
ಅಬ್ಬಾ…, ನಂಬಲಿಕ್ಕೆ ಕಷ್ಟ. ಆದರೂ ಇದು ಸತ್ಯ. ಕೀನ್ಯಾದ ಬಹುತೇಕ ಭಾಗಗಳನ್ನು ಕತ್ತಲಲ್ಲಿ ಇರುವಂತೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ. ಇಲ್ಲಿನ ಗಿಟಾರು ಜಲವಿದ್ಯುತ್ ಕೇಂದ್ರದಲ್ಲಿರುವ ಗ್ರಿಡ್ನ ಉಪಕರಣ ಕೇಬಲ್ಗಳನ್ನು ಕಡಿದು ಕತ್ತರಿಸಿದ ಪರಿಣಾಮ ಮಂಗಳವಾರ ಕೀನ್ಯಾದ ಹೆಚ್ಚಿನ ಭಾಗಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ವಾಹಕ ಕೆನ್ಜೆನ್, ಜನತೆ ಗ್ರಿಡ್ಗೆ ಕರೆ ಮಾಡಿ ವಿದ್ಯುತ್ ಇಲ್ಲ ಎಂದು ದೂರು ನೀಡಿದಾಗ ಅಧಿಕಾರಿಗಳಿಗೆ ಕಾರಣ ಹೇಳೋದೇ ಮುಜುಗರ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಮಂಗಗಳ ‘ಮಂಗಾಟ’ ಜಾಸ್ತಿಯಾಗಿದ್ದು, ಇದರಿಂದ 180 ಮೆಗಾವ್ಯಾಟ್ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಕೇಬಲ್ಗಳನ್ನೆಲ್ಲ ಕಡಿದು ಹಾಕುತ್ತಿವೆ. ಇದರಿಂದಾಗಿ ಹೆಚ್ಚೂಕಡಿಮೆ ನಾಲ್ಕು ಗಂಟೆಗಳ ಕಾಲ ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎಂದಿದ್ದಾರೆ.
ಇದರಿಂದಾಗಿ ವಿದ್ಯುದಾಗಾರವನ್ನು ಮಂಗಗಳಿಂದ ಮುಕ್ತಗೊಳಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
Comments are closed.