ರಾಷ್ಟ್ರೀಯ

ಮಳೆಯ ನೀರಿನ ರಭಸಕ್ಕೆ ಸಿಲುಕಿ ಮುಂದೆ ಹೋಗಲಾಗದೆ ಕಂದಕಕ್ಕೆ ಉರುಳಿದ ಕಾರು…ಈ ವೀಡಿಯೊ ನೋಡಿ…

Pinterest LinkedIn Tumblr

ಉತ್ತರಾಖಂಡ: ಉತ್ತರ ಭಾರತದಲ್ಲಿ ಮಳೆಯ ಅಬ್ಬರ ಅತೀಯಾಗಿದೆ. ಅದರಲ್ಲೂ ಉತ್ತರಾಖಂಡ ರಾಜ್ಯದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ನದಿಗಳೆಲ್ಲವು ತುಂಬಿ ಹರಿಯುತ್ತಿದ್ದು, ರಸ್ತೆಗಳೆಲ್ಲೂ ನದಿಗಳಾಗಿವೆ.

ಕೊಟದ್ವಾರ್ ಜಿಲ್ಲೆಯಲ್ಲಿ ಮಳೆ ನೀರಿನ ರಭಸಕ್ಕೆ ನೋಡ ನೋಡುತ್ತಿದ್ದಂತೆ ಕಾರೊಂದು ಜನರೊಂದಿಗೆ ಕಂದಕಕ್ಕೆ ಉರುಳಿ ಬಿದ್ದಿದೆ. ಕಣಿವೆ ಪ್ರದೇಶದಲ್ಲಿ ಸಾಗುತ್ತಿದ್ದ ಮಾರುತಿ ವ್ಯಾಗನರ್ ಕಾರೊಂದು ಮಳೆಯ ನೀರಿನ ರಭಸಕ್ಕೆ ಸಿಲುಕಿ ಹಿಂದಕ್ಕೂ, ಮುಂದಕ್ಕೂ ಬರಲಾಗದೆ ಕಂದಕ್ಕೇ ಬಿದ್ದಿದೆ.

ಅಕ್ಕ-ಪಕ್ಕದಲ್ಲಿ ನಿಂತಿದ್ದವರು ಇದನ್ನು ವಿಡಿಯೋ ಮಾಡಿದ್ದು ಕಾರಿನಲ್ಲಿ ಇದ್ದವರು ಹೊರ ಬರಲು ಸಹ ಸಾಧ್ಯವಾಗದೆ, ಕಾರಿನೊಂದಿಗೆ ಕಂದಕಕ್ಕೆ ಬಿದ್ದಿದ್ದಾರೆ. ಸಾವು ನೋವಿನ ಕುರಿತು ಮಾಹಿತಿ ಲಭ್ಯವಾಗಿಲ್ಲ.

Comments are closed.