ಪ್ರಮುಖ ವರದಿಗಳು

ಮಲಗಿದ್ದ ಗರ್ಲ್ ಫ್ರೆಂಡ್ ಮೇಲೆ ಹಾವುಗಳನ್ನೂ ಬಿಟ್ಟ ಯುವಕ ! ಮುಂದೆ ಆದದ್ದು ಏನು…ನೀವೇ ನೋಡಿ

Pinterest LinkedIn Tumblr

https://youtu.be/L2kzsx_bJhQ

ಯುವಕನೊಬ್ಬ ತನ್ನ ಗೆಳೆಯರ ಜೊತೆ ಸೇರಿ ಆರಾಮಾಗಿ ಮಲಗಿದ್ದ ತನ್ನ ಗರ್ಲ್‍ಫ್ರೆಂಡ್ ಮೇಲೆ ಬಾಕ್ಸ್ ನಲ್ಲಿ ತಂದ ಎರಡು ಹೆಬ್ಬಾವುಗಳನ್ನು ಹರಿಯಬಿಟ್ಟಿದ್ದಾನೆ. ಬಳಿಕ `ಬೇಬಿ ಅಲುಗಾಡಬೇಡ ಯಾಕಂದ್ರೆ ನಿನ್ನ ಮೇಲೆ ಎರಡು ಹಾವುಗಳು ಹರಿದಾಡುತ್ತಿವೆ ಎಂದು ಹೇಳಿದ್ದಾನೆ.

ಇದರಿಂದ ಎಚ್ಚರಗೊಂಡ ಆ ಯುವತಿ ಗಾಬರಿಯಿಂದ ಕಿರುಚಾಡಲು ಶುರು ಮಾಡುತ್ತಾಳೆ. ತಕ್ಷಣ ಹಾವುಗಳನ್ನ ತೆಗಿ ಎಂದು ಬಾಯ್‍ಫ್ರೆಂಡ್‍ಗೆ ಹೇಳುತ್ತಾ ಕೈ-ಕಾಲನ್ನು ಅಲ್ಲಾಡಿಸದೆ ಮಗಿದ್ದಲ್ಲೇ ಜೋರಾಗಿ ಕಿರುಚಾಡುತ್ತಾಳೆ. ಆದರೆ ಇತ್ತ ಆಕೆಯ ಪರಿಸ್ಥಿತಿಯನ್ನು ಕಂಡು ಆಕೆಯ ಬಾಯ್‍ಫ್ರೆಂಡ್ ಸೇರಿದಂತೆ ಅಲ್ಲಿದ್ದ ಯುವಕರು ನಗಾಡಿಕೊಂಡು ವಿಡಿಯೋ ಮಾಡಿದ್ದಾರೆ.

ಕೊನೆಗೆ ಗುಂಪಿನಲ್ಲಿದ್ದ ಯುವಕನೊಬ್ಬ ಆ ಎರಡು ಹಾವುಗಳನ್ನು ತೆಗೆಯುತ್ತಾನೆ. ಆದ್ರೂ ಯುವತಿ ಮಾತ್ರ ಅಳುತ್ತಾ ಕಿರುಚಾಡುತ್ತಾಳೆ. ಇದು ತಮಾಷೆಯಲ್ಲ ಅಂತ ಬಾಯ್‍ಫ್ರೆಂಡ್‍ಗೆ ಬೈಯ್ಯುತ್ತಾಳೆ. ನಂತರ ಆಕೆಯ ಬಾಯ್‍ಫ್ರೆಂಡ್ ಅವು ವಿಷಕಾರಿ ಹಾವಲ್ಲ. ಅವು ಕಚ್ಚುವುದಿಲ್ಲ ಅಂತ ಸಮಾಧಾನ ಮಾಡಲು ಮುಂದಾಗುತ್ತಾನೆ. ಈ ವಿಡಿಯೋ ಈಗ ವೈರಲ್ ಆಗಿದ್ದು ಕೆಲವರು ವಿಡಿಯೋ ನೋಡಿ ಖುಷಿ ಪಟ್ಟರೆ, ಇನ್ನೂ ಕೆಲವರು ಇದು ತುಂಬಾ ಕ್ರೂರ ಎಂದು ಹೇಳಿದ್ದಾರೆ.

Comments are closed.