ಆರೋಗ್ಯ

ಜಂಕ್ ಫುಡ್ ತಿಂದು ತೂಕ ಹೆಚ್ಚಿಸಿಕೊಳ್ಳಬೇಡಿ. ಸರಳ ಸುಲಭ ವಿಧಾನ ಅನುಸರಿಸಿ ತೂಕ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸಲಹೆ.

Pinterest LinkedIn Tumblr

healthy_weight_gain

ಮಂಗಳೂರು: ತೂಕ ಹೆಚ್ಚಿದ್ದರೂ ಸಮಸ್ಯೆ ಹಾಗೆಯೇ ತೂಕ ಕಡಿಮೆ ಇದ್ದರೂ ಕೂಡ ಸಮಸ್ಯೆ. ಜನರಿಗೆ ನೋಡಲು ಮೈ ತುಂಬಿಕೊಂಡಿದ್ದರೆ ಅದರ ಅಂದವೇ ಚಂದ.ತೂಕ ಹೆಚ್ಚಿಸಿಕೊಳ್ಳಲು ಸಾಕಷ್ಟು ಹೆಂಗಳೆಯರು ಕಷ್ಟ ಪಡುತ್ತಿರುತ್ತಾರೆ. ಕಡಿಮೆ ತೂಕ ಸಾಕಷ್ಟು ತೊಂದರೆಯನ್ನು ತರುತ್ತದೆ. ಆಯಾಸ, ನಿರುತ್ಸಾಹ ಇವುಗಳಿಗೆಲ್ಲ ಮೈಯಲ್ಲಿ ಶಕ್ತಿ ಇಲ್ಲದಿರುವುದು ಕೂಡ ಕಾರಣವಾಗುತ್ತದೆ.

ಝೀರೋ ಗಾತ್ರದಿಂದ ಹೆಚ್ಚು ಆರೋಗ್ಯಕರ ಮೈಕಟ್ಟನ್ನು ಹೊಂದುವುದು ಕೂಡ ಅಗತ್ಯ. ಕೆಲವರು ಏನು ಮಾಡಿದರೂ ತೂಕ ಹೆಚ್ಚುವುದಿಲ್ಲ.ಇನ್ನು ಕೆಲವರು ಜಂಕ್ ಫುಡ್(ಚಿಪ್ಸ್,ಚಾಕೊಲೆಟ್)ತಿಂದು ಕೊಬ್ಬು ಬೆಳೆಸಿಕೊಳ್ಳುತ್ತಾರೆ. ಆದರೆ ಇದು ದೇಹದ ತೂಕ ಹೆಚ್ಚಿಸುತ್ತದೆ,ದೇಹಕ್ಕೆ ಶಕ್ತಿ ಮಾತ್ರ ಇರುವುದಿಲ್ಲ. ಆದ್ದರಿಂದ ಆರೋಗ್ಯಯುತವಾಗಿ ದಪ್ಪಗಾಗಲು ಇಲ್ಲಿ ಒಂದಿಷ್ಟು ಆಹಾರ ಸಲಹೆಗಳನ್ನು ನೀಡಲಾಗಿದೆ.ನೀವು ಬಳಸಿ ನೋಡಿ. ಮೈಕೈ ತುಂಬಿಕೊಂಡು ಸುಂದರವಾಗುವುದರ ಜೊತೆಗೆ ನಿಮ್ಮ ದೇಹ ಆರೋಗ್ಯಯುತವಾಗಿಯೂ ಇರುತ್ತದೆ. ಸಾಕಷ್ಟು ಶಕ್ತಿ ತುಂಬಿಕೊಳ್ಳುತ್ತದೆ. ದೇಹದ ತೂಕ ಹೆಚ್ಚಿಸಿಕೊಳ್ಳಲು ಕೆಲವು ಮಾಹಿತಿ ನಿಮಗಾಗಿ ನಾವು ನೀಡಿದೆವೆ.

1)ಸಾಲ್ಮನ್ (ಮೀನು): ದಿನಕ್ಕೆ 2 ಅಥವಾ 3 ಸಲ್ಮಾನ್ ಸೇವಿಸುವುದರಿಂದ ದೇಹ ಪ್ರೋಟಿನ್ ಅಂಶವನ್ನು ಹೆಚ್ಚಿಸುತ್ತದೆ.ಇದು ಹೆಚ್ಚು ಪ್ರೋಟೀನ್ ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.

fish

2) ಸೀಗಡಿ ಮೀನು :ನಿಮಗೆ ಸಮುದ್ರ ಆಹಾರಗಳ ಬಗ್ಗೆ ಇಷ್ಟವಿದ್ದಲ್ಲಿ ನೀವು ಪ್ರತಿದಿನ 2 ಭಾರಿಯಾದರೂ ಇದನ್ನು ಸೇವಿಸಲೇಬೇಕು.ಅದರಲ್ಲಿರುವ ಅಗತ್ಯ ಪೋಷಕಾಂಶ ಮತ್ತು ಆಮ್ಲ ನಿಮ್ಮ ದೇಹಕ್ಕೆ ಬೇಕಾದ ಆರೋಗ್ಯಯುತ ಕ್ಯಾಲೋರಿಯನ್ನು ನೀಡಿ ದೇಹ ತೂಕ ಹೆಚ್ಚಲು ಸಹಾಯ ಮಾಡುತ್ತದೆ.

3)ಮೊಟ್ಟೆಗಳು: ಮೊಟ್ಟೆಗಳಲ್ಲಿ ಅಮೈನೋ ಆಮ್ಲ ಹೆಚ್ಚಿನ ಸಾಂದ್ರತೆಯಲ್ಲಿ ಇರುವುದರಿಂದ ಮೊಟ್ಟೆ ತಿಂದರೆ ದೇಹದ ತೂಕ ಹೆಚ್ಚುತ್ತದೆ.ಮೊಟ್ಟೆಯ ಹಳದಿ ಭಾಗದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿರುವುದರಿಂದ ಕ್ಯಾಲೋರಿ ಕೂಡ ಹೆಚ್ಚಿಸುತ್ತದೆ. ದಿನಕ್ಕೆ 2 ಮೊಟ್ಟೆ ತಿಂದರೆ ನಿಮ್ಮ ತೂಕ ಬೇಗ ಹೆಚ್ಚುತ್ತದೆ.

brown_white_egg

4)ಚೀಸ್ : ಸಂಪೂರ್ಣ ಹಾಲಿನ ಕೆನೆಯಿಂದ ಮಾಡಿದ ಕಾಟೇಜ್ ಚೀಸ್ ಸಸ್ಯಾಹಾರಿಗಳಿಗೆ ತೂಕ ಹೆಚ್ಚಿಸಿಕೊಳ್ಳಲು ಸಹಾಯಕ. ಇದರಲ್ಲಿರುವ ಪ್ರೋಟಿನ್ ಆರೋಗ್ಯಕ್ಕೆ ಅತಿ ಅವಶ್ಯಕ.

butter_chesese_god_1

5) ಓಟ್ ಮೀಲ್: ಒಂದು ಬೌಲ್ ಅಷ್ಟು ಓಟ್ ಮೀಲ್ ಅನ್ನು ಬೆಳಗಿನ ತಿಂಡಿಗೆ ತಿಂದರೆ ಅದು ಸಾಕಾಗುವಷ್ಟು ಪೌಷ್ಟಿಕಾಂಶ ನೀಡುತ್ತದೆ. ಇದರಲ್ಲಿರುವ ನಾರಿನಂಶ ದೇಹಕ್ಕೆ ಬೇಕಾದ ಪೌಷ್ಟಿಕಾಂಶವನ್ನು ಸಂಪೂರ್ಣವಾಗಿ ಒದಗಿಸುತ್ತದೆ.ಇದನ್ನು ದ್ರಾಕ್ಷಿ, ನಟ್ಸ್, ಕ್ರೀಂ, ಬಾಳೆಹಣ್ಣು ಇವುಗಳಿಂದ ಅಲಂಕರಿಸಿ ತಿಂದರೆ ಇನ್ನಷ್ಟು ಆರೋಗ್ಯಯುತವಾಗಿ ಇರುತ್ತದೆ.

rice

6) ಬ್ರೌನ್ ರೈಸ್ :ಕಾರ್ಬೋಹೈಡ್ರೆಟ್ ಅಂಶವನ್ನು ಹೊಂದಿರುವ ಬ್ರೌನ್ ರೈಸ್ ಆರೋಗ್ಯಕ್ಕೆ ಒಳ್ಳೆಯದು.ಇದರಲ್ಲಿ ನಾರಿನಂಶ ಹೆಚ್ಚಿರುತ್ತದೆ.ಪ್ರತಿ ದಿನ ಬ್ರೌನ್ ರೈಸ್ ತಿನ್ನುವುದರಿಂದ ಹೆಚ್ಚು ಕಾರ್ಬೋಹೈಡ್ರೇಟ್ ಸಿಗುತ್ತದೆ ಮತ್ತು ತೂಕ ಹೆಚ್ಚುವಂತೆ ಮಾಡುತ್ತದೆ.
7) ಪಾಸ್ತಾ: ಒಂದು ಬೌಲ್ ಪಾಸ್ತಾ ತಿಂದರೆ ಪರಿಪೂರ್ಣ ಆಹಾರ ದೊರೆತಂತೆ.ಇದು ಕೇವಲ ಹೊಟ್ಟೆ ತುಂಬಲು ಮಾತ್ರವಲ್ಲ ದೇಹದ ತೂಕ ಹೆಚ್ಚಿಸುವಲ್ಲಿ ಕೂಡ ಸಹಕರಿಸುತ್ತದೆ.
8) ವ್ಹೀಟ್ ಬ್ರೆಡ್: ಗೋಧಿಯಿಂದ ಮಾಡಿದ ಬ್ರೆಡ್ ನಲ್ಲಿ 13 ರಷ್ಟು ಕ್ಯಾಲೋರಿ ಇರುತ್ತದೆ.ಇದರ ಮೇಲೆ ನಿಮಗೆ ಇಷ್ಟವಾದ ಜಾಮ್, ಮಯೋನೈಸ್ ಅಥವಾ ಕ್ರೀಂ ಲೇಪಿಸಿ ಬೆಳಗ್ಗಿನ ತಿಂಡಿಗೆ ತಿನ್ನಿ ಇದು ನಿಮಗೆ ಫುಲ್ ಎನಿಸುತ್ತದೆ ಮತ್ತು ರುಚಿಕರವಾಗಿಯೂ ಇರುತ್ತದೆ.
9) ಬೀನ್ಸ್; ಸಸ್ಯಹಾರಿಗಳಿಗೆ ಬೀನ್ಸ್ ಸುಲಭ ಆಹಾರ.ಇದನ್ನು ಸಾಸ್ ನೊಂದಿಗೆ ಬೇಯಿಸಿದಾಗ ಇದರಲ್ಲಿ 300 ರಷ್ಟು ಕ್ಯಾಲೋರಿ ಇರುತ್ತದೆ.ಇದು ಕೇವಲ ಪೋಷಕಾಂಶ ಒಳಗೊಂಡ ಆಹಾರ ಮಾತ್ರವಲ್ಲ ಸುಲಭವಾಗಿ ತೂಕ ಹೆಚ್ಚಲು ಕೂಡ ಸಹಾಯಕವಾಗುತ್ತದೆ.
10)ಆಲೂಗಡ್ಡೆ: ಆಲೂಗಡ್ಡೆ ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆ ಅಂಶವನ್ನು ಹೊಂದಿರುತ್ತದೆ.ಇದನ್ನು ಹೆಚ್ಚು ಸೇವಿಸಿದಾಗ ಕೊಬ್ಬು ಶೇಕರಣೆಗೆ ಕಾರಣವಾಗುತ್ತದೆ. ಊಟದ ಜೊತೆಗೆ ಅಥವಾ ಸಲಾಡ್, ಸ್ಯಾಂಡ್ ವಿಚ್ ಜೊತೆಗೆ ಅಲೂ ಬಳಸಿದರೆ ಬೇಗ ತೂಕ ಪಡೆದುಕೊಳ್ಳಬಹುದು.
11)ಗೆಣಸುಗಳು: ಗೆಣಸಿನ ಒಂದು ಸರ್ವಿಂಗ್ ನಲ್ಲಿ 150 ಕ್ಯಾಲೋರಿ ಇರುತ್ತದೆ. ದಿನ ನಿತ್ಯದ ಆಹಾರದ ಜೊತೆಗೆ ಬೇಯಿಸಿದ ಗೆಣಸನ್ನು ಬಳಸಿದರೆ ದೇಹ ತೂಕ ಹೆಚ್ಚುತ್ತದೆ.
12) ಆವಕಾಡೊ (ಬೆಣ್ಣೆ ಹಣ್ಣು ): ಬೆಣ್ಣೆ ಹಣ್ಣು ಎಂದೇ ಹೆಸರು ಪಡೆದಿರುವ ಈ ಹಣ್ಣನ್ನು ಸೂಪ್,ಸಲಾಡ್ ಮತ್ತು ಡಿಪ್ ಗಳಲ್ಲಿ ಬಳಸಬಹುದು.ಆರೋಗ್ಯಕರ ಪೋಷಕಾಂಶಗಳು ಮತ್ತು ಅಗತ್ಯ ಕೊಬ್ಬುಗಳನ್ನು ಹೊಂದಿದ ಇದು ಆರೋಗ್ಯಯುತವಾಗಿ ದೇಹ ತೂಕ ಹೆಚ್ಚು ಮಾಡುವಲ್ಲಿ ಯಶಸ್ವಿಯಾಗುತ್ತದೆ.
13)ಪೀನಟ್ ಬಟರ್: ಏಕಪರ್ಯಾಪ್ತ ಕೊಬ್ಬಿನ ಆಮ್ಲಗಳು ಇದರಲ್ಲಿ ಹೆಚ್ಚಿರುತ್ತದೆ. ದೇಹ ಸರಿಯಾಗಿ ಇರಲು ನ್ಯಾಚುರಲ್ ಪೀನಟ್ ಬಟರ್ ತುಂಬಾ ಉಪಯುಕ್ತ. ಬ್ರೆಡ್ ಮತ್ತು ಬಿಸ್ಕೆಟ್ ಗಳ ಮೇಲೆ ಇದನ್ನು ಹಚ್ಚಿ ತಿನ್ನುವುದರಿಂದ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು.
14) ಅಲ್ಮೊಂಡ್ ಬಟರ್ (ಬಾದಾಮಿ ಬೆಣ್ಣೆ): ಇದರಲ್ಲಿ ದ್ವಿದಳ ಪ್ರೋಟೀನ್ ಮತ್ತು ಅಗತ್ಯ ಕೊಬ್ಬಿನ ಅಂಶಗಳಿರುತ್ತದೆ. ಸಲಾಡ್,ಟೋಸ್ಟ್ ಮತ್ತು ಡೆಸರ್ಟ್ ಗಳಿಗೆ ಬಾದಾಮಿ ಬೆಣ್ಣೆ ಮಿಶ್ರ ಮಾಡಿ ತಿಂದರೆ ಅದು ಆರೋಗ್ಯಕರವಾಗಿರುತ್ತದೆ. ಪ್ರತಿ ದಿನ ಇದನ್ನು ಬಳಸುವುದರಿಂದ ತೂಕ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ.
15) ಆಲೀವ್ ಆಯಿಲ್ (ಎಣ್ಣೆ): ಸಲಾಡ್ ಗೆ ಒಂದು ಹನಿ ಆಲೀವ್ ಎಣ್ಣೆ ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಅಗತ್ಯಯುತ ಕ್ಯಾಲೋರಿ ಜೊತೆಗೆ ಲಿನೋಲಿಯಿಕ್ ಆಮ್ಲ ಕೂಡ ಇರುತ್ತದೆ. ಇದನ್ನು ಪ್ರತಿದಿನ ಬಳಸುವುದರಿಂದ ತೂಕ ಹೆಚ್ಚುವುದರ ಜೊತೆಗೆ ಹೃದಯ ಸಂಬಂಧಿ ಕಾಯಿಲೆಗಳಿಂದ ದೂರ ಇರಬಹುದು. ಬಾದಾಮಿ ನರಗಳ ಬೆಳವಣಿಗೆಗೆ ಬಾದಾಮಿ ತುಂಬಾ ಮುಖ್ಯ. ಇದರ ಜೊತೆಗೆ ದೇಹ ತೂಕ ಹೆಚ್ಚಿಸಲು ಇದು ಸಹಾಯಕ.ಪ್ರತಿದಿನ ಒಂದು ಕೈ ತುಂಬಾ ಬಾದಾಮಿ ತಿಂದರೆ ಅದು ದೈಹಿಕ ಕಾರ್ಯ ಮತ್ತು ನರಗಳ ಸ್ಥಿರತೆಯನ್ನು ಕಾಪಾಡುತ್ತದೆ.
16) ಅಗಸೆ ಬೀಜ (ಫ್ಲಾಕ್ಸ್ ಸೀಡ್ ) : ಅಗಸೆ ಬೀಜದಲ್ಲಿ ಅಗತ್ಯ ಏಕಪರ್ಯಾಪ್ತ ಕೊಬ್ಬಿನ ಅಂಶಗಳಿವೆ.ಇದು ದೈಹಿಕ ಕಾರ್ಯಗಳನ್ನು ಸರಿಯಾಗಿ ಇರುವಂತೆ ನೋಡಿಕೊಳ್ಳುತ್ತದೆ. ಇದನ್ನು ಸ್ವಲ್ಪ ಮಟ್ಟಿಗೆ ಉಪಯೋಗಿಸಿದರೆ ದೇಹ ತೂಕ ಹೆಚ್ಚುತ್ತದೆ. ಗೋಡಂಬಿ ಆರೋಗ್ಯಯುತ ದೇಹಕ್ಕಾಗಿ ಕೈ ತುಂಬಾ ಗೋಡಂಬಿ ತಿನ್ನಬೇಕು. ಇದರಲ್ಲಿರುವ ಎಣ್ಣೆ ಅಂಶ ದಪ್ಪಗಾಗುವಂತೆ ಮಾಡುವುದಷ್ಟೇ ಅಲ್ಲ ಕೂದಲು ಹೊಳೆಯುವಂತೆ ಮಾಡುತ್ತದೆ.
17)ಬಾಳೆಹಣ್ಣು : ಪ್ರತಿದಿನ 2 ಅಥವಾ 3 ಬಾಳೆಹಣ್ಣು ತಿನ್ನುವುದರಿಂದ ದೇಹದ ತೂಕ ಸುಲಭವಾಗಿ ಹೆಚ್ಚುತ್ತದೆ. ಬಾಳೆಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆ ಅಂಶ ಹೆಚ್ಚಿರುತ್ತದೆ. ಇದು ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ದೇಹ ತೂಕವನ್ನು ಹೆಚ್ಚಿಸುತ್ತದೆ.
18) ತೆಂಗಿನ ಹಾಲು; ತೆಂಗಿನ ಹಾಲಿನಲ್ಲಿ ಕ್ಯಾಲೋರಿ ಹೆಚ್ಚಿಸುವ ಗುಣವಿರುತ್ತದೆ. ಪ್ರತಿದಿನ ಸ್ವಲ್ಪ ತೆಂಗಿನ ಹಾಲನ್ನು ಬಳಸಿದರೆ ಆಹಾರಕ್ಕೆ ಫ್ಲೇವರ್ ನೀಡುವುದರ ಜೊತೆಗೆ ತೂಕ ಹೆಚ್ಚಿಸುವಲ್ಲಿ ಸಹಕರಿಸುತ್ತದೆ. ದ್ರಾಕ್ಷಿ ದ್ರಾಕ್ಷಿಯಲ್ಲಿ 99 ರಷ್ಟು ಕ್ಯಾಲೋರಿ ಇರುತ್ತದೆ.ಒಂದು ಕೈ ತುಂಬಾ ತಿಂದರೆ ಅದು ಕ್ಯಾಲೋರಿ ಹೆಚ್ಚಿಸುವುದರ ಜೊತೆಗೆ ದೇಹಕ್ಕೆ ಬೇಕಾದ ಅಗತ್ಯ ನಾರಿನಂಶ ಕೂಡ ದೊರಕುತ್ತದೆ. ಸ್ನಾಕ್ಸ್ ಸಮಯದಲ್ಲಿ ಒಣ ದ್ರಾಕ್ಷಿಯನ್ನು ಬಳಸುವುದರಿಂದ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು.

Comments are closed.