ರಾಷ್ಟ್ರೀಯ

ರಿಲಯನ್ಸ್ ಜಿಯೋ 4ಜಿ ಉಚಿತ ಸಿಮ್ ಪಡೆಯುವ ಮುಂಚೆ ಈ ವರದಿ ಒಮ್ಮೆ ನೋಡಿ…

Pinterest LinkedIn Tumblr

jio

ನವದೆಹಲಿ; ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ತೀರಾ ಅಗ್ಗದ ಆಫರ್ ಗಳ ಮೂಲಕ ಗ್ರಾಹಕರ ಸೆಳೆಯುತ್ತಿರುವ ರಿಲಯನ್ಸ್ ಸಂಸ್ಥೆಯ ಜಿಯೋ ಸಿಮ್ ಪಡೆದುಕೊಳ್ಳಲು ರಿಲಾಯನ್ಸ್ ಜಿಯೋ 4ಜಿ ಉಚಿತ ಸಿಮ್ ಗ್ರಾಹಕರು ಮುಗಿಬೀಳುತ್ತಿರುವುದಂತು ಸುಳ್ಳಲ್ಲ. ಪ್ರತಿಯೊಬ್ಬ ಮೊಬೈಲ್ ಗ್ರಾಹಕನೂ ಜಿಯೋ 4ಜಿ ಉಚಿತ ಸಿಮ್ ಪಡೆಯಲು ಕಾತರನಾಗಿದ್ದಾನೆ. ಆ ಕಾರಣಕ್ಕಾಗಿಯೇ ವೆಬ್ ಸೈಟ್ ವೊಂದು ರಿಲಯನ್ಸ್ ಜಿಯೋ ಸಿಮ್ ಗಳನ್ನು ಆನ್ ಲೈನ್ ನಲ್ಲಿ ಉಚಿತವಾಗಿ ಮಾರಾಟ ಮಾಡುತ್ತಿರುವುದಾಗಿ ಹೇಳಿದೆ. ಆದರೆ ಮೊಬೈಲ್ ಬಳಕೆದಾರರು ಈ ಆಫರ್ ಗೆ ಮೋಸ ಹೋಗಬೇಡಿ!

ನೀವು ಆನ್ ಲೈನ್ ನಲ್ಲಿರುವ ಫಾರ್ಮ್ ನಲ್ಲಿ ನಿಮ್ಮ ಹೆಸರು, ದೂರವಾಣಿ ಸಂಖ್ಯೆ ಮತ್ತು ಸಿಮ್ ಡೆಲಿವರಿ ಮಾಡುವ ವಿಳಾಸ, ಇ ಮೇಲ್ ಐಡಿ ತುಂಬಿಸಿದರೆ ಸಾಕು, ಜಿಯೋ ಸಿಮ್ ನಿಮ್ಮ ಮನೆ ಬಾಗಿಲಿಗೆ ಬರುತ್ತೆ. ಆಗ ನೀವು ವಿಳಾದ ಪ್ರೂಫ್ ಅಥವಾ ಗುರುತಿನ ಪ್ರೂಫ್ ನೀಡಬೇಕು, ಜೊತೆಗೆ ಪಾಸ್ ಪೋರ್ಟ್ ಸೈಜ್ ಫೋಟೊ. ಅಂತರ್ಜಾಲ ತಾಣದಲ್ಲಿ ತಿಳಿಸಿರುವಂತೆ ಸಿಮ್ ಅನ್ನು 7ರಿಂದ 10 ದಿನದೊಳಗೆ ಡೆಲಿವರಿ ಮಾಡಲಾಗುವುದು, ಡೆಲಿವರಿ ಶುಲ್ಕ 199 ರೂಪಾಯಿ!

ಅದೇ ರೀತಿ ನಾವು ಜಿಯೋ ಸಿಮ್ ಜೊತೆ ರಿಲಯನ್ಸ್ ಜಿಯೋ ಡೋಂಗಲ್ (1,999 ರೂ.) ಹಾಗೂ ರಿಲಯನ್ಸ್ ಜಿಯೋ ವೈ ಫೈ ಡೋಂಗಲ್ (2,199) ಅನ್ನು ಡೆಲಿವರಿ ಮಾಡುವುದಾಗಿಯೂ ವೆಬ್ ಸೈಟ್ ಹೇಳಿಕೊಂಡಿದೆ. ಇವುಗಳ ಖರೀದಿಗೆ ನೀವು ಮೊದಲೇ ಆನ್ ಲೈನ್ ನಲ್ಲಿ ಪೇಮೆಂಟ್ ಮಾಡಬೇಕಾಗುತ್ತದೆ. ಅಲ್ಲಿಗೆ ನೀವು ಮೋಸ ಹೋಗುವುದು ಖಚಿತ, ಯಾಕೆಂದರೆ ರಿಲಯನ್ಸ್ ಜಿಯೋ ಯಾವುದೇ ಆನ್ ಲೈನ್ ಅಥವಾ ಹೋಮ್ ಡೆಲಿವರಿ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿಲ್ಲ. ಈ ಅಂತರ್ಜಾಲ ತಾಣದಿಂದ ಮೋಸ ಹೋದವರು ಇದೀಗ ವಾಟ್ಸಪ್, ಇ ಮೇಲ್ ಹಾಗೂ ಎಸ್ ಎಂಎಸ್ ಗಳ ಮೂಲಕ ಬಯಲಿಗೆಳೆಯುತ್ತಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಈ ಅಂತರ್ಜಾಲ ತಾಣ ನೂರಕ್ಕೆ ನೂರರಷ್ಟು ನಕಲಿ, ಅವರು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಿ ಹಣಕ್ಕಾಗಿ 3ನೇ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಾರೆ ಎಂದು ವರದಿ ವಿವರಿಸಿದೆ.

Comments are closed.