ಗಲ್ಫ್

ದುಬೈಯಲ್ಲಿ ನಡೆದ ಹರಾಜಿನಲ್ಲಿ ಬರೋಬರಿ 59.83 ಕೋಟಿ ರೂ.ನೀಡಿ ‘D5’ ನಂಬರ್ ಪ್ಲೇಟ್ ಖರೀದಿಸಿದ ಭಾರತೀಯ ಮೂಲದ ಉದ್ಯಮಿ…ಇಲ್ಲಿದೆ ವೀಡಿಯೊ

Pinterest LinkedIn Tumblr

ದುಬೈ: ದುಬೈಯಲ್ಲಿ ನಡೆದ ವಾಹನಗಳ ನಂಬರ್ ಪ್ಲೇಟ್ ಹರಾಜಿನಲ್ಲಿ ಭಾರತೀಯ ಮೂಲದ ಉದ್ಯಮಿಯೊಬ್ಬರು ಬರೋಬರಿ 59.83 ಕೋಟಿ ರೂ. (33 ಮಿಲಿಯನ್ ದಿರ್ಹಾಂ) ನೀಡಿ ಖರೀದಿಸಿದ್ದಾರೆ.

ರೋಡ್ಸ್ ಅಂಡ್ ಟ್ರಾನ್ಸ್ಪೋರ್ಟ್ ಅಥಾರಿಟಿ (RTA) ದುಬೈಯಲ್ಲಿ ನಡೆಸಿದ ವಿಶೇಷ ಹರಾಜಿನಲ್ಲಿ ಭಾರತೀಯ ಮೂಲದ ಉದ್ಯಮಿ ಬಲವಿಂದರ್ ಸಾಹ್ನಿ D5 ನಂಬರ್ ಪ್ಲೇಟನ್ನು 59.83 ಕೋಟಿ ರೂ. ಹರಾಜು ಕೂಗಿ ಖರೀದಿಸಿ, ಶಾಕ್ ನೀಡಿದ್ದಾರೆ.

1

ಕುವೈಟ್ ನಲ್ಲಿ ಹುಟ್ಟಿ ಬೆಳೆದಿರುವ ಬಲವಿಂದರ್ ಸಾಹ್ನಿ RSG ಇಂಟೆರ್ ನ್ಯಾಷನಲ್ ಗ್ರೂಪ್ ಆಫ್ ಕಂಪೆನಿಯ ಚೇರ್ಮೆನ್ ಆಗಿದ್ದಾರೆ. ಖರೀದಿಸಿರುವ ನಂಬರನ್ನು ಅವರು ತನ್ನ ರೋಲ್ಸ್ ರಾಯ್ಸ್ ಕಾರಿಗೆ ಹಾಕಲಿದ್ದಾರೆ.

ಬಲವಿಂದರ್ ಸಾಹ್ನಿ ಗೆ 9 ನಂಬರ್ ಅದೃಷದ್ದಂತೆ. ಈ ಕಾರಣದಿಂದಲೇ ಅವರು D5 (D ಇಂಗ್ಲಿಷ್ ಅಕ್ಷರ ಮಾಲೆಯ ನಾಲ್ಕನೆಯ ಅಕ್ಷರವಾಗಿದ್ದು, ಜೊತೆಗೆ 5 ಸೇರಿದರೆ ಒಟ್ಟು 9 ಆಗುತ್ತೆ)ಯನ್ನು ಹರಾಜಿನಲ್ಲಿ ಖರೀದಿಸಿ ಎಲ್ಲರ ಗಮನವನ್ನು ತನ್ನೆಡೆಗೆ ಸೆಳೆದಿದ್ದಾರೆ.

ಈ ಹರಾಜಿನಲ್ಲಿ D5 ನಂಬರ್ ಪ್ಲೇಟ್ 100 ಅಲ್ಲ 200 ಕೋಟಿ ರೂ.ನೀಡಿಯಾದರು ಖರೀದಿಸಲು ಬಲವಿಂದರ್ ಸಾಹ್ನಿ ಸಿದ್ಧರಾಗಿದ್ದರು. ಹರಾಜಿನಲ್ಲಿ ಎಲ್ಲರೂ ಸಣ್ಣ ಸಣ್ಣ ಮೊತ್ತಕ್ಕೆ ಹರಾಜು ಕೂಗುತ್ತಿದ್ದಾರೆ ಬಲವಿಂದರ್ ಸಾಹ್ನಿ D5 ಸಂಖ್ಯೆಯನ್ನು ಖರೀದಿಸಲು ಕೋಟಿ ಕೋಟಿಯಲ್ಲಿಯೇ ಹರಾಜು ಕೂಗುತ್ತಿದ್ದರು.

ಕಳೆದ 10 ವರ್ಷಗಳಿಂದ ದುಬೈಯಲ್ಲಿ ಉದ್ಯಮ ನಡೆಸುತ್ತಿರುವ 44 ವರ್ಷದ ಬಲವಿಂದರ್ ಸಾಹ್ನಿ, ಇದೇ ಹರಾಜಿನಲ್ಲಿ 1.80 ಕೋಟಿಗೆ ಇನ್ನೊಂದು ನಂಬಿರನ್ನು ಕೂಡ ಖರೀದಿಸಿದ್ದಾರೆ. ಜೊತೆಗೆ ಕಳೆದ ಬಾರಿಯೂ ಕೋಟಿ ಕೋಟಿ ರೂ.ನೀಡಿ ನಂಬರ್ ಪ್ಲೇಟನ್ನು ಖರೀದಿಸಿದ್ದಾರೆ.

ರೋಡ್ಸ್ ಅಂಡ್ ಟ್ರಾನ್ಸ್ಪೋರ್ಟ್ ಅಥಾರಿಟಿ (RTA ) ನಡೆಸುವ ಹರಾಜು ಪ್ರಕ್ರಿಯೆಯಲ್ಲಿ ಬರುವ ಹಣವನ್ನೆಲ್ಲ ಚಾರಿಟಿಗೆ ನೀಡುತ್ತೆ.

Comments are closed.