ಪ್ರಮುಖ ವರದಿಗಳು

ಕೊಳವೆ ಬಾವಿಯೊಳಗೆ ಬಿದ್ದ 3 ವರ್ಷದ ಬಾಲಕನನ್ನು ರಕ್ಷಿಸಿದ ಅಗ್ನಿಶಾಮಕ ನೌಕರ…ಇಲ್ಲಿದೆ ವೀಡಿಯೊ ನೋಡಿ

Pinterest LinkedIn Tumblr

https://youtu.be/XElstUB0K3Y

ಬೀಜಿಂಗ್: ಅಗ್ನಿಶಾಮಕ ನೌಕರರೊಬ್ಬರು ಕೊಳವೆ ಬಾವಿಯೊಳಗೆ ತಲೆಕೆಳಗಾಗಿ ತೂರಿ 3 ವರ್ಷದ ಬಾಲಕನನ್ನ ರಕ್ಷಿಸಿರುವ ಘಟನೆ ಚೀನಾದಲ್ಲಿ ನಡೆದಿದೆ.

ಇಲ್ಲಿನ ಜಿಯಾಂಗ್ಸು ಪ್ರದೇಶದ ಪೈ ಕೌಂಟಿಯ ಫಾರ್ಮ್‍ವೊಂದರಲ್ಲಿ 8 ಮೀಟರ್(ಸುಮಾರು 28 ಅಡಿ) ಆಳದ ಕೊಳವೆಬಾವಿಯೊಳಗೆ 3 ವರ್ಷದ ಬಾಲಕ ಬಿದ್ದಿದ್ದ. ಆತನನ್ನ ರಕ್ಷಿಸಲು ಅಗ್ನಿಶಾಮಕ ನೌಕರ ತಲೆಯ ಹೆಲ್ಮೆಟ್ ತೆಗೆದು ಕೊಳವೆಬಾವಿಯೊಳಗೆ ತಲೆಕೆಳಗಾಗಿ ತೂರಿದ್ದರು. ದೇಹದ ಅರ್ಧದಷ್ಟು ಭಾಗವನ್ನ ಕೂಡ ಕಿರಿದಾದ ಕೊಳವೆಬಾವಿಯೊಳಗೆ ತೂರಿಸಲು ಕಷ್ಟವಾಗಿತ್ತು. ಆದರೂ ಆ ನೌಕರ ಇಡೀ ದೇಹವನ್ನ ಕೊಳವೆಬಾವಿಯೊಳಗೆ ತೂರಿಸಿದ್ದರು.

ನೌಕರನ ದೇಹಕ್ಕೆ ಕಟ್ಟಿದ್ದ ಹಗ್ಗವನ್ನು ಹಿಡಿದು ಇತರೆ ಅಗ್ನಿಶಾಮಕ ಸಿಬ್ಬಂದಿ ಮೇಲೆ ನಿಂತಿದ್ದರು. ಕೊನೆಗೆ ಐದೇ ಐದು ನಿಮಿಷದಲ್ಲಿ ಬಾಲಕನ್ನ ಆ ನೌಕರ ರಕ್ಷಿಸಿದ್ದಾರೆ.

Comments are closed.