ರಾಷ್ಟ್ರೀಯ

ಡಾ.ಜಾಕಿರ್ ನಾಯಕ್ ರೊಂದಿಗಿನ ದಿಗ್ವಿಜಯ್ ಸಿಂಗ್ ವೇದಿಕೆ ಹಂಚಿಕೊಂಡಿದ್ದ ವಿಡಿಯೋ ವೈರಲ್

Pinterest LinkedIn Tumblr

https://youtu.be/f5h-Q9tI744

ನವದೆಹಲಿ: ವಿವಾದಿತ ಬೋಧಕ, ಮೌಲ್ವಿ ಡಾ.ಜಾಕಿರ್ ನಾಯಕ್ ಅವರನ್ನು ಶಾಂತಿದೂತ ಎಂದು ಕರೆದಿದ್ದ ಹಿರಿಯ ಕಾಂಗ್ರೆಸ್ನಾಯಕ ದಿಗ್ವಿಜಯ್ ಸಿಂಗ್ ಅವರಿಗೆ ಈಗ ಸಂಕಷ್ಟ ಎದುರಾಗಿದೆ.

2012ರಲ್ಲಿ ಕಾರ್ಯಕ್ರಮವೊಂದರಲ್ಲಿ ವೇದಿಕೆ ಡಾ.ಜಾಕಿರ್ ನಾಯಕ್ ರೊಂದಿಗೆ ವೇದಿಕೆ ಹಂಚಿಕೊಂಡಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಅಲ್ಲದೆ ಈ ವಿಡಿಯೋದಲ್ಲಿ ದಿಗ್ವಿಜಯ್ ಸಿಂಗ್ ನಾಯಕ್ ನನ್ನು ಶಾಂತಿದೂತ ಎಂದು ಕರೆದಿದ್ದಾರೆ. ಅಲ್ಲದೆ ಜಾಕಿರ್ಗೆ ಆತ್ಮೀಯ ಅಪ್ಪುಗೆ ನೀಡಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

ಢಾಕಾದ ಉಗ್ರರು ಜಾಕಿರ್ ಮಾತುಗಳಿಂದ ಉತ್ತೇಜಿತರಾಗಿ ರೆಸ್ಟೋರೆಂಟ್ ಮೇಲೆ ದಾಳಿ ಮಾಡಿ 20 ಜನರ ದಾರುಣ ಸಾವಿಗೆ ಕಾರಣವಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ದಿಗ್ವಿಜಯ್, ಜಾಕಿರ್ ಅಪ್ಪುಗೆಯ ಚಿತ್ರಗಳು ‘ಫ್ರೆಂಡ್’ ಎಂಬ ನಾಮಕರಣದಲ್ಲಿ ಹರಿದಾಡುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ದಿಗ್ವಿಜಯ್ ಸಿಂಗ್, ಅಂದು ನಾನು ಕೋಮುಸೌಹಾರ್ದದ ಬಗ್ಗೆ ಮಾತನಾಡಿದ್ದೇನೆ. ಜಾಕಿರ್ ನಾಯಕ್ ಐಎಸ್ಐಎಸ್ ನೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಸಾಕ್ಷ್ಯಗಳಿದ್ದರೆ ಬಾಂಗ್ಲಾದೇಶ ಕ್ರಮ ಕೈಗೊಳ್ಳಲಿ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಈ ಸಂಬಂಧ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಮುಖಂಡರು, ಕಾಂಗ್ರೆಸ್ನವರು ಉಗ್ರರಿಗೆ ಮತ್ತು ಉಗ್ರ ಸಂಘಟನೆಗಳಿಗೆ ಬೆಂಬಲ ನೀಡುವುದು ಹೊಸ ವಿಷಯವೇನಲ್ಲ ಎಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಾಕಿರ್, ನಾನು ಮುಸ್ಲಿಂರಿಗೆ ಸಮಾಜದ ದುಷ್ಟಶಕ್ತಿ ವಿರುದ್ಧ ಹೋರಾಡಲು ಉಗ್ರವಾದ ಮೈಗೂಡಿಸಿಕೊಳ್ಳಿ ಎಂದು ಬೋಧನೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆ.

Comments are closed.