ಮನೋರಂಜನೆ

ನೈಟ್‌ಕ್ಲಬ್‌ ಪಾರ್ಟಿಯ ವೇಳೆ ಹಲ್ಲೆ ಮಾಡಿದ ಪ್ರಕರಣ: ನಟ ಆದಿತ್ಯ ಪಾಂಚೋಲಿಗೆ ಒಂದು ವರ್ಷ ಜೈಲು ಶಿಕ್ಷೆ

Pinterest LinkedIn Tumblr

aditya-pancholi

ಮುಂಬೈ: 2005ರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಆದಿತ್ಯ ಪಾಂಚೋಲಿ ಅವರಿಗೆ ಮೆಟ್ರೊಪೊಲಿಟನ್ ಕೋರ್ಟ್ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಆದಿತ್ಯ ಪಾಂಚೋಲಿ ಮುಂಬೈನ ಜುಹುನಲ್ಲಿರುವ ಪಂಚತಾರಾ ಹೊಟೇಲ್‌ವೊಂದರಲ್ಲಿ ನಡೆದ ನೈಟ್‌ಕ್ಲಬ್‌ ಪಾರ್ಟಿಯ ವೇಳೆ ಬೌನ್ಸರ್‌ವೊಬ್ಬರ ಮೇಲೆ ಹಲ್ಲೆ ಮಾಡಿದ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್ ಶನಿವಾರ ತೀರ್ಪು ಪ್ರಕಟಿಸಿದ್ದು, ಅಪರಾಧಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ರುಪಾಯಿ ದಂಡ ವಿಧಿಸಿದೆ. ಅಲ್ಲದೆ ಈ ತೀರ್ಪು ಜಾರಿಗೊಳಿಸಲು ಒಂದು ತಿಂಗಳ ಕಾಲವಕಾಶ ನೀಡಿದ್ದು, ಬಾಲಿವುಡ್ ನಟನಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿದೆ.

ಇನ್ನು ಈ ತೀರ್ಪು ತುಂಬಾ ಕಠೋರವಾಗಿದೆ ಎಂದಿರುವ ಆದಿತ್ಯ ಪಾಂಚೋಲಿಯ ವಕೀಲರು, ಜಾಮೀನು ಕೋರಿ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

Comments are closed.