ಅಂತರಾಷ್ಟ್ರೀಯ

ಪ್ಯಾರಾಚೂಟ್‌ ಇಲ್ಲದೆಯೇ 25,000 ಅಡಿ ಎತ್ತರದಿಂದ ಹಾರಿ ಹೊಸ ಇತಿಹಾಸ ನಿರ್ಮಿಸಿದ ಸಾಹಸಿಯ ವೀಡಿಯೊ ಒಮ್ಮೆ ನೋಡಿ…

Pinterest LinkedIn Tumblr

https://youtu.be/aOBavry0K2E

ಲಾಸ್‌ ಏಂಜಲೀಸ್‌: ಲಾಸ್‌ ಏಂಜಲೀಸ್‌ನ ಪಶ್ಚಿಮದಲ್ಲಿರುವ ಸಿಮಿ ಕಣಿವೆಯಲ್ಲಿ ನಿಂತವರೆಲ್ಲರೂ ಉಸಿರು ಬಿಗಿ ಹಿಡಿದು ಆಕಾಶದತ್ತ ದಿಟ್ಟಿಸುತ್ತಿದ್ದರು. ಎರಡು ನಿಮಿಷಗಳಲ್ಲಿ ವಿಶ್ವದಾಖಲೆ ನಿರ್ಮಿಸುವ ಪ್ರಥಮ ಸಾಹಸಕ್ಕೆ ಸಾಕ್ಷಿಯಾಗಲು ಅವರೆಲ್ಲಾ ಕಾತರದಿಂದ ಕಾಯುತ್ತಿದ್ದರು.

ಹೀಗೆ ಎಲ್ಲರೂ ಕಾದಿರುವಂತೆಯೇ ಅಮೆರಿಕದ ಸ್ಕೈಡೈವರ್‌ ಲ್ಯೂಕ್‌ ಐಕಿನ್ಸ್‌ ಡೇರ್‌ಡೆವಿಲ್‌ನಂತೆ 25,000 ಅಡಿ ಎತ್ತರದಿಂದ ಹಾರಿ ಬಿಟ್ಟರು. ಅಷ್ಟಕ್ಕೂ ಅವರ ಬೆನ್ನಿಗೆ ಪ್ಯಾರಚೂಟ್‌ ಕೂಡ ಇರಲಿಲ್ಲ. ಆದರೆ ಹಾಗೆ ಜಿಗಿದು ಸುರಕ್ಷಿತವಾಗಿ ಭೂಮಿ ತಲುಪಿದ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಲ್ಯೂಕ್‌, ಹೊಸ ಇತಿಹಾಸ ನಿರ್ಮಿಸಿದರು.

ವಿಮಾನದ ನೆರವಿಂದ ಬರೋಬ್ಬರಿ 7.6 ಕಿ.ಮೀ. ಎತ್ತರ ತಲುಪಿ ಕೆಳಕ್ಕೆ ಧುಮುಕಿದ ಈ ಭೂಪ ಕೆಳಮುಖವಾಗಿ ಬಂದ ವೇಗ ಬರೋಬ್ಬರಿ ಗಂಟೆಗೆ 200 ಕಿ.ಮೀ.!

‘ಹೆವನ್‌ ಸೆಂಟ್‌’ ಹೆಸರಿನ ಈ ಸಾಹಸ ಮಾಡಿದ ಐಕಿನ್ಸ್‌, ಕಳೆದ 26 ವರ್ಷಗಳಲ್ಲಿ 18 ಸಾವಿರ ಬಾರಿ ಸ್ಕೈಡೈವ್‌ ಮಾಡಿದ್ದಾರೆ. ಆದರೆ ಪ್ಯಾರಾಚೂಟ್‌ ಇಲ್ಲದೆ ಜಿಗಿದದ್ದು ಇದೇ ಮೊದಲು ಹಾಗೂ ಇವರೇ ಮೊದಲಿಗರು.

ಮರುಭೂಮಿಯಲ್ಲಿ ಸೇಫ್‌ ಲ್ಯಾಂಡಿಂಗ್‌:
ಭೂಮಿಯಿಂದ 200 ಅಡಿ ಎತ್ತರದಲ್ಲಿ ಹಾಕಲಾಗಿದ್ದ 100 ್ಡ 100 ಅಡಿಯ ಬಲೆಯ ಮೇಲೆ 42 ವರ್ಷದ ಲ್ಯೂಕ್‌ ಕೊನೆಯ ಕ್ಷ ಣದಲ್ಲಿ ಬೆನ್ನು ಕೆಳ ಮಾಡಿ ಬೀಳುತ್ತಿದ್ದಂತೆ ಸಂಭ್ರಮ, ಸಮಾಧಾನ, ಉದ್ವೇಗದ ಕರತಾಡನ, ಉದ್ಘೋಷಗಳು ಕೇಳಿಬಂದವು. ಇನ್ನೇನು ಭೂಮಿಗೆ ತಲುಪಲು ಒಂದೂವರೆ ಸೆಕೆಂಡ್‌ಗಳ ಮುನ್ನ ಮರುಭೂಮಿಯಲ್ಲಿ ಹಿಡಿಯಲಾಗಿದ್ದ ಬೃಹತ್‌ ಬಲೆಯಲ್ಲಿ ಅವರು ಬಂದು ಬಿದ್ದರು.

ಕೊನೆ ಕ್ಷಣದ ನಿರ್ಧಾರ:
ಸಾಹಸ ಪ್ರದರ್ಶನದ ಹಕ್ಕು ಪಡೆದಿದ್ದ ಫಾಕ್ಸ್‌ ಟಿವಿಯ ನಿರೂಪಕ ಗಿಲ್ಡ್‌, ಐಕಿನ್ಸ್‌ ಅವರಿಗೆ ಪ್ಯಾರಾಚೂಟ್‌ ಧರಿಸುವಂತೆ ಆದೇಶಿಸಿದ್ದರೂ, ವಿಮಾನದಿಂದ ಹಾರುವ ಕೊನೆಗಳಿಗೆಯಲ್ಲಿ ಐಕಿನ್ಸ್‌ ಈ ನಿರ್ಧಾರ ಬದಲಿಸಿದ್ದರು. ನೆಟ್‌ನ ಮೇಲೆ ಜಿಗಿಯುವ ಕಾರಣ ಪ್ಯಾರಾಚೂಟ್‌ನೊಂದಿಗೆ ಹಾರುವುದು ಇನ್ನಷ್ಟು ಅಪಾಯಕಾರಿ ಎಂಬುದು ಲ್ಯೂಕ್‌ ಯೋಚನೆಯಾಗಿತ್ತು.

ಮಾಸ್ಕ್‌ ತೆಗೆದು ಕೈಗಿತ್ತರು:
ಹೈ ಆಲ್ಟಿಟ್ಯೂಡ್‌ ಕಾರಣದಿಂದ ಉಸಿರಾಡಲು ಆಮ್ಲಜನಕದ ಮಾಸ್ಕ್‌ ಧರಿಸಿದ್ದರೂ, ಸ್ವಲ್ಪ ಕೆಳಗೆ ಜಿಗಿಯುತ್ತಲೇ ಲ್ಯೂಕ್‌ ಅದನ್ನು ತೆಗೆದು, ತಮ್ಮ ಜತೆ ಪ್ಯಾರಚೂಟ್‌ನೊಂದಿಗೆ ಹಾರುತ್ತಿದ್ದವರ ಕೈಗಿತ್ತಿದ್ದಾರೆ.

ಸಾಹಸಿ ಫ್ಯಾಮಿಲಿ: ಲ್ಯೂಕ್‌ ಅವರ ತಂದೆ, ತಾತ ಕೂಡಾ ಸ್ಕೈಡೈವರ್ಸ್‌ ಆಗಿದ್ದು, 2ನೇ ವಿಶ್ವಯುದ್ಧ ದಲ್ಲಿ ಭಾಗವಹಿಸಿದ ಬಳಿಕ ಸ್ಕೈಡೈವಿಂಗ್‌ ಶಾಲೆ ತೆರೆದಿದ್ದರು. ಪತ್ನಿ ಮೋನಿಕಾ ಇದುವರೆಗೂ 2000 ಸ್ಕೈಡೈವ್‌ ಮಾಡಿದ್ದಾರೆ. 12ನೇ ವರ್ಷಕ್ಕೇ ಮೊದಲ ಜಂಪ್‌ ಮಾಡಿದ್ದ ಲ್ಯೂಕ್‌, ಅಂದಿನಿಂದ ಇಂದಿನವರೆಗೂ ಬಾನಾಡಿಯಂತೆ ಭೂಮಿಗಿಂತ ಹೆಚ್ಚು ಗಗನದಲ್ಲೇ ಬದುಕುತ್ತಿದ್ದಾರೆ.

Comments are closed.