ಪ್ರಮುಖ ವರದಿಗಳು

ಇಂದು ಅಂತ್ಯಗೊಳ್ಳಲಿದೆ ಹಳೆಯ ನೋಟು !

Pinterest LinkedIn Tumblr

note111

ನವದೆಹಲಿ: ಕೇಂದ್ರ ಸರ್ಕಾರ ನಿಷೇಧ ಮಾಡಿರುವ 500 ಮತ್ತು 1000 ರು.ಮುಖಬೆಲೆಯ ಹಳೆಯ ನೋಟುಗಳನ್ನು ಸರ್ಕಾರಿ ಕಚೇರಿಗಳಲ್ಲಿ ಚಲಾವಣೆ ಮಾಡುವ ಅವಧಿ ಬುಧವಾರಕ್ಕೆ ಅಂತ್ಯಗೊಳ್ಳುತ್ತಿದ್ದು, ನಾಳೆಯಿಂದ ಸರ್ಕಾರಿ ಕಚೇರಿಗಳಲ್ಲೂ ಹಳೆಯನೋಟುಗನ್ನು ಸ್ವೀಕರಿಸದಿರಲು ನಿರ್ಧರಿಸಲಾಗಿದೆ.

ಈ ಹಿಂದೆ ಕೇಂದ್ರ ಸರ್ಕಾರ ಸರ್ಕಾರ ಕಚೇರಿಗಳಾದ ಅಂಚೆಕಚೇರಿ, ಸರ್ಕಾರಿ ಆಸ್ಪತ್ರೆ, ಹಾಲಿನ ಕೇಂದ್ರ, ರೈಲ್ವೇ ಟಿಕೆಟ್ ಬುಕ್ಕಿಂಗ್, ಶವಾಗಾರಗಳು, ಹೆದ್ದಾರಿ ಟೋಲ್ ಕೇಂದ್ರ ಸೇರಿದಂತೆ ಇತರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಿ ಕೇಂದ್ರಗಳಲ್ಲಿ ಹಳೆಯ ನೋಟುಗಳ ಚಲಾವಣೆಗೆ ಅನುವು ಮಾಡಿಕೊಟ್ಟಿತ್ತು. ನೀರಿನ ಬಿಲ್ ಪಾವತಿ, ವಿದ್ಯುತ್ ಬಿಲ್ ಪಾವತಿ ಸೇರಿದಂತೆ ಇತರೆ ಬಿಲ್ ಗಳನ್ನು ಸರ್ಕಾರಿ ಕಚೇರಿಗಳಲ್ಲಿ ಪಾವತಿ ಮಾಡಲು ಅನುವು ಮಾಡಿಕೊಡಲಾಗಿತ್ತು. ಆದರೆ ಈ ಕಾಲಾವಧಿ ಇಂದಿಗೆ ಅಂತ್ಯವಾಗುತ್ತಿದ್ದು, ನಾಳೆಯಿಂದ ಎಲ್ಲ ಸರ್ಕಾರ ಕಚೇರಿಗಳಲ್ಲಿ ಹಳೆಯ ನೋಟು ಚಲಾವಣೆಯಾಗುವುದಿಲ್ಲ.

ಬ್ಯಾಂಕ್ ಗಳಲ್ಲಿ ಡಿ.30ರವೆರೆಗೂ ಹಳೆಯ ನೋಟು ಠೇವಣಿಗೆ ಅವಕಾಶ
ಹಳೆಯ ನೋಟುಗಳ ಚಲಾವಣೆ ಇಂದಿಗೆ ಕೊನೆಯಾಗುವುದರಿಂದ ಜನತೆ ಕಂಗಾಲಾಗಾವುದು ಬೇಡ. ಏಕೆಂದರೆ ಹಳೆಯ ನೋಟುಗಳ ಚಲಾವಣೆ ರದ್ದಾಗಿದೆಯಾದರೂ, ಬ್ಯಾಂಕುಗಳಲ್ಲಿ ಹಳೆಯ ನೋಟುಗಳನ್ನು ತಮ್ಮ ತಮ್ಮ ಖಾತೆಗಳಲ್ಲಿ ಠೇವಣಿ ಮಾಡಬಹುದಾಗಿದೆ. ಈ ಹಿಂದೆ ಕೇಂದ್ರ ಸರ್ಕಾರ ಹಳೆಯ ನೋಟುಗಳನ್ನು ಠೇವಣಿ ಮಾಡುವ ಅವಧಿಯನ್ನು ಡಿಸೆಂಬರ್ 30ರವರೆಗೂ ವಿಸ್ತರಿಸಿದ್ದು, ಅಲ್ಲಿಯವರೆಗೂ ಜನರು ತಮ್ಮಲ್ಲಿರುವ ಹಳೆಯ ನೋಟುಗಳನ್ನು ಬ್ಯಾಂಕುಗಳಲ್ಲಿ ಠೇವಣಿ ಮಾಡಬಹುದಾಗಿದೆ.

Comments are closed.