ಮನೋರಂಜನೆ

ಭಾರತ ತಂಡದ ನಾಯಕತ್ವದ ಬಗ್ಗೆ ಕೊನೆಗೂ ಮೌನ ಮುರಿದ ಧೋನಿ ! ಹೊಸ್ ಕೋಚ್ ಆಯ್ಕೆ ಕುರಿತು ಹೇಳಿದ್ದೇನು…?

Pinterest LinkedIn Tumblr

dhoni

ನವದೆಹಲಿ: ಟೀಂ ಇಂಡಿಯಾಗೆ ಕೋಚ್ ಆಗಿ ಬರುವ ವ್ಯಕ್ತಿಗೆ ಕಡ್ಡಾಯವಾಗಿ ಭಾರತೀಯ ಕ್ರೀಡಾ ಸಂಸ್ಕೃತಿಯ ಅರಿವಿರಬೇಕು ಎಂದು ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.

ಟೀಂ ಇಂಡಿಯಾಗೆ ನೂತನ ಕೋಚ್ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ಬಿಸಿಸಿಐ ಹೊರಡಿಸಿದ್ದ ಷರತ್ತುಗಲ್ಲಿ ಹಿಂದಿ ಭಾಷೆಯ ಅರಿವಿರಬೇಕು ಎಂಬ ವಿಚಾರಕ್ಕೆ ಕುರಿತಂತೆ ಮಾತನಾಡಿದ ಮಹೇಂದ್ರ ಸಿಂಗ್ ಧೋನಿ, ಭಾರತ ತಂಡಕ್ಕೆ ಕೋಚ್ ಆಗುವ ವ್ಯಕ್ತಿಗೆ ಭಾಷೆಗಿಂತ ಭಾರತೀಯ ಕ್ರೀಡಾ ಸಂಸ್ಕೃತಿಯ ಅರಿವಿರಬೇಕು ಎಂದು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಭಾರತ ತಂಡದಲ್ಲಿ ಭಾಷಾ ಸಮಸ್ಯೆ ಅಷ್ಟಾಗಿ ಇಲ್ಲ. ಈಗ ತಂಡ ಸೇರಿಕೊಳ್ಳುತ್ತಿರುವ ಹುಡುಗರಿಗೆ ಇಂಗ್ಲೀಷ್ ಭಾಷೆಯ ಅರಿವಿದೆ. ಒಂದು ವೇಳೆ ಭಾಷೆ ಗೊತ್ತಿಲ್ಲದ ಆಟಗಾರರನಿಗೆ ಸಹ ಆಟಗಾರರು ಸದಾ ನೆರವಿಗೆ ನಿಲ್ಲುತ್ತಾರೆ. ಹೀಗಾಗಿ ಕೋಚ್ ಹಾಗೂ ಆಟಗಾರರ ನಡುವೆ ಭಾಷಾ ಸಮಸ್ಯೆ ಅಷ್ಟಾಗಿ ಕಾಣುವುದಿಲ್ಲವೆಂದು ನನ್ನ ಅಭಿಪ್ರಾಯ. ಕೋಚ್ ಆಗಿ ಆಯ್ಕೆಯಾಗುವ ವ್ಯಕ್ತಿಗೆ ಭಾರತೀಯ ಕ್ರೀಡಾ ಸಂಸ್ಕೃತಿಯ ಅರಿವಿದ್ದರೆ ಆಟಗಾರರೊಂದಿಗೆ ಹೊಂದಿಕೊಳ್ಳಲು ನೆರವಾಗುತ್ತದೆ ಎಂದು ಧೋನಿ ಹೇಳಿದ್ದಾರೆ.

ನಾಯಕ ಸ್ಥಾನದ ಬಗ್ಗೆ ಬಿಸಿಸಿಐ ನಿಧಾ೯ರ
ಏಕದಿನ ಮತ್ತು ಟಿ20 ತಂಡದ ನಾಯಕರಾಗಿರುವ ಮಹೇಂದ್ರ ಸಿಂಗ್ ಧೋನಿ ನಾಯಕನಾಗಿ ಮು೦ದುವರಿಯುವ ಬಗ್ಗೆ ಇದ್ದ ಉಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದು, ತ೦ಡದ ನಾಯಕನಾಗಿ ನನ್ನ ಭವಿಷ್ಯವನ್ನು ಬಿಸಿಸಿಐ ನಿಧ೯ರಿಸುತ್ತದೆ ಎ೦ದು ಧೋನಿ ವಿವರಿಸಿದ್ದಾರೆ.

“ನಾಯಕ ಸ್ಥಾನದಿಂದಾಗಿ ನಾನು ಆಟವನ್ನು ಎ೦ಜಾಯ್ ಮಾಡುತ್ತಿಲ್ಲ ಎನ್ನುವುದು ತಪ್ಪು. ನಾಯಕ ಸ್ಥಾನದಿ೦ದ ಕೆಳಗಿಳಿಯುವ ಅ೦ತಿಮ ನಿಧಾ೯ರವನ್ನು ಬಿಸಿಸಿಐ ಮಾಡುತ್ತದೆ. ಈ ಬಗ್ಗೆ ನಾನು ನಿಧಾ೯ರ ಮಾಡುವುದು ಸರಿಯಲ್ಲ’ ಎ೦ದು ಧೋನಿ ಹೇಳಿದರು.

ಜಿಂಬಾಬ್ವೆ ಪ್ರವಾಸ ನನಗೆ ಹೊಸ ಸವಾಲು
ಇದೇ ವೇಳೆ ಜಿಂಬಾಂಬ್ವೆ ಪ್ರವಾಸದ ಕುರಿತು ಮಾತನಾಡಿದ ಧೋನಿ, “ಜಿ೦ಬಾಬ್ವೆ ಪ್ರವಾಸ ವೈಯುಕ್ತಿಕವಾಗಿ ನನಗೆ ಭಿನ್ನ ಅನುಭವ ನೀಡಲಿದೆ. ಹಲವು ವಷ೯ಗಳ ಕಾಲ ಒ೦ದೇ ತ೦ಡದೊ೦ದಿಗೆ ಆಡಿದರೆ, ನಮ್ಮ ಜವಾಬ್ದಾರಿ ಏನು ಎನ್ನುವುದರ ಬಗ್ಗೆ ತಿಳಿದಿರುತ್ತದೆ. ಆದರೆ, ಈಗ ನಾನು ಕೆಲವು ಆಟಗಾರರೊ೦ದಿಗೆ ಇದೇ ಮೊದಲ ಬಾರಿಗೆ ದ್ವಿಪಕ್ಷೀಯ ಸರಣಿ ಆಡುತ್ತಿದ್ದೇನೆ. ಹೀಗಾಗಿ ಈ ಸರಣಿ ನನಗೆ ಹೊಸ ಸವಾಲು ಎ೦ದು ಧೋನಿ ವಿವರಿಸಿದರು.

Comments are closed.