ರಾಷ್ಟ್ರೀಯ

ಹೃದಯ ಸಮಸ್ಯೆಗಳಿಂದ ಬಳಲುತ್ತಿದ್ದ ಆರು ವರ್ಷದ ಬಾಲೆ ಪತ್ರಕ್ಕೆ ಸ್ಪಂದಿಸಿದ ಪ್ರಧಾನಿ ಮೋದಿ ; ಶಸ್ತ್ರ ಚಿಕಿತ್ಸೆ ಫಲಪ್ರದ

Pinterest LinkedIn Tumblr

girl

ಪುಣೆ: ಆರು ವರ್ಷದ ಪುಟ್ಟ ಬಾಲಕಿ ಹಲವು ದಿನಗಳಿಂದ ಹೃದಯ ಸಮಸ್ಯೆಗಳಿಂದ ಬಳಲುತ್ತಿದ್ದಳು. ಚಿಕಿತ್ಸೆ ಪಡೆಯಲು ಹಣವಿರಲಿಲ್ಲ. ಇದರಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾಳೆ. ಬಾಲಕಿಯ ನೋವಿಗೆ ಸ್ಪಂದಿಸಿದ ಪ್ರಧಾನಿ ಆರ್ಥಿಕ ಸಹಾಯ ಮಾಡಿದ್ದು, ಇದೀಗ ಚಿಕಿತ್ಸೆ ಫಲಪ್ರದವಾಗಿದೆ.

ವೈಶಾಲಿ ಯಾದವ್ ಎಂಬ ಬಾಲಕಿಯ ಹೃದಯದಲ್ಲಿ ರಂಧ್ರವಾಗಿತ್ತು. ಇದರಿಂದಾಗಿ ಎರಡನೇ ತರಗತಿ ಓದುತ್ತಿರುವ ಈ ಪುಟ್ಟ ಬಾಲಕಿ ಅಪಾರವಾದ ನೋವನ್ನು ಅನುಭವಿಸುತ್ತಿದ್ದಳು. ತಂದೆ ಅರೆಕಾಲಿಕ ವರ್ಣ ಚಿತ್ರಕಾರರಾಗಿದ್ದರಿಂದ ಕುಟುಂಬದ ಆದಾಯ ದಿನ ನಿತ್ಯದ ಖರ್ಚಿಗೆ ಸಾಕಾಗುತ್ತಿತ್ತು. ವೈಶಾಲಿಯ ಹೃದಯ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಬೇಕಾದ ಹಣ ಅವರ ಬಳಿ ಇರಲಿಲ್ಲ. ಮಾತ್ರೆಗಳಿಗೆ ವೈಶಾಲಿ ಬಳಿಯಿರುವ ಆಟಿಕೆ ಹಾಗೂ ಸೈಕಲ್ ಮಾರಿ ಹಣ ಹೊಂದಿಸಿದ್ದರು.

ಕುಟುಂಬದ ಪರಿಸ್ಥಿತಿ ಅರಿತ ಬಾಲಕಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾಳೆ. ಅದರಲ್ಲಿ ತನ್ನ ರೋಗದ ತೀವ್ರತೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಇದಕ್ಕೆ ತಗಲುವ ಖರ್ಚು ಎಷ್ಟು ಎನ್ನುವುದನ್ನು ನಮೂದಿಸಿದ್ದಾಳೆ. ಈ ಪತ್ರ ಓದಿದ ಪ್ರಧಾನಿ ಅವರು ಬಾಲಕಿಯ ನೆರವಿಗೆ ಧಾವಿಸುವಂತೆ ಪುಣೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಇದರಿಂದಾಗಿ ಜಿಲ್ಲಾಡಳಿತ ವೈಶಾಲಿಯ ವಿಳಾಸ ಪತ್ತೆ ಮಾಡಿ ರೂಬೀ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರಚಿಕಿತ್ಸೆ ನೀಡಿದ್ದಾರೆ. ಇದೀಗ ವೈಶಾಲಿ ಹೃದಯ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿದೆ.

Comments are closed.