ಪ್ರಮುಖ ವರದಿಗಳು

ಪೊಲೀಸ್ ಠಾಣೆಯಲ್ಲಿ ಕುಣಿದು ಪೊಲೀಸರಿಗೆ ಮಜಾ ನೀಡಿದ ಬಂಧಿತ ‘ಡಿಸ್ಕೋ ಬಾಬಾ’ ! ಈ ವೀಡಿಯೊ ಒಮ್ಮೆ ನೋಡಿ…

Pinterest LinkedIn Tumblr

https://youtu.be/Qzs2BnKBxmM

ಹೈದರಾಬಾದ್: ಬೇರೆ ಬೇರೆ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ‘ಡಿಸ್ಕೋ ಬಾಬಾ’ ಎಂಬ ಆರೋಪಿಯನ್ನು ಬಂಧಿಸಿದ ಪೊಲೀಸರು, ಠಾಣೆಯಲ್ಲಿ ಆತನನ್ನು ಕುಣಿಸಿ ಮಜಾ ತಗೆದುಕೊಂಡ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

ಮಾಟ ಮಂತ್ರ, ವಂಚನೆ, ಮಕ್ಕಳಿಗೆ ಕಿರುಕುಳ ನೀಡಿದ ಆರೋಪ ಈತನ ಮೇಲಿದ್ದು, ಈತನ ಹೆಸರು ಅನ್ವರ್ ಉಲ್ಲಾ ಖಾನ್ ಆಗಿದ್ದು, ಡಿಸ್ಕೋ ಬಾಬಾ ಎಂದೇ ಕುಖ್ಯಾತಿ ಗಳಿಸಿದ್ದ.

ವಂಚನೆ ಮಾಡಿದ ಆಪಾದನೆ ಮೇಲೆ ಬಂಧಿತನಾಗಿದ್ದು, ಬಂಧಿತನಾದ ಈತ ಪೊಲೀಸ್ ಠಾಣೆಯಲ್ಲಿ ಪೊಲೀಸರ ಎದುರಿಗೆ ಕುಣಿದಿದ್ದಾನೆ. ಬಾಲಿವುಡ್ ಡಿಸ್ಕೋ ಡಾನ್ಸರ್ ಹಾಡಿಗೆ ಹೆಜ್ಜೆ ಹಾಕಿದ ಈತ ಅಲ್ಲಿದ್ದವರಿಗೆ ಸಖತ್ ಮನೋರಂಜನೆ ನೀಡಿದ್ದಾನೆ. ಈತ ಕುಣಿಯುವುದನ್ನ ಪೊಲೀಸರು ನೋಡುತ್ತಿದ್ದರೆ, ಇನ್ನೂ ಕೆಲವರು ಇದನ್ನ ವಿಡಿಯೋ ಮಾಡಿಕೊಂಡಿದ್ದಾರೆ.

ಸೈಯದ್ ಎಂಬುವವರ ಬಳಿ ಈತ 35 ಲಕ್ಷ ರೂ. ಪಡೆದುಕೊಂಡು ಅದೃಷ್ಟ ತರುವಂತಹ ಬಿಸ್ಕೆಟ್ ಹಾಗೂ ವಜ್ರವನ್ನ ನೀಡುವುದಾಗಿ ಹೇಳಿ ಕೇವಲ ಚಿನ್ನ ಲೇಪಿತ ಬಿಸ್ಕೇಟ್ ನೀಡಿ ವಂಚಿಸಿದ್ದಾನೆ.

ಇದಲ್ಲದೇ ಇನ್ನೊಂದು ಪ್ರಕರಣದಲ್ಲಿ ಈ ಬಾಬ 12 ವರ್ಷದ ಬಾಲಕನನ್ನ ಅಪಹರಣ ಮಾಡಿ ಕಿರುಕುಳ ನೀಡಿರುವುದಲ್ಲದೇ, ಆತನ ಕೊಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಅಲ್ಲದೇ ಈ ಬಗ್ಗೆ ವಿಡಿಯೋ ದೊರೆತಿದ್ದು, ಅದರಲ್ಲಿ ಈ ಬಾಬಾ ಬಾಲಕನ ಮೇಲೆ ಕುದಿಯುತ್ತಿರುವ ನೀರು ಹಾಕಿ ಹಿಂಸೆ ಮಾಡಿರುವುದು ಕಂಡುಬಂದಿದೆ. ಸದ್ಯ ಬಾಬಾ ಮೇಲೆ ಹಲವು ಠಾಣೆಗಳಲ್ಲಿ ವಂಚನೆ ಆರೋಪಗಳಿದ್ದು, ಇದೀಗ ಈತನನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Comments are closed.