ಪ್ರಮುಖ ವರದಿಗಳು

ಕನ್ನಡ ಬಿಗ್‍ಬಾಸ್ ಮನೆಯಲ್ಲಿ ಭೂತ ! ಭಯಭೀತರಾಗಿ ಕಿರುಚಿಕೊಂಡ ಸ್ಪರ್ಧಿಗಳು…ನಡೆದಿದ್ದೇನು…?ಈ ವೀಡಿಯೊ ನೋಡಿ

Pinterest LinkedIn Tumblr

https://youtu.be/BEPh6MWQdw8

ಬೆಂಗಳೂರು: ಕನ್ನಡದ ಬಿಗ್‍ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ವಿಚಿತ್ರ ಅನುಭವವಾಗಿದೆ. ಕನ್ನಡಿಯಲ್ಲಿ ವಿಚಿತ್ರ ಆಕೃತಿ ಗೋಚರಿಸ್ತು ಅಂತ ಹೇಳಿ ಸ್ಪರ್ಧಿಗಳಾದ ಕಾರುಣ್ಯಾ ಮತ್ತು ಸಂಜನಾ ಭಯಭೀತರಾಗಿ ಕಿರುಚಿಕೊಂಡು ಕೆಳಕ್ಕೆ ಬಿದ್ದು ಒದ್ದಾಡಿದ್ದಾರೆ. ಇದರಿಂದ ಇತರೆ ಸ್ಪರ್ಧಿಗಳು ಕೂಡ ಆತಂಕಕ್ಕೀಡಾಗಿದ್ದಾರೆ.

ವಾಶ್ ರೋಮ್’ನಲ್ಲಿ ಮುಖ ತೊಳೆಯಲು ಹೋದಂತಹ ಇಬ್ಬರು ಸ್ಪರ್ಧಿಗಳಿಗೆ ಕನ್ನಡಿಯಲ್ಲಿ ಆಕೃತಿಯೊಂದು ಕಾಣಿಸಿದ್ದು, ಸ್ಪರ್ಧಿಗಳು ಭಯಭೀತರಾದರು. ಸ್ಪರ್ಧಿಗಳಾದ ಕಾರುಣ್ಯ ಮತ್ತು ಸಂಜನಾ ಇಬ್ಬರಿಗೂ ಕನ್ನಡಿಯಲ್ಲಿ ಆಕೃತಿಗಳು ಗೋಚರವಾಗಿವೆ. ಇದನ್ನು ಕಂಡ ಇವರಿಬ್ಬರು ನೆಲಕ್ಕುರುಳಿ ಚೀರಾಡಿದ್ದಾರೆ.

ಬಿಡದಿ ಬಳಿ ಇರುವ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಿರ್ಮಾಣವಾಗಿರುವ ಬಿಗ್‍ಬಾಸ್ ಮನೆಯಲ್ಲಿ ಸ್ಪರ್ಧಿಗಳು ಇದ್ದಾರೆ. ಕಳೆದ ವರ್ಷದ ಮನೆಯನ್ನು ಸಂಪೂರ್ಣವಾಗಿ ಒಡೆದು ಹೊಸದಾಗಿ ನಿರ್ಮಿಸಲಾಗಿದೆ. 20 ಸಾವಿರ ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ ಈ ಮನೆಯನ್ನು ಒಟ್ಟು 1.3 ಕೋಟಿ ರೂ. ವೆಚ್ಚದಲ್ಲಿ ಸುಂದರವಾಗಿ ನಿರ್ಮಿಸಲಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಇವರಿಬ್ಬರಿಗೆ ಕಂಡ ಆಕೃತಿಗಳು ಯಾವುವು? ಅದು ಭೂತವಾ? ಎಂಬಿತ್ಯಾದಿ ಪ್ರಶ್ನೆಗಳು ಮೂಡುತ್ತಿವೆ. ಆದರೆ, ಇದು ಪಬ್ಲಿಸಿಟಿ ಗಿಮಿಕ್ ಆಗಿರಬಹುದು, ಅಥವಾ ಸ್ಪರ್ಧಿಗಳಿಗೆ ಬಿಗ್ ಬಾಸ್ ನೀಡುತ್ತಿರುವ ಅಚ್ಚರಿಯ ಶಾಕ್ ಆಗಿರಬಹುದು ಎಂಬಿತ್ಯಾದಿ ಕೋನಗಳಲ್ಲಿ ಚರ್ಚೆಯಾಗುತ್ತಿದೆ.

Comments are closed.