ಪ್ರಮುಖ ವರದಿಗಳು

ಕೇರಳದ ತರಕಾರಿ ವ್ಯಾಪಾರಿ ನೌಶಾದ್ ಸಾವಿನ ಸುತ್ತ ಅನುಮಾನದ ಹುತ್ತ ! ವ್ಯಾಪಾರಿಗಳ ಲಾಬಿಗೆ ಬಲಿಯಾದನೇ…..?

Pinterest LinkedIn Tumblr

https://youtu.be/r9kloXGffJ8

ನೌಶಾದ್ ಸಾವಿಗೂ ಮುನ್ನ ತನಗೆ ನೀಡುತ್ತಿರುವ ಕಿರುಕುಳದ ಬಗ್ಗೆ ಫೇಸ್ಬುಕ್ ಗೆ ಹಾಕಿದ ವೀಡಿಯೊ

ಕೇರಳ: ಇಲ್ಲಿನ ಕಾಯಂಕುಳಂನ ತರಕಾರಿ ವ್ಯಾಪಾರಿ ನೌಶಾದ್ ಎಂಬವರು ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದು, ಘಟನೆ ಸುತ್ತ ಈಗ ಅನುಮಾನದ ಹುತ್ತ ಬೆಳೆಯುತ್ತಿದ್ದು, ಪ್ರಕರಣ ಕುರಿತು ಹೆಚ್ಚಿನ ತನಿಖೆ ನಡೆಯಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಈಗ ವ್ಯಕ್ತವಾಗುತ್ತಿದೆ.

ಕಾಯಂಕುಳಂನ ಮಾರುಕಟ್ಟೆಯಲ್ಲಿ ಸಣ್ಣ ವ್ಯಾಪಾರಿಯಾಗಿದ್ದ ನೌಶಾದ್ ಅಹ್ಮದ್, ತನ್ನ ಅಂಗಡಿಯಲ್ಲಿ ತರಕಾರಿ-ಹಣ್ಣು ಹಂಪಲುಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಎಲ್ಲ ಗ್ರಾಹಕರನ್ನು ಸೆಳೆದಿದ್ದ. ಮಾರುಕಟ್ಟೆಯಲ್ಲಿ ಗ್ರಾಹರನ್ನು ಹಗಲು ದರೋಡೆ ಮಾಡುತ್ತಿದ್ದ ದೊಡ್ಡ ದೊಡ್ಡ ವ್ಯಾಪಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ನೌಶಾದ್ ಅಹ್ಮದ್, ತರಕಾರಿ ತರಲೆಂದು ತಮಿಳುನಾಡಿಗೆ ಹೋಗಿದ್ದ ವೇಳೆ ಆತನಿದ್ದ ವಾಹನ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾನೆ. ಈ ವೇಳೆ ನೌಶಾದ್ ನ ಒಟ್ಟಿಗಿದ್ದ ಸಹಾಯಕ ಕೂಡ ಮೃತಪಟ್ಟಿದ್ದಾನೆ.

ಈ ದುರ್ಘಟನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಂಶಯ ವ್ಯಕ್ತಪಡಿಸಿದ್ದು, ಇದೊಂದು ವ್ಯವಸ್ಥಿತ ಕೊಲೆ ಎಂದು ಆರೋಪಿಸಿದ್ದಾರೆ.

ಕಾಯಂಕುಳಂನ ಮಾರುಕಟ್ಟೆಯಲ್ಲಿ ದೊಡ್ಡ ದೊಡ್ಡ ವ್ಯಾಪಾರಿಗಳು ತರಕಾರಿಗಳನ್ನು ದುಪ್ಪಟ ಬೆಳೆಗೆ ಮಾರಾಟ ಮಾಡಿ ಗ್ರಾಹಕರನ್ನು ಸುಲಿಗೆ ಮಾಡುತ್ತಿದ್ದ ವೇಳೆ, ನೌಶಾದ್ ನೇರವಾಗಿ ತಮಿಳುನಾಡಿಗೆ ತೆರಳಿ ತರಕಾರಿ-ಹಣ್ಣು ಹಂಪಲುಗಳನ್ನು ತಂದು, ಕಾಯಂಕುಳಂನ ಮಾರುಕಟ್ಟೆಯಲ್ಲಿ ಸ್ವಲ್ಪವೇ ಲಾಭಾಂಶ ಇಟ್ಟು ಮಾರಾಟ ಮಾಡುತ್ತಿದ್ದ. ಇದರಿಂದ ಬಹುತೇಕ ಗ್ರಾಹಕರು ತರಕಾರಿಗಳನ್ನು ಖರೀದಿಸಲು ನೌಶಾದ್ ಅಂಗಡಿಗೆ ಮುಗಿಬೀಳುತ್ತಿದ್ದರು. ಇದರಿಂದ ರೊಚ್ಚಿಗೆದ್ದ ಸ್ಥಳೀಯ ವ್ಯಾಪಾರಿಗಳು ಪೊಲೀಸರಿಗೆ ದೂರು ನೀಡಿ, ನೌಶಾದ್ ಮೇಲೆ ಹಲ್ಲೆ ಕೂಡ ನಡೆಸಿದ್ದರು.

ತನಗೆ ದೊಡ್ಡ ದೊಡ್ಡ ವ್ಯಾಪಾರಿಗಳು ನೀಡುತ್ತಿದ್ದ ಕಿರುಕುಳದ ಬಗ್ಗೆ ನೌಶಾದ್ ವೀಡಿಯೊ ಒಂದನ್ನು ಮಾಡಿ, ಅದರಲ್ಲಿ ತನಗೆ ನೀಡುತ್ತಿರುವ ಮಾನಸಿಕ-ದೈಹಿಕ ಕಿರುಕುಳದ ಬಗ್ಗೆ ನೊಂದು ನುಡಿದಿದ್ದ. ಈ ವೀಡಿಯೊವನ್ನು ನೌಶಾದ್ ಫೇಸ್ಬುಕ್ ನಲ್ಲಿ ಹಾಕಿದ್ದ. ಈ ವೀಡಿಯೊವನ್ನು ಲಕ್ಷಾಂತರ ಮಂದಿ ನೋಡಿ, ಮೆಚ್ಚಿದ್ದು, ನೌಶಾದ್ ನ ಬೆಂಬಲಕ್ಕೆ ನಿಂತಿದ್ದರು.

ಇಂಥ ಸಂದರ್ಭದಲ್ಲಿ ತಮಿಳುನಾಡಿನಲ್ಲಿತರಕಾರಿ ತರಲೆಂದು ಹೋಗಿದ್ದ ವೇಳೆ ಅಪಘಾತವೊಂದರಲ್ಲಿ ಸಾವನ್ನಪ್ಪಿರುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ಜೊತೆಗೆ ಕಾಯಂಕುಳಂನ ಮಾರುಕಟ್ಟೆಯಲ್ಲಿ ರೌಡಿಗಳ ಮೂಲಕ ಕೊಟೇಶನ್ ಕೊಟ್ಟು ವ್ಯಾಪಾರಿಗಳನ್ನು ಕೊಲೆ ಮಾಡಿರುವ ಪ್ರಕರಣಗಳು ಈ ಹಿಂದೆ ಕೂಡ ನಡೆದಿದೆ ಎನ್ನಲಾಗಿದೆ.

ಈ ಸಂಶಯಾಸ್ಪದ ಸಾವಿನ ಕುರಿತು ತಮಿಳುನಾಡು ಪೊಲೀಸರು ಯಾವುದೇ ರೀತಿಯ ತನಿಖೆ ಮಾಡಿಲ್ಲ. ಇದೊಂದು ಅಪಘಾತದಿಂದ ನಡೆದ ಸಾವು ಎಂದು ಪ್ರಕರಣವನ್ನು ಮುಚ್ಚಿ ಹಾಕಲು ಮುಂದಾಗಿದ್ದಾರೆ.

Comments are closed.