ಅಂತರಾಷ್ಟ್ರೀಯ

“ವೇಲ್ ವೊಮಿಟ್” ಪತ್ತೆ ಮಾಡಿದ ಒಮಾನ್ ಮೀನುಗಾರನಿಗೆ ಬಂತು ಜಾಕ್ಪಾಟ್ ಅದೃಷ್ಟ

Pinterest LinkedIn Tumblr

whale_vomit_fisherman

ಮಸ್ಕತ್ : ಇಲ್ಲಿನ ಕ್ಯುರಾಯತ್ ಕಡಲ ಕಿನಾರೆಯಲ್ಲಿ ಕಳೆದ ತಿಂಗಳ 30ರಂದು ತೇಲುತ್ತಿರುವ “ವೇಲ್ ವೊಮಿಟ್” ಪತ್ತೆ ಮಾಡಿದ ಈ ಒಮಾನ್ ಮೀನುಗಾರನಿಗೆ ಜಾಕ್ಪಾಟ್ ಹೊಡೆದಿದೆ. ಹೀಗೆ ಪತ್ತೆಯಾದ ವೇಲ್ ವೊಲಿಟ್ ಮೌಲ್ಯ ಎಷ್ಟು ಗೊತ್ತೇ? ಬರೋಬ್ಬರಿ ಹತ್ತು ಲಕ್ಷ ಒಮಾನಿ ರಿಯಾಲ್.

ಆಂಬರ್ ಜೆರಿಸ್ ಎನ್ನುವುದು ತೀರಾ ನಯವಾದ ವಸ್ತುವಾಗಿದ್ದು, ವಿಶಿಷ್ಟ ಜಾತಿಯ ವೇಲ್ನ ಕರುಳಿನಿಂದ ಇದು ಹೊರಬರುತ್ತದೆ. ಆದ್ದರಿಂದ ಇದಕ್ಕೆ ವೇಲ್ ವೊಮಿಟ್ ಎಂಬ ಹೆಸರು ಬಂದಿದೆ. ಈ ವಸ್ತುವು ಉಷ್ಣವಲಯದ ಸಮುದ್ರದಲ್ಲಿ ಆಗಾಗ ತೇಲಿ ಬರುತ್ತಿದ್ದು, ಇದನ್ನು ಸುಗಂಧ ದ್ರವ್ಯ ತಯಾರಿಕೆಯಲ್ಲಿ ಬಳಸಲಾಗುತ್ತದೆ.

whale_vomit_fisherman1

ಖಲೀದ್ ಅಲ್ ಸಿನಾನಿ ಎಂಬ ಮೀನುಗಾರ ಇಡೀ ಕುಟುಂಬದ ಆಧಾರಸ್ತಂಭ. ಎಂದಿನಂತೆ ಕಾರ್ಯನಿರ್ವಹಿಸಿ ಸುಸ್ತಾಗಿ ಮನೆಗೆ ವಾಪಸ್ಸಾಗಬೇಕು ಎನ್ನುವಷ್ಟರಲ್ಲಿ ಈ ಅಪೂರ್ವ ವಸ್ತುವಿನ ಸುವಾಸನೆ ದೂರದಿಂದ ತೇಲಿಬಂತು.

ಇದನ್ನು ಹಗ್ಗದ ಸಹಾಯದಿಂದ ಒಟ್ಟುಗೂಡಿಸಿದರು. ಸುಮಾರು 60 ಕೆಜಿ ತೂಕದ ಈ ವಸ್ತುವನ್ನು ತಮ್ಮ 20 ಅಡಿಯ ದೋಣಿಗೆ ಹಾಕುವಲ್ಲಿ ಯಶಸ್ವಿಯಾದರು.”ಈ ಗಳಿಕೆಯೊಂದಿಗೆ ನನ್ನ 20 ವರ್ಷದ ಕನಸು ನನಸಾಗಿದೆ. ನನ್ನ ತಂದೆಯ ಜತೆ ನಾನು ಮೀನು ಹಿಡಿಯಲು ಆರಂಭಿಸಿದ್ದೆ ಎಂದು ಸಿನಾನಿ ಹೇಳುತ್ತಾರೆ.

ಯುಎಇ ಹಾಗೂ ಸೌದಿ ಅರೇಬಿಯಾ ವ್ಯಾಪಾರಿಗಳು ಇವರಿಗೆ ಪ್ರತಿ ಕೆ.ಜಿ.ಗೆ 10 ಸಾವಿರ ರೂಪಾಯಿ ಮೌಲ್ಯ ನೀಡಲು ಮುಂದಾಗಿದ್ದಾರೆ. ಆದರೆ ಅದನ್ನು ತಿರಸ್ಕರಿಸಿರುವ ಸಿನಾನಿ ಕೆ.ಜಿ.ಗೆ 18 ಸಾವಿರ ರೂಪಾಯಿ ಮೌಲ್ಯದ ನಿರೀಕ್ಷೆಯಲ್ಲಿದ್ದಾರೆ.

ಕೃಪೆ : ವಾಭಾ

Comments are closed.