ಪ್ರಮುಖ ವರದಿಗಳು

ಈತ ಕಾಂಗರೂಗೆ ಕಪಾಳ ಮೋಕ್ಷ ಮಾಡಿ ಹೀರೊ ಆದ ! ವೈರಲ್ ಆದ ವೀಡಿಯೊ ನೋಡಿ…

Pinterest LinkedIn Tumblr

ಮೆಲ್ಬರ್ನ್: ಆಸ್ಟ್ರೇಲಿಯಾದಲ್ಲಿ ತನ್ನ ಸಾಕು ನಾಯಿಯನ್ನು ರಕ್ಷಿಸಲು ಮಾಲೀಕನೊಬ್ಬ ಕಾಂಗರೂಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜೂನ್ ತಿಂಗಳಿನಲ್ಲಿ ಕಂಡೋಬೋಲಿನ್ ಎಂಬಲ್ಲಿ ಹಂದಿ ಬೇಟೆಯಾಡಲು ಗ್ರೇಗ್ ಟಾಕಿನ್ಸ್ ತನ್ನ ಸ್ನೇಹಿತರ ಜೊತೆ ತೆರಳಿದ್ದಾನೆ. ಈ ವೇಳೆ ಸಾಕು ನಾಯಿಯೊಂದು ಕಾಂಗರೂ ಕೈಗೆ ಸಿಕ್ಕಿ ಬಿದ್ದಿದೆ. ಈ ನಾಯಿ ಎಷ್ಟೇ ಪ್ರಯತ್ನ ಪಟ್ಟರೂ ಕಾಂಗರೂ ಹಿಡಿತದಿಂದ ಬಿಡಿಸಿಕೊಳ್ಳಲು ಸಾಧ್ಯವೇ ಆಗಿಲ್ಲ.

ಈ ದೃಶ್ಯವನ್ನು ನೋಡಿದ ನಾಯಿಯ ಮಾಲೀಕ ಗ್ರೇಗ್ ಟಾಕಿನ್ಸ್ ಓಡಿಕೊಂಡು ಬಂದು ಕಾಂಗರೂವಿನ ಕಪಾಳಕ್ಕೆ ಸರಿಯಾಗಿ ಭಾರಿಸಿದ್ದಾನೆ. ಬಿದ್ದ ಹೊಡೆತಕ್ಕೆ ಕಾಂಗರೂ ನಾಯಿಯನ್ನು ಬಿಟ್ಟು ಗ್ರೇಗ್ ಜೊತೆ ಕಾದಾಟಕ್ಕೆ ಇಳಿದು ಬಳಿಕ ಓಡಿ ಹೋಗಿದೆ.

ಸ್ನೇಹಿತನ ಸಂತೋಷಕ್ಕೆ ಬೇಟೆ: ಗ್ರೇಗ್ ಸ್ನೇಹಿತ ಕ್ಯಾನ್ಸರ್‍ನಿಂದ ಬಳಲುತ್ತಿದ್ದ್ ಆತನ ಕೊನೆಯ ಆಸೆಯನ್ನು ಈಡೇರಿಸಲು ಹಂದಿ ಬೇಟೆ ಹೋಗಿದ್ದರು. ಕಳೆದ ವಾರ ಸ್ನೇಹಿತ ಮೃತಪಟ್ಟಿದ್ದಾನೆ.

ಬೆದರಿಕೆ ಕರೆ: ಆನ್‍ಲೈನ್ ನಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಾಣಿದಯಾ ಸಂಘದ ಕಾರ್ಯಕರ್ತರು ಗ್ರೇಗ್‍ಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದು ರಕ್ಷಣೆಗೆ ಗ್ರೇಗ್ ಪೊಲೀಸರ ಮೊರೆ ಹೋಗಿದ್ದಾರೆ.

Comments are closed.