https://youtu.be/vXQVijvoSQU
ಗುಜರಾತ್: ಎಮ್ಮೆಯೊಂದು ಸಿಂಹವನ್ನೇ ಬೆದರಿಸಿ ಓಡಿಸಿದ ಘಟನೆ ಗುಜರಾತ್‍ನ ಗಿರ್ ರಾಷ್ಟ್ರೀಯ ಉದ್ಯಾನದಲ್ಲಿ ನಡೆದಿದೆ.
ಜೂನ್ 5 ರಂದು ಈ ಘಟನೆ ನಡೆದಿದ್ದು, ಸಫಾರಿಗೆ ಬಂದಿದ್ದ ಪ್ರವಾಸಿಗರು ಎಮ್ಮೆ ಸಿಂಹವನ್ನು ಅಟ್ಟಿಸಿಕೊಂಡು ಹೋಗೋ ದೃಶ್ಯಾವಳಿಯನ್ನ ಸೆರೆಹಿಡಿದಿದ್ದಾರೆ.
ಪ್ರವಾಸಿಗರ ಜೀಪ್ ನಿಂತಿದ್ದ ರಸ್ತೆಯಲ್ಲಿ ಕಾಣಿಸಿಕೊಂಡ ಹೆಣ್ಣು ಸಿಂಹ ಮೆಲ್ಲನೆ ಹೆಜ್ಜೆ ಹಾಕುತ್ತಾ ಬರುತ್ತಿತ್ತು. ಪ್ರವಾಸಿಗರು ಸಿಂಹದ ಫೋಟೋ ಕ್ಲಿಕ್ಕಿಸುವಲ್ಲಿ ಬ್ಯುಸಿಯಾಗಿದ್ರು. ಈ ವೇಳೆ ರಸ್ತೆಯ ಮತ್ತೊಂದು ಬದಿಯಿಂದ ಎಮ್ಮೆಗಳ ಹಿಂಡು ಬರುತ್ತಿತ್ತು.
ಸಿಂಹವನ್ನು ನೊಡಿದ್ದೇ ತಡ ಎಮ್ಮೆಯೊಂದು ನುಗ್ಗಿ ಬಂದು ಹೆಣ್ಣು ಸಿಂಹವನ್ನ ಬೆನ್ನಟ್ಟಿತ್ತು. ಪ್ರವಾಸಿಗರ ಮುಂದೆ ಪೋಸ್ ನೀಡ್ತಿದ್ದ ಸಿಂಹ ಎಮ್ಮೆಗೆ ಹೆದರಿ ಎದ್ನೋ ಬಿದ್ನೋ ಅಂತ ಅಲ್ಲಿಂದ ಓಡಲು ಶುರು ಮಾಡಿತ್ತು.
Comments are closed.