯಾದವರಿಗೆ ಆಲೋಚನೆಯಲ್ಲ ಆ ಒತ್ತಡಕ್ಕೆ ಕಾರಣವಾದ ಅಂಶದ ಮೇಲೆ ಇರುತ್ತದೆ. ಅಂತಹವರು ಒತ್ತಡದ ಪರಿಣಾಮವಾಗಿ ಸುಸ್ತು, ಅತೃಪ್ತಿ ಮತ್ತು ಇತರೆ ಅಂಶಗಳ ನಡುವೆ ಸಿಲುಕಿ ಕಾಮಾಸಕ್ತಿಯನ್ನು ಕಳೆದುಕೊಂಡುಬಿಡುತ್ತಾರೆ. ಅಧಿಕ ಒತ್ತಡವು ಹಾರ್ಮೋನ್‌ಗಳ ಮಟ್ಟದಲ್ಲಿ ಏರುಪೇರು ಮಾಡುತ್ತದೆ ಮತ್ತು ಅಪಧಮನಿಗಳನ್ನು ಕಿರಿದುಗೊಳಿಸುವ ಸಾಧ್ಯತೆ ಇರುತ್ತದೆ. ಅಪಧಮನಿಗಳ ಕಿರಿದಾದರೆ ಅವು ರಕ್ತದ ಪ್ರವಹಿಸುವಿಕೆಯನ್ನು ನಿರ್ಬಂಧಿಸುತ್ತದೆ ಮತ್ತು ಇದರಿಂದ ಸಂಭವನೀಯ ನಿಮಿರುವಿಕೆಯ ಅಪಸಾಮಾನ್ಯ ಕಂಡುಬರಬಹುದು.

2. ಕಡಿಮೆ ಟೆಸ್ಟೋಸ್ಟೀರಾನ್ ಮಟ್ಟಗಳು: ಟೆಸ್ಟೋಸ್ಟೀರಾನ್ ವೃಷಣಗಳಲ್ಲಿ ಕಂಡು ಬರುವ ಒಂದು ಪ್ರಮುಖ ಪುರುಷ ಹಾರ್ಮೋನ್ ಆಗಿದೆ. ಟೆಸ್ಟೋಸ್ಟೀರಾನ್ ಸ್ನಾಯುಗಳ ನಿರ್ಮಾಣಕ್ಕೆ, ವೀರ್ಯ ಉತ್ಪಾದನೆಯನ್ನು ಉದ್ದೀಪಿಸಲು ಮತ್ತು ಮೂಳೆ ದ್ರವ್ಯ ವರ್ಧಿಸಲು ಸಹಾಯ ಮಾಡುತ್ತದೆ. ಟೆಸ್ಟೋಸ್ಟೀರಾನ್ ಮಟ್ಟವು ವ್ಯಕ್ತಿಯ ಕಾಮಾಸಕ್ತಿಯನ್ನು ನಿರ್ಧರಿಸಲು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಟೆಸ್ಟೋಸ್ಟೀರಾನ್ ಮಟ್ಟವು ಕಡಿಮೆಯಾದರೆ (ಆಂಡ್ರೋಜೆನ್ ಕೊರತೆ) ಆ ವ್ಯಕ್ತಿಯ ಕಾಮಾಸಕ್ತಿ ಕಡಿಮೆಯಾಗುತ್ತದೆ. ಟೆಸ್ಟೋಸ್ಟೀರಾನ್ ಮಟ್ಟವು ವಯಸ್ಸಾಗುತ್ತ ಕಡಿಮೆಯಾಗುತ್ತದೆ. ಆದರೂ ಇದು ಗಣನೀಯವಾಗಿ ಕಡಿಮೆಯಾಗುವುದು ಲೈಂಗಿಕಾಸಕ್ತಿಯು ಕಡಿಮೆಯಾಗಲು ಕಾರಣವಾಗುತ್ತದೆ.

3. ಕೆಲವು ಔಷಧಿಗಳು: ರಕ್ತದೊತ್ತಡ ಮತ್ತು ಖಿನ್ನತೆ ನಿವಾರಣೆಗೆ ವೈದ್ಯರು ಶಿಫಾರಸು ಮಾಡುವ ಔಷಧಿಗಳು ಸಹ ಅದನ್ನು ಸೇವಿಸುವ ವ್ಯಕ್ತಿಯ ಲೈಂಗಿಕಾಸಕ್ತಿಯ ಮೇಲೆ ಪರಿಣಾಮ ಬೀರಬಹುದು.

4. ಖಿನ್ನತೆ: ಖಿನ್ನತೆಯು ವ್ಯಕ್ತಿಯ ವೈಯಕ್ತಿಕ ಜೀವನದ ಎಲ್ಲಾ ದೃಷ್ಟಿಕೋನಗಳ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಲೈಂಗಿಕ ಆಸಕ್ತಿ ಹೊರತಲ್ಲ. ಸೆಲೆಕ್ಟಿವ್ ಸಿರೊಟೋನಿನ್ ರಿಅಪ್ಟೇಕ್ ಇನ್ಹಿಬಿಟರ್‌ಗಳಂತಹ (SSRI) ಖಿನ್ನತೆ ಕಡಿಮೆ ಮಾಡುವ ಆಂಟಿಡಿಪ್ರೆಸೆಂಟ್‌ಗಳು ಲೈಂಗಿಕಾಸಕ್ತಿಯನ್ನು ಕಡಿಮೆ ಮಾಡುತ್ತವೆ.

5. ದೀರ್ಘಕಾಲದಿಂದ ಕಾಡುತ್ತಿರುವ ರೋಗಗಳು: ದೀರ್ಘಕಾಲದಿಂದ ಕಾಡುವ ರೋಗಗಳು, ಅದರ ರೋಗ ಲಕ್ಷಣಗಳು ಮತ್ತು ನೋವು ಎಲ್ಲವೂ, ಆ ವ್ಯಕ್ತಿಯು ಲೈಂಗಿಕ ಕ್ರಿಯೆಯ ಕುರಿತಾಗಿ ಯೋಚನೆ ಮಾಡಲು ಸಹ ಅವಕಾಶ ನೀಡುವುದಿಲ್ಲ. ಹೀಗೆ ಈ ರೋಗಗಳು ಕಾಮಾಸಕ್ತಿಯನ್ನು ಕಡಿಮೆ ಮಾಡಿಬಿಡುತ್ತವೆ.

ಕಡಿಮೆ ಕಾಮಾಸಕ್ತಿಯನ್ನು ಹೇಗೆ ನಿರ್ಣಯಿಸಲಾಗುತ್ತದೆ : ಒಂದು ವೇಳೆ ನಿಮಗೆ ಈ ಸಮಸ್ಯೆಯಿದೆ ಎಂದು ವೈದ್ಯರ ಬಳಿಗೆ ಹೋದರೆ, ಅವರು ಈ ಸಮಸ್ಯೆಯ ಹಿಂದೆ ಇರುವ ಕಾರಣಗಳನ್ನು ಹುಡುಕುವ ಪ್ರಯತ್ನ ಮಾಡಬಹುದು.

ಕಾಮಾಸಕ್ತಿ ಕಡಿಮೆಯಾಗಿದೆ ಎಂಬುದನ್ನು ಈ ಕೆಳಕಂಡ ಹಂತಗಳ ಮೂಲಕ ಕಂಡು ಹಿಡಿಯಬಹುದು:
* ವ್ಯಕ್ತಿಯ ವೈದ್ಯಕೀಯ ಇತಿಹಾಸ ಮತ್ತು ಅವರು ತೆಗೆದುಕೊಳ್ಳುತ್ತಿರುವ ಔಷಧಿಗಳು
* ಒಂದು ಭೌತಿಕ ಪರೀಕ್ಷೆ
* ರಕ್ತ ಪರೀಕ್ಷೆಗಳು

ಪುರುಷರಲ್ಲಿ ಲೈಂಗಿಕಾಸಕ್ತಿ ಕಡಿಮೆಯಾಗುವಿಕೆಗೆ ಹೇಗೆ ಚಿಕಿತ್ಸೆ ನೀಡಲಾಗುತ್ತದೆ:
ಕಡಿಮೆ ಲೈಂಗಿಕಾಸಕ್ತಿಗೆ ಚಿಕಿತ್ಸೆ ನೀಡುವುದೆಂದರೆ ಅದು ಲೈಂಗಿಕಾಸಕ್ತಿಯನ್ನು ಕಡಿಮೆ ಮಾಡಲು ಕಾರಣವಾಗಿರುವ ಅಂಶಗಳಿಗೆ ನೀಡುವ ಚಿಕಿತ್ಸೆಯಾಗಿರುತ್ತದೆ:
ನಿಮ್ಮ ಲೈಂಗಿಕಾಸಕ್ತಿಗೆ ನೀವು ಈಗ ಸೇವಿಸುತ್ತಿರುವ ಔಷಧಿಯೇ ಕಾರಣವೆಂದು ತಿಳಿದು ಬಂದಲ್ಲಿ ಆ ಔಷಧಿಯನ್ನು ಬದಲಿಸಲು ಸಲಹೆ ನೀಡಬಹುದು. ಒಂದು ವೇಳೆ ರಕ್ತದಲ್ಲಿ ಆಂಡ್ರೋಜೆನ್ ಕೊರತೆಯು (ಕಡಿಮೆ ಟೆಸ್ಟೋಸೀರೋನ್) ಕಂಡು ಬಂದಲ್ಲಿ, ಟೆಸ್ಟೋಸೀರೋನ್ ಬದಲಿಸುವ ಥೆರಪಿಯ ಅಗತ್ಯವಿರುತ್ತದೆ.
ಒಂದು ವೇಳೆ ಇದಕ್ಕೆ ಒತ್ತಡವೇ ಕಾರಣವೆಂದು ತಿಳಿದು ಬಂದಲ್ಲಿ, ಒತ್ತಡವನ್ನು ನಿರ್ವಹಿಸುವ ತಂತ್ರಗಳನ್ನು ಅನುಸರಿಸಬೇಕಾಗುತ್ತದೆ.
ಒಂದು ವೇಳೆ ನಿಮ್ಮ ಲೈಂಗಿಕಾಸಕ್ತಿ ಕಡಿಮೆಯಾಗಲು ನಿಮ್ಮ ವೈವಾಹಿಕ ಸಂಬಂಧಗಳಲ್ಲಿನ ಸಮಸ್ಯೆಗಳಂತಹ ಮನೋವೈಜ್ಞಾನಿಕ ಸಮಸ್ಯೆಗಳು ಇದ್ದಲ್ಲಿ ತಪ್ಪದೆ ಒಬ್ಬ ಥೆರಪಿಸ್ಟ್ ಅಥವಾ ಆಪ್ತಸಲಹೆಕಾರರನ್ನು ಭೇಟಿಯಾಗಿ ಅವರಿಂದ ಆಪ್ತಸಲಹೆಯನ್ನು ಪಡೆಯಿರಿ.

ಮುಂದಿನ ಹಂತಗಳು – ಕೆಳಗಿನ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಕಾಮಾಸಕ್ತಿಯನ್ನು ಸುಧಾರಿಸಿಕೊಳ್ಳಬಹುದು:
* ಪೌಷ್ಟಿಕ ಆಹಾರ ಸೇವಿಸುವುದರ ಜೊತೆಗೆ ಆರೋಗ್ಯಕರ ಜೀವನ ಅಳವಡಿಸಿಕೊಳ್ಳಿ
* ನಿಮಗೆ ಅಗತ್ಯವಾದಷ್ಟು ನಿದ್ದೆಯನ್ನು ತಪ್ಪದೆ ಮಾಡುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.
* ನಿಮ್ಮ ಒತ್ತಡದ ಮಟ್ಟವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ.

Comments are closed.