ರಾಷ್ಟ್ರೀಯ

ಗುಜರಾತ್‍ನ ವಡೋದರಾದಲ್ಲಿ ಮೋಜಿಗಾಗಿ ನಾಯಿಯನ್ನು ಬೈಕ್‍ಗೆ ಕಟ್ಟಿ ಎಳೆದು ಕೊಂಡೋದ ಕಟುಕರು ! ಇಲ್ಲಿದೆ ವೀಡಿಯೋ

Pinterest LinkedIn Tumblr

ವಡೋದರ: ಮೋಜಿಗಾಗಿ ಇಬ್ಬರು ಯುವಕರು ನಾಯಿಯನ್ನ ಬೈಕ್‍ಗೆ ಕಟ್ಟಿ ವೇಗವಾಗಿ ಚಾಲನೆ ಮಾಡಿದ ಅಮಾನವೀಯ ಘಟನೆ ಗುಜರಾತ್‍ನ ವಡೋದರಾದಲ್ಲಿ ನಡೆದಿದೆ.

ಇಲ್ಲಿನ ಸಾಮ ಸಾವ್ಲಿ ರಸ್ತೆಯಲ್ಲಿ ಯುವಕರು ನಾಯಿಯನ್ನ ಬೈಕ್‍ಗೆ ಕಟ್ಟಿ ದರದರನೆ ಎಳೆದುಕೊಂಡು ಹೋಗುತ್ತಿದ್ದುದನ್ನು ನೋಡಿದ್ದ ಮಾಯಾಂಕ್ ಮತ್ತು ದರ್ಶಿತ್ ಎಂಬ ಇಬ್ಬರು ಸ್ಥಳೀಯರು ಬೈಕನ್ನು ಹಿಂಬಾಲಿಸಿ ನಾಯಿಯನ್ನ ರಕ್ಷಿಸಿದ್ದಾರೆ. ನಾಯಿಯ ಅಂಗಾಲುಗಳು ತೀವ್ರವಾಗಿ ಗಾಯಗೊಂಡು ರಕ್ತಸಿಕ್ತವಾಗಿದ್ದವು. ಇದೀಗ ನಾಯಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಸದ್ಯಕ್ಕೆ ಪೊಲೀಸರು ಆರೋಪಿಗಳಾದ ಸೋನು ಮತ್ತು ವಿಕ್ರಮ್‍ನನ್ನು ಬಂಧಿಸಿದ್ದಾರೆ. ಈ ಅಮಾನವೀಯ ಕೃತ್ಯವನ್ನೆಸಗಿರುವ ಈ ಇಬ್ಬರಿಗೆ ಪೊಲೀಸರು ಪ್ರಶ್ನಿಸಿದಾಗ ನಾವು ಮೋಜಿಗಾಗಿ ಈ ರೀತಿ ಮಾಡಿದ್ವಿ ಅಂತ ಒಪ್ಪಿಕೊಂಡಿದ್ದಾರೆ.

Comments are closed.