ಮುಂಬೈ

ಅಂಗಾಂಗ ದಾನಿಗೆ ಸಿಬಿಎಸ್‌ಸಿ ಪರೀಕ್ಷೆಯಲ್ಲಿ 8.6 ಅಂಕ ! ಆದರೆ ಆ ಖುಷಿ ಅನುಭವಿಸಲು ಅವಳೇ ಇಲ್ಲ…

Pinterest LinkedIn Tumblr

kejal pande

ಮುಂಬೈ: ಸಿಬಿಎಸ್‌ಇಯ 10ನೇ ತರಗತಿ ಪರೀಕ್ಷೆಯಲ್ಲಿ ಠಾಣೆಯ ಹುಡುಗಿ ಕೇಜಲ್ ಪಾಂಡೆ 8.6 ಸಿಜಿಪಿಎ ಅಂಕ ಗಳಿಸಿದ್ದಾಳೆ. ಆದರೆ ಆ ಖುಷಿ ಅನುಭವಿಸಲು ಅವಳೇ ಇಲ್ಲ. ಇಷ್ಟಾದರೂ ಆಕೆಯ ಪೋಷಕರು ಇತರ ಮೂವರಲ್ಲಿ ಕೇಜಲ್‌ಳನ್ನು ಕಾಣುತ್ತಾ ಒಂದಿಷ್ಟು ಸಾಂತ್ವನ ಪಡೆದುಕೊಳ್ಳುತ್ತಿದ್ದಾರೆ.

ಕಳೆದ ಏಪ್ರಿಲ್‌ನಲ್ಲಿ ಬೈಕ್ ಒಂದರ ಹಿಂಬದಿ ಸವಾರಳಾಗಿ ಹೋಗುತ್ತಿದ್ದ ಕೇಜಲ್‌ಳ ಮೆದುಳು ಅಪಘಾತದಿಂದಾಗಿ ನಿಷ್ಕ್ರಿಯಗೊಂಡಿತ್ತು. `ಡಾರ್ಟರ್ಡ್ ಅಕೌಂಟೆಂಟ್ ಆಗುವುದು ಕೇಜಲ್‌ಳ ಆಸೆಯಾಗಿತ್ತು. ಅವಳೀಗ ಇದ್ದಿದ್ದರೆ ಎಷ್ಟು ಜನ ಅವಳಿಗೆ ಫೋನ್ ಮಾಡಿ ಅಭಿನಂದನೆ ಹೇಳುತ್ತಿದ್ದರೋ, ಈಗ ಅವಳೇ ಇಲ್ಲ. ಅವಳು ತನ್ನ ಹೃದಯ, ಲಿವರ್ ಮತ್ತು ಕಿಡ್ನಿಗಳನ್ನು ದಾನ ಮಾಡಿ ಮೂವರಿಗೆ ಬದುಕು ನೀಡಿದ್ದಾಳೆ.

ಅವರ ಮೂಲಕ ಅವಳು ಬದುಕಿದ್ದಾಳೆ’ ಎಂದು ಕೇಜಲ್‌ಳ ತಾಯಿ ಹೇಳುತ್ತಾರೆ. ಅವಳು ತನ್ನ ತಮ್ಮನಿಗೆ ಯಾವಾಗಲೂ ಓದಿನಲ್ಲಿ ಸಹಾಯ ಮಾಡುತ್ತಿದ್ದಳು. ಈಗ ಅವನಿನ್ನೂ ಅವಳ ಸಾವಿನ ಆಘಾತದಿಂದ ಹೊರಬಂದೇ ಇಲ್ಲ ಎಂದವರು ಹೇಳಿದರು.

Comments are closed.