ರಾಷ್ಟ್ರೀಯ

ತನ್ನ ಫ್ರಿಡ್ಜ್ ಸಮಸ್ಯೆ ಬಗ್ಗೆ ದೂರು ಕೊಟ್ಟ ವ್ಯಕ್ತಿಗೆ ಸುಷ್ಮಾ ಸ್ವರಾಜ್ ನೀಡಿದ ಉತ್ತರ…!

Pinterest LinkedIn Tumblr

sushma

ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಾಮಾಜಿಕ ಜಾಲತಾಣಗಳಲ್ಲಿ ಸಮಸ್ಯೆಗಳನ್ನು ಹೇಳಿಕೊಂಡು ಸಹಾಯ ಕೇಳಿದ ಎಷ್ಟೋ ಮಂದಿಗೆ ಸ್ಪಂದಿಸಿ ಅವರ ಸಮಸ್ಯೆ ಬಗೆಹರಿಸಿ ಪ್ರಸಂಸೆ ಗಿಟ್ಟಿಸಿದ್ದಾರೆ. ಆದರೆ ವ್ಯಕ್ತಿಯೊಬ್ಬ ತನ್ನ ರೆಫ್ರಿಜರೇಟರ್ ಸರಿಯಾಗಿ ಕೆಲಸ ಮಾಡ್ತಿಲ್ಲ ಅಂತ ಸಚಿವೆಗೆ ಟ್ವೀಟ್ ಮಾಡಿದ್ದು ಸುಷ್ಮಾ ಸ್ವರಾಜ್ ಕೂಡ ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ವೆಂಕಟ್ ಅನ್ನೋ ವ್ಯಕ್ತಿ ತಾನು ಎರಡು ತಿಂಗಳ ಹಿಂದೆ ಖರೀದಿಸಿದ ಫ್ರಿಡ್ಜ್ ಸರಿಯಾಗಿ ಕೆಲಸ ಮಾಡ್ತಿಲ್ಲ. ಕಂಪನಿಯವರು ಅದನ್ನ ಬದಲಾಯಿಸಲು ಒಪ್ಪುತ್ತಿಲ್ಲ. ಹೀಗಾಗಿ ನೀವು ನನಗೆ ಸಹಾಯ ಮಾಡಬೇಕು ಅಂತ ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ರಾಮ್‍ವಿಲಾಸ್ ಪಾಸ್ವಾನ್ ಹಾಗೂ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿದ್ರು.

ಸುಷ್ಮಾ ಪ್ರತಿಕ್ರಿಯೆ: ವೆಂಕಟ್ ಅವರ ಟ್ವೀಟನ್ನ ಓದಿದ ಸಚಿವೆ ಸುಷ್ಮಾಸ್ವರಾಜ್ ಅದಕ್ಕೆ ಪ್ರತಿಕ್ರಿಯೆ ಕೂಡ ನೀಡಿದ್ದಾರೆ. ಸಹೋದರ ನಾನು ನಿಮಗೆ ರೆಫ್ರಿಜರೇಟರ್ ವಿಷಯದಲ್ಲಿ ಸಹಾಯ ಮಾಡಲು ಸಾಧ್ಯವಿಲ್ಲ. ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವುದರಲ್ಲಿ ನಾನು ಬ್ಯುಸಿಯಾಗಿದ್ದೇನೆ ಅಂತ ಟ್ವೀಟ್‍ಗೆ ಉತ್ತರಿಸಿದ್ದಾರೆ.

ಸುಷ್ಮಾ ಸ್ವರಾಜ್ ಅವರ ಈ ಉತ್ತರವನ್ನು ಟ್ವಿಟ್ಟರಿಗರು ಮೆಚ್ಚಿದ್ದಾರೆ. ಈವರೆಗೆ ಸುಷ್ಮಾ ಅವರು ಮಾಡಿರುವ ಈ ಟ್ವೀಟ್ 5300ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ. 5 ಸಾವಿರಕ್ಕೂ ಹೆಚ್ಚು ಮಂದಿ ಟ್ವೀಟನ್ನು ಲೈಕ್ ಮಾಡಿದ್ದಾರೆ.

ಇತ್ತೀಚೆಗೆ ಒಲಿಂಪಿಕ್ ಗೋಲ್ಡ್ ಮೆಡಲಿಸ್ಟ್ ಅಭಿನವ್ ಬಿಂದ್ರಾ ಅವರ ತರಬೇತುದಾರ ಪಾಸ್‍ಪೋರ್ಟ್ ಕಳೆದುಕೊಂಡು ಸುಷ್ಮಾ ಸ್ವರಾಜ್ ಟ್ವಿಟ್ಟರ್ ಮೂಲಕ ಈ ಬಗ್ಗೆ ಮಾಹಿತಿ ಪಡೆದು ಅವರಿಗೆ ಸಹಾಯ ಮಾಡಿದ್ರು.

Comments are closed.