ರಾಷ್ಟ್ರೀಯ

ಸತ್ತ ತಾಯಿಯನ್ನ ಎಬ್ಬಿಸೋಕೆ ಆನೆ ಮರಿ ಪಟ್ಟ ಪಡಿಪಾಟಲು ಎಂತವರ ಕಣ್ಣಲ್ಲು ಕಣ್ಣೀರು ತರಿಸುತ್ತೆ….ಈ ವೀಡಿಯೊ ನೋಡಿ…

Pinterest LinkedIn Tumblr

ಕೊಯಮತ್ತೂರು: ತಾಯಿ ಮಕ್ಕಳ ಸಂಬಂಧ ದೇವರಿಂದಲೂ ಬೇರ್ಪಡಿಸೋಕೆ ಸಾಧ್ಯವಿಲ್ಲ ಅಂತಾರೆ. ಮಕ್ಕಳಿಗೆ ಏನೇ ನೋವಾದ್ರು ಹೆತ್ತ ಕರುಳು ಚುರುಕ್ ಅನ್ನತ್ತೆ. ಹಾಗೇ ತನ್ನ ತಾಯಿ ಸಾವನ್ನಪ್ಪಿದೆ ಅನ್ನೋ ಸಂಗತಿ ತಿಳಿಯದ ಮರಿ ಆನೆಯೊಂದು ತಾಯಿಯನ್ನ ಅತ್ತು ಅತ್ತು ಎಬ್ಬಿಸೋಕೆ ಪ್ರಯತ್ನಿಸಿದ ಮನಕಲಕುವ ದೃಶ್ಯ ತಮಿಳುನಾಡಿನಲ್ಲಿ ನಡೆದಿದೆ.

ಕೊಯಮತ್ತೂರಿನ ಅರಣ್ಯ ಪ್ರದೇಶದಲ್ಲಿ 30 ವರ್ಷದ ಹೆಣ್ಣಾನೆ ಸಾವನ್ನಪ್ಪಿತ್ತು. ಇದನ್ನ ಅರಿಯದ 2 ವರ್ಷದ ಆನೆ ಮರಿ, ತಾಯಿಯನ್ನ ಎಬ್ಬಿಸೋಕೆ ಪಟ್ಟ ಪಡಿಪಾಟಲು ಎಂತವರ ಕಣ್ಣಲ್ಲು ಕಣ್ಣೀರು ತರಿಸುತ್ತೆ. ಅಮ್ಮನನ್ನ ಎಬ್ಬಿಸೋಕೆ ಅತ್ತಿಂದಿತ್ತ ಇತ್ತಿಂದತ್ತ ಅತ್ತು ಅತ್ತು ಓಡ್ತಿತ್ತು. ಅಲ್ಲದೆ ಆನೆ ಬಳಿ ಯಾರು ಬಂದ್ರೂ ಅಟ್ಟಾಡಿಸ್ತಿತ್ತು.

ಬರೋಬ್ಬರಿ 36 ಗಂಟೆಗಳ ಕಾಲ ಮೃತ ತಾಯಿಯ ಪಕ್ಕದಲ್ಲೇ ಇದ್ದ ಮರಿ ಆನೆ ಸ್ವಲ್ಪವೂ ಕದಲುತ್ತಿರಲಿಲ್ಲ. ಆನೆಯ ಪಕ್ಕದಲ್ಲೇ ನಿಂತು ತನ್ನ ಪುಟ್ಟ ಸೊಂಡಿಲಿನಿಂದ ತಾಯಿಯನ್ನ ಎದ್ದೇಳಿಸುವ ವಿಫಲ ಪ್ರಯತ್ನ ಮಾಡುತ್ತಿತ್ತು.

ಇದಾದ ಬಳಿಕ ಅರಣ್ಯ ಸಿಬ್ಬಂದಿ ಮರಿ ಆನೆಗೆ ಬಾಳೆಹಣ್ಣು, ಹಲಸಿನ ಹಣ್ಣು, ಕಬ್ಬನ್ನು ಸ್ವಲ್ಪ ದೂರದಲ್ಲೇ ಇಟ್ಟು ಮೃತ ಆನೆಯಿಂದ ದೂರು ಹೋಗುವಂತೆ ಮಾಡಿದ್ರು. ಇತ್ತ ಮರಿ ಆನೆ ಹಣ್ಣನ್ನು ತಿನ್ನುತ್ತಿದ್ದ ವೇಳೆ ಆನೆಯನ್ನ ಪರೀಕ್ಷಿಸಿದ ವೈದ್ಯರು ತೀವ್ರ ರಕ್ತಸ್ರಾವದಿಂದ ಆನೆ ಸಾವನ್ನಪ್ಪಿರೋದಾಗಿ ತಿಳಿಸಿದ್ದಾರೆ.

Comments are closed.