ಅಮೃತಸರ, ವಾರಾಣಸಿ: ಪಂಜಾಬಿನ ಅಮೃತಸರ ಮತ್ತು ಉತ್ತರ ಪ್ರದೇಶದ ವಾರಾಣಸಿಯಲ್ಲಿ ಅಪರಿಚಿತರು ಬಿಟ್ಟು ಹೋಗಿದ್ದ ಬಾಂಬ್, ಚೀಲಗಳು ಪತ್ತೆಯಾಗಿವೆ.
ಅಮೃತಸರದ ಛೆಹೆರ್ತ ರಸ್ತೆಯ ಬಳಿ ತುಕ್ತು ಹಿಡಿದ 11 ಬಾಂಬ್ಗಳು ಇದ್ದ ಅನಾಥ ಚೀಲವೊಂದು ಪೊಲೀಸರಿಗೆ ಲಭಿಸಿದೆ ಎಂದು ವರದಿಗಳು ತಿಳಿಸಿವೆ.
ಉತ್ತರ ಪ್ರದೇಶದ ವಾರಾಣಸಿಯ ಸುಂದರ ನಗರ ಪ್ರದೇಶದಲ್ಲೂ ಯಾರೋ ಬಿಟ್ಟು ಹೋಗಿದ್ದ ಚೀಲವೊಂದು ಪತ್ತೆಯಾಗಿದ್ದು, ಬಾಂಬ್ ಪತ್ತೆ ದಳ ಸ್ಥಳಕ್ಕೆ ದೌಡಾಯಿಸಿದೆ. ವಾರಾಣಸಿಯಲ್ಲಿ ಲಭಿಸಿದ ಚೀಲದಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ಮೂಲಗಳು ಹೇಳಿವೆ.