ವೀಡಿಯೋ ವರದಿಗಳು

ಮಹಿಳೆಯ ಕಿವಿಯೊಳಗೆ ಸೇರಿದ್ದ ಜಿರಲೆಯನ್ನು ಕೊನೆಗೂ ಹೊರತೆಗೆದ ವೈದ್ಯರು …ಇಲ್ಲಿದೆ ವೀಡಿಯೊ

Pinterest LinkedIn Tumblr

https://youtu.be/B51heIdSp5A

ಬೀಜಿಂಗ್: ಕಿವಿಯೊಳಗೆ ಸಣ್ಣದೊಂದು ಇರುವೆ ಹೋದ್ರೂ ಕಿರಿಕಿರಿಯಾಗುತ್ತದೆ. ಇನ್ನು ದೊಡ್ಡ ಜಿರಲೆ ಹೋದ್ರೆ ಹೇಗಾಗಬೇಡ. ಹೀಗೆ ಮಹಿಳೆಯೊಬ್ಬರ ಕಿವಿಯೊಳಗೆ ಸೇರಿಕೊಂಡಿದ್ದ ದೊಡ್ಡ ಜಿರಲೆಯನ್ನ ವೈದ್ಯರು ಹೊರತೆಗೆಯುವ ವಿಡಿಯೋವನ್ನ ನೋಡಿದ್ರೆ ಮೈ ಜುಮ್ಮೆನ್ನುತ್ತದೆ.

ಸೆಂಟ್ರಲ್ ಚೀನಾದಲ್ಲಿ ಮಹಿಳೆಯೊಬ್ರು ತುಂಬಾ ಕಿವಿ ನೋವು ಅಂತ ಆಸ್ಪತ್ರೆಗೆ ಹೋಗಿದ್ರು. ವೈದ್ಯರು ಕಿವಿಯನ್ನ ಸೂಕ್ಷ್ಮವಾಗಿ ನೋಡಿದಾಗ ಜಿರಲೆ ಇನ್ನೂ ಜೀವಂತವಾಗಿ ತನ್ನ ಕಾಲುಗಳನ್ನ ಆಡಿಸುತ್ತಾ ಕಿವಿಯೊಳಗಿತ್ತು. ನಂತರ ವೈದ್ಯರು ಆ ಮಹಿಳೆಗೆ ಅರವಳಿಕೆ ಕೊಟ್ಟು ಚಿಮುಟವನ್ನ ಬಳಸಿ ಜಿರಲೆ ಹೊರತೆಗೆದಿದ್ದಾರೆ.

ಏನೋ ನನ್ನ ಕಿವಿಯೊಳಗೆ ಹಾರಿಹೋಯ್ತು. ನಂತರ ಗುಂಯ್ ಅಂತ ಶಬ್ದ ಮಾಡ್ತಿತ್ತು. ನಾನು ಅದನ್ನ ಕೈಯಲ್ಲಿ ಮುಟ್ಟಲು ಪ್ರಯತ್ನಿಸಿದೆ. ಒಳಗೆ ಏನೋ ಇದೆ ಅಂತ ಅನುಭವಾವಾಗ್ತಿತ್ತು. ಆದರೆ ಮುಟ್ಟೋಕೆ ಆಗ್ತಿರಲ್ಲಿಲ್ಲ. ಜಿರಲೆಯ ರೆಕ್ಕೆ ಕಿವಿಗೆ ಬಡಿದು ನೋವಾಗ್ತಿತ್ತು ಅಂತ ಮಹಿಳೆ ಚೀನಾದ ಮಾಧ್ಯಮವೊಂದಕ್ಕೆ ತನಗಾದ ಈ ಅನುಭವವನ್ನ ಹಂಚಿಕೊಂಡಿದ್ದಾರೆ.

Comments are closed.