ಕರಾವಳಿ

ಕಾರ್ಕಳದ ಅತ್ತೂರು ಚರ್ಚ್‌ಗೆ ವಿಶ್ವ ಮಾನ್ಯತೆ; ಪವಿತ್ರ ಮಹಾದೇವಾಲಯ ‘ಮೈನರ್ ಬಸಲಿಕಾ’ ಘೋಷಣೆ

Pinterest LinkedIn Tumblr

ಉಡುಪಿ: ಸರ್ವ ದರ್ಮ ಸಮ್ಮಿಲನದ ಕ್ಷೇತ್ರ ಹಾಗೂ ಪವಾಡ ಕ್ಷೇತ್ರ ಅನಿಸಿದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅತ್ತೂರು ಸಂತ ಲಾರೆನ್ಸರ ಚರ್ಚ್ ಗೆ ವಿಶ್ವ ಮಾನ್ಯತೆ ಘೋಷಣೆಯಾಗಿದೆ. ಪೋಪ್ ಪ್ರಾನ್ಸಿಸ್ ಅವರು ಸಂತ ಲಾರೆನ್ಸರ ಕ್ಷೇತ್ರವನ್ನು ಮೈನರ್ ಬಸಿಲಿಕಾ ಎಂದು ಘೋಷಿಸಿದ್ದು ಇದರ ಸಾಂಭ್ರಾಮಿಕ ಘೋಷಣಾ ಸಮಾರಂಭ ಇಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.

ಏನಿದು ಮೈನರ್ ಬಸಿಲಿಕಾ.. ಅತ್ತೂರು ಚರ್ಚ್ ನ ವಿಶೇಷತೆ ಏನು ಇಲ್ಲಿದೆ ನೀಡಿ ಡೀಟೇಲ್ಸ್…

Karkala_Attur Church_Minor Basalika (5) Karkala_Attur Church_Minor Basalika (4) Karkala_Attur Church_Minor Basalika (6) Karkala_Attur Church_Minor Basalika (1) Karkala_Attur Church_Minor Basalika (2) Karkala_Attur Church_Minor Basalika (7) Karkala_Attur Church_Minor Basalika (3) Karkala_Attur Church_Minor Basalika (8)

ಕಾರ್ಕಳದ ಅತ್ತೂರು ಸಂತ ಲಾರೆನ್ಸರ ಕ್ಷೇತ್ರ .. ಇದು ಇತರ ಕ್ಷೇತ್ರಗಳಿಗಿಂತ ಬಿನ್ನ. ಇಲ್ಲಿ ಸ್ವ ಧರ್ಮಿಯರಿಗಿಂತ, ಅನ್ಯ ಧರ್ಮಿಯರೇ ಹೆಚ್ಚಾಗಿ ಬರುತ್ತಾರೆ. ಸಂತ ಲಾರೆನ್ಸರಲ್ಲಿ ತಮ್ಮ ಹರಕೆಯನ್ನ ಇಡುತ್ತಾರೆ. ಬಂದ ಭಕ್ತರ ಹರಕೆಯನ್ನ ಇಡೇರಿಸುವ ಈ ಅತ್ತೂರು ಸಂತ ಲಾರೆನ್ಸ್ ಕ್ಷೇತ್ರ ಸರ್ವಧರ್ಮದ ಸಮ್ಮಿಲನ ಹಾಗೂ ಪವಾಡಕ್ಕೇ ಫೆಮಸ್ಸಾಗಿದೆ. ಇದೀಗ ಈ ಕ್ಷೇತ್ರಕ್ಕೆ ವಿಶ್ವ ಮಾನ್ಯತೆ ಸಿಕ್ಕಿದೆ. ಕ್ಯಾಥೋಲಿಕ್ ಪೋಪ್ ಆಗಿರುವ ಪೋಪ್ ಪ್ರಾನ್ಸಿಸ್ ಅವರು ಈ ಕ್ಷೇತ್ರವನ್ನು ಮೈನರ್ ಬಸಿಲಿಕಾ ಎಂದು ಘ್ಹೋಷಿಸಿದ್ದಾರೆ. ಮೈನರ್ ಬಸಿಲಿಕಾ ಎಂದರೆ ಪವಿತ್ರ ಕಿರಿಯ ಮಹಾ ದೇವಾಲಯ ಎಂದರ್ಥ . ಬೆಂಗಳೂರಿನ ಶಿವಾಜಿ ನಗರದಲ್ಲಿರುವ ಸಂತ ಮೇರಿಯ ಚರ್ಚ್ ಬಿಟ್ಟರೆ ಬಸಿಲಿಕಾ ಮಾನ್ಯತೆ ಪಡೆದ ರಾಜ್ಯದ ಎರಡನೇ ಚರ್ಚ್ ಅತ್ತೂರು ಚರ್ಚ್ ಆಗಿದೆ. ಮಾತ್ರ ಅಲ್ಲ ದೇಶದ ೨೨ ಚರ್ಚ್ ಗಳ ಪೈಕಿ ಅತ್ತೂರು ಚರ್ಚ್ ಒಂದಾಗಿರುವುದು ಕ್ಷೇತ್ರಕ್ಕೆ ಸಂದಿರುವ ವಿಶ್ವ ಮಾನ್ಯತೆ ಇದಾಗಿದೆ.

ಒಂದು ಚರ್ಚ್ ಗೆ ಬಸಿಲಿಕಾ ಅಥವಾ ಪವಿತ್ರ ಕಿರಿಯ ಮಾಹಾ ದೇವಾಲಯ ಎಂಬ ವಿಶ್ವ ಮಾನ್ಯತೆ ಸಿಗಬೇಕಾದ್ರೆ ಅದಕ್ಕೆ ಅದರದ್ದೇ ಆದ ಮಾನದಂಡಗಳಿವೆ. ಚರ್ಚ್ ಅತ್ಯಂತ ಕಲಾತ್ಮಕವಾಗಿರಬೇಕು, ಅದಕ್ಕೆ ದೊಡ್ದದಾದ ಇತಿಹಾಸ ಇರಬೇಕು. ಸಹಸ್ತ್ರಾರು ಭಕ್ತರನ್ನು ಆಕರ್ಷಿಸುವ ಪವಾಡ ಕ್ಷೇತ್ರವಾಗಿರಬೇಕು. ಪರಮ ಪವಿತ್ರ ಬಲಿ ಪೂಜೆ, ಧಾರ್ಮಿಕ ವಿಧಿ ವಿಧಾನ ಶಾಸ್ತ್ರೋಕ್ತ ನಡೆಯಬೇಕು ಹೀಗೆ ಹತ್ತು ಹಲವು ಮಾನದಂಡಗಳಿವೆ. ಈ ಎಲ್ಲಾ ಮಾನದಂಡಗಳನ್ನು ಮೀರಿರುವ ಕಾರ್ಕಳದ ಅತ್ತೂರು ಲಾರೆನ್ಸರ ಕ್ಷೇತ್ರಕ್ಕೆ ಈಗ ವಿಶ್ವಮಾನ್ಯತೆ ಸಿಕ್ಕಿದೆ. ೧೭ನೇ ಶತಮಾನ ಅಂದರೆ ೧೭೫೯ ರಿಂದ ಇಲ್ಲಿಯವರೆಗೆ ಸಂತ ಲಾರೆನ್ಸರ ಪುಣ್ಯ ಕ್ಷೇತ್ರ ಅನೇಕ ಕಾರಣಗಳಿಂದ ಪ್ರಸಿದ್ದಿ ಹಾಗೂ ಪೌರಾಣಿಕ ಹಿನ್ನಲೆಯನ್ನು ಹೊಂದಿತ್ತು. ಪ್ರತೀ ವರ್ಷ ನಡೆಯುವ ಸಂತ ಲಾರೆನ್ಸರ ವಾರ್ಷಿಕ ಮಹೋತ್ಸವಕ್ಕೆ ದೇಶದ ನಾನಾ ಮೂಲೆಗಳಿಂದ ಲಕ್ಷಾಂತರ ಭಕ್ತರು ಬಂದು ತಮ್ಮ ಹರಕೆಯನ್ನು ಅರ್ಪಿಸುವುದು ಹಾಗೂ ಪ್ರಾರ್ಥಿಸುವುದು ಈ ಕ್ಷೇತ್ರದ ಪ್ರಖ್ಯಾತಿಗೆ ಸಾಕ್ಷಿಯಾಗಿದೆ. ಇಂದು ನಡೆದ ಪವಿತ್ರ ಕಿರಿಯ ಮಹಾ ದೇವಾಲಯದ ಘೋಷಣಾ ಸಮಾರಂಭದಲ್ಲಿ ಕಾರ್ಡಿನಲ್ ಆದ ಓಸ್ವಾಲ್ಡ್ ಕಾರ್ಡಿನಲ್ ಗ್ರಾಸಿಯಸ್ ಹಾಗೂ ಕಾರ್ಡಿನಲ್ ಕ್ಲೆಮೀಸ್ ಮಹಾ ದೇವಾಲಯದ ಘೋಷಣೆಯನ್ನು ಮಾಡಿದರು. ಈ ಸಂದರ್ಬ ದೇಶದ ವಿವಿಧ ಕಡೆಯ ೨೫ ಬಿಷಪ್ ಗಳು, ೬ ಮಂದಿ ಆರ್ಚ್ ಬಿಷಪ್ ಗಳು ಭಾಗವಹಿಸಿದ್ದರು. ಬಸಲಿಕಾ ಸಾಂಭ್ರಮಿಕ ಘೋಷಣೆಯ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು.

ದಕ್ಷಿಣ ಭಾರತದ ಅತ್ಯಂತ ಪುಣ್ಯ ಕ್ಷೇತ್ರಗಳ ಪಾಲಿಗೆ ಅತ್ತೂರಿನ ಸಂತ ಲಾರೆನ್ಸರ ಕ್ಷೇತ್ರವೂ ಸೇರ್ಪಡೆಗೊಂಡಿದೆ. ಪವಾಡಗಳ ಕಾರಣದಿಂದ ಪ್ರಸಿದ್ದಿಯನ್ನ ಪಡೆದಿರುವ ಅತ್ತೂರು ಕ್ಷೇತ್ರದ ಪ್ರಸಿದ್ದಿ ಈಗ ವಿಶ್ವಕ್ಕೆ ಹರಡಿದೆ. ಕಾರ್ಕಳದಲ್ಲಿ ಅತ್ತೂರು ಸಂತ ಲಾರೆನ್ಸರ ಭಕ್ತ ಜನತೆಯ ಸಂತೋಷವನ್ನ ಇಮ್ಮಡಿಗೊಳಿಸಿದೆ.

Comments are closed.