ಬೆಂಗಳೂರು : ಕಾಟನ್ಪೇಟೆಯ ಲಾಡ್ಜ್ ಒಂದರಲ್ಲಿ ಪ್ರಿಯಕರನನ್ನು ಬೆಂಕಿ ಹಚ್ಚಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಆತನ ಪ್ರೇಯಸಿಯನ್ನು ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದಾರೆ. ನವೆಂಬರ್28 ರ ರಾತ್ರಿ ಈ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು ,ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.
ಮೈಸೂರಿನ ಯುವತಿ ಶೃತಿಗೆ ಕಳೆದ ಮೂರು ವರ್ಷಗಳ ಹಿಂದೆ ಪರಿಚಯವಾಗಿದ್ದ ಮನ್ಸೂರ್ ಜೊತೆ ಪ್ರೀತಿ ಚಿಗುರಿತ್ತು. ಪ್ರೀತಿ ಪ್ರಣಯಕ್ಕೆ ತಿರುಗಿದಾಗ ಶೃತಿ ಗರ್ಭಿಣಿಯಾಗಿದ್ದಳು.
ಮದುವೆಯ ಪ್ರಸ್ತಾಪ ಬಂದಾಗ, ಮನ್ಸೂರ್ ನಿರಾಕರಿಸಿದ್ದ. ಶೃತಿ ಕಾಡಿ ಬೇಡಿ ಸತಾಯಿಸಿದರೂ, ಮನ್ಸೂರ್ ಮಾತ್ರ ಯಾವುದೇ ಕಾರಣಕ್ಕೂ ಮದುವೆಯಾಗಲು ಸಾಧ್ಯವಿಲ್ಲ ಎಂದಿದ್ದಾನೆ. ಏನಿಲ್ಲದಿದ್ದರೂ ಮದುವೆಯಾಗಿ ನನ್ನನ್ನು ಬಿಟ್ಟು ಬಿಡು ಎಂದೂ ಶೃತಿ ಗೋಗೆರೆದಿದ್ದಾಳೆ. ಆದರೆ ಮನ್ಸೂರ್ ಮಾತ್ರ ಇದ್ಯಾವುದಕ್ಕೂ ಕರಗಲೇ ಇಲ್ಲ.
ಹೀಗಾಗಿ ಶೃತಿ ಕಳೆದ 27 ರಂದು ಮನ್ಸೂರ್ನನ್ನು ಶ್ರೀ ಕೃಷ್ಣ ಲಾಡ್ಜ್’ಗೆ ಕರೆಸಿ RIVOTRIC ಎಂಬ ಮಾತ್ರೆಯನ್ನು ಜ್ಯೂಸ್’ನಲ್ಲಿ ಹಾಕಿ ಕುಡಿಸಿದ್ದಾಳೆ. ಮಾತ್ರೆಯ ನಶೆಯಿಂದ ಕೆಲವೇ ಕ್ಷಣಗಳಲ್ಲಿ ನಿದ್ದೆಗೆ ಜಾರಿದ ಮನ್ಸೂರ್ ಮೇಲೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚುತ್ತಾಳೆ. ಈ ವೇಳೆ ಶೃತಿ, ಬಾತ್’ರೂಮ್ಸೇರಿಕೊಂಡು ಪ್ರಾಣ ಉಳಿಸಿಕೊಳ್ಳುತ್ತಾಳೆ.
ಶೇಕಡಾ 40 ರಷ್ಟು ಸುಟ್ಟಿದ್ದ ಮನ್ಸೂರ್’ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಡಿಸೆಂಬರ್ 1 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಕಾಟನ್ಪೇಟೆ ಪೊಲೀಸರು ಆರೋಪಿ ಶೃತಿಯನ್ನು ಬಂಧಿಸಿದ್ದಾರೆ.
Comments are closed.