ಮನೋರಂಜನೆ

ಸಚಿನ್, ಲತಾ ಮಂಗೇಶ್ಕರ್​ಗೆ ವ್ಯಂಗ್ಯ; ನಟ ತನ್ಮಯ್ ಭಟ್ ವಿರುದ್ಧ ಎಫ್​ಐಆರ್…ಇಲ್ಲಿದೆ ವೀಡಿಯೋ

Pinterest LinkedIn Tumblr

ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಹಾಗೂ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರನ್ನು ವ್ಯಂಗ್ಯ ಮಾಡಿದ ಆರೋಪದ ಮೇಲೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಎಮ್ನ್ಎಸ್) ನಟ ತನ್ಮಯ್ ಭಟ್ ವಿರುದ್ಧ ಸೋಮವಾರ ಎಫ್ಐಆರ್ ದಾಖಲಿಸಿದೆ.

ಎಮ್ನ್ಎಸ್ ಚಿತ್ರಪಟ ಸೇನೆ ಅಧ್ಯಕ್ಷ ಅಮೆಯ ಖೋಪ್ಕರ್ ಅವರು ಶಿವರಾಜ್ ಫಾರ್ಕ್ ಪೊಲೀಸ್ ಠಾಣೆಗೆ ಭೇಟಿ ನೀಡಿ, ಎಐಬಿ ಹಾಸ್ಯ ಸಂಸ್ಥೆ ಮುಖ್ಯಸ್ಥ ತನ್ಮಯ್ ಭಟ್ ವಿರುದ್ಧ ದೂರು ದಾಖಲಿಸಿದ್ದಾರೆ. ಬಳಿಕ ಪ್ರತಿಕ್ರಿಯಿಸಿದ ಎಮ್ನ್ಎಸ್ ಅಧ್ಯಕ್ಷ, ಈ ರೀತಿ ವಿಡೀಯೋ ಚಿತ್ರೀಕರಣ ಮಾಡುವುದು ಕೀಳು ಮಟ್ಟದ ಪ್ರಚಾರಕ್ಕಾಗಿ. ಕೂಡಲೇ ಇವರನ್ನು ಬಂಧಿಸಬೇಕು. ಇಲ್ಲವಾದರೆ ರಸ್ತೆಗಿಳಿದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ತನ್ಮಯ್ ಭಟ್ ಅವರ ಈ ಹಾಸ್ಯ ಕಿರು ಚಿತ್ರದ ಕುರಿತು ಬಾಲಿವುಡ್ ನಟರಾದ ಅನುಪಮ್ ಖೇರ್ ಹಾಗೂ ರಿತೇಶ್ ದೇಶ್ಮುಖ್ ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರಿದ್ದಾರೆ. ನನಗೆ 9 ಬಾರಿ ಉತ್ತಮ ಹಾಸ್ಯ ನಟ ಎಂಬ ಪ್ರಶಸ್ತಿ ಲಭಿಸಿದೆ. ಅಷ್ಟೇ ಅಲ್ಲ ನನಗೆ ಉತ್ತಮ ಹಾಸ್ಯ ಪ್ರಜ್ಞೆ ಕೂಡ ಇದೆ. ಆದರೆ ಇಂತಹ ಕೀಳು ಮಟ್ಟದ ಹಾಸ್ಯವನ್ನು ನಿರೀಕ್ಷಿಸಿರಲಿಲ್ಲ ಎಂದು ಹಿರಿಯ ನಟ ಅನುಪಮ್ ಖೇರ್ ತಿಳಿಸಿದ್ದಾರೆ.

ಮಹಾನ್ ಸಾಧಕರ ವಿಚಾರವಾಗಿ ನಿರ್ಮಿಸಿರುವ ಹಾಸ್ಯದಿಂದ ನನಗೆ ಆಘಾತವಾಗಿದೆ. ಇದು ಹಾಸ್ಯವಲ್ಲ ಅಗೌರವ ಎಂದು ರಿತೇಶ್ ದೇಶ್ಮುಖ್ ಹೇಳಿದ್ದಾರೆ.

ಸಚಿನ್ ಹಾಗೂ ಲತಾ ಅಂತರ್ಯುದ್ಧ ಎಂಬ ಶಿರ್ಷಿಕೆ ಅಡಿಯಲ್ಲಿ ಕೀಳು ಮಟ್ಟದ ಹಾಸ್ಯ ನಿರ್ಮಿಸಿದ ತನ್ಮಯ್, ಮುಂದುವರೆದು ಸಚಿನ್ ಹಾಗೂ ವಿರಾಟ್ ಇವರಲ್ಲಿ ಯಾರು ಬೆಸ್ಟ್ ಎಂಬ ಪ್ರಶ್ನೆ ಹಾಕಿದ್ದರು. ಈ ವಿಡೀಯೋ ತುಣುಕನ್ನು ಮೇ 26ರಂದು ಫೇಸ್ಬುಕ್ಗೆ ಅಪ್ಲೌಡ್ ಮಾಡಿದ್ದರು.

Comments are closed.