ಕ್ರೀಡೆ

ಸಾನಿಯಾಗೆ ಹುಟ್ಟುವ ಮಗು ಯಾವ ದೇಶದ ಪರ ಆಡುತ್ತೆ …? ಈ ಪ್ರಶ್ನೆಗೆ ನೀಡಿದ ಉತ್ತರ ಇಲ್ಲಿದೆ…..

Pinterest LinkedIn Tumblr

sania-mirza-shoaib-malik

ನವದೆಹಲಿ: ಸ್ಟಾರ್ ಟೆನಿಸ್ ತಾರೆ ಸಾನಿಯಾ ಮಿರ್ಜಾ ಭಾರತದವರು. ಅವರು ಮದುವೆಯಾಗಿದ್ದು ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್. ಇವರಿಬ್ಬರಿಗೂ ಮಗುವಾಗಿ ಆ ಮಗು ಕ್ರೀಡಾಪಟುವಾದರೆ ಅದು ಯಾವ ದೇಶದ ಪರವಾಗಿ ಆಡುತ್ತದೆ? ಇಂಥದ್ದೊಂದು ಪ್ರಶ್ನೆಯನ್ನು ಝೀ ಟಿವಿಯಲ್ಲಿ ಬರುವ ಯಾದೋಂಕಿ ಬಾರಾತ್ ಕಾರ್ಯಕ್ರಮದಲ್ಲಿ ನಿರೂಪಕ ಸಾಜಿದ್ ಖಾನ್, ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಸಾನಿಯಾಗೇ ನೇರವಾಗಿ ಕೇಳಿದ್ದಾರೆ.

ಇದು ಪ್ರತಿಯೊಬ್ಬ ಭಾರತೀಯ ಹಾಗೂ ಪಾಕಿಸ್ತಾನಿಗನ ಪ್ರಶ್ನೆಯಾಗಿದ್ದು, ನೀವಿಬ್ಬರು ಮದುವೆಯಾಗಿ ಆರು ವರ್ಷವಾಗಿದೆ. ನಿಮ್ಮ ಮಗು ಯಾವ ದೇಶವನ್ನು ಪ್ರತಿನಿಧಿಸಲಿದೆ ಎಂದು ಸಾಜಿದ್ ನೇರವಾಗಿಯೇ ಸಾನಿಯಾಗೆ ಪ್ರಶ್ನಿಸಿದ್ದಾರೆ.

ಇದಕ್ಕೆ ಜಾಣತನದ ಉತ್ತರ ಕೊಟ್ಟ ಸಾನಿಯಾ, ‘‘ನಾವಿಬ್ಬರು ಈ ಬಗ್ಗೆ ಇನ್ನೂ ಚರ್ಚಿಸಿಲ್ಲ. ನಾನು ಭಾರತದ ಬಗ್ಗೆ ಹೆಮ್ಮೆ ಉಳ್ಳವಳು. ಶೋಯೆಬ್ ಪಾಕಿಸ್ತಾನದ ಬಗ್ಗೆ ಹೆಮ್ಮೆಯುಳ್ಳವರು. ಆದರೆ, ಅದಕ್ಕಿಂತಲೂ ಮಿಗಿಲಾಗಿ ನಾವು ನಮ್ಮ ದಾಂಪತ್ಯದ ಬಗ್ಗೆ ಹೆಮ್ಮೆ ಹೊಂದಿದವರು’’ ಎಂದಿದ್ದಾರೆ.

Comments are closed.