
ನವದೆಹಲಿ: ದಾದ್ರಿ ಎಕ್ಸ್ಪ್ರೆಸ್ ರೈಲಿನಲ್ಲಿ ಉತ್ತರ ಪ್ರದೇಶದ ಗ್ವಾಲಿಯರ್ನಿಂದ ಹರ್ಯಾಣದ ಸಮಲ್ಖಾ ಎಂಬಲ್ಲಿಗೆ ತೆರಳುತ್ತಿದ್ದ ಆರತಿ ಎಂಬ ಮಹಿಳೆಗೆ ಮುಂಜಾನೆ 5 ಗಂಟೆಯ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಕೆಯ ಜತೆಗಿದ್ದವರು ತಕ್ಷಣ ರೈಲ್ವೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ. ಪಿಸಿಆರ್ ವಾಹನದಲ್ಲಿ ಅಲ್ಲಿಗೆ ಬಂದ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ, ಮಾರ್ಗಮಧ್ಯೆ ಆಕೆಗೆ ಹೆರಿಗೆಯಾಗಿದ್ದು, ಪೊಲೀಸರೇ ದಾದಿಯರಾಗಿದ್ದಾರೆ. 23 ವರ್ಷದ ಮಹಿಳೆ ಆರೋಗ್ಯವಂತ ಗಂಡುಮಗುವಿಗೆ ಜನ್ಮ ನೀಡಿದ್ದಾಳೆ.
ರೈಲಿನಲ್ಲಿ ಯಾವ ವೈದ್ಯಕೀಯ ನೆರವೂ ದೊರೆಯದೇ ಪರಿಸ್ಥಿತಿ ಕೈಮೀರಿ ಹೋಗುವ ಸಾಧ್ಯತೆ ಇತ್ತು. ಆದರೆ ಪಿಸಿಆರ್ ವ್ಯಾನ್ ಸಮಯಕ್ಕೆ ಸರಿಯಾಗಿ ಬಂದು ಪೊಲೀಸರ ನೆರವಿನಿಂದ ಎಲ್ಲವೂ ಸುಖಾಂತ್ಯವಾಯಿತು ಎಂದು ಆರತಿಯ ಸಂಬಂಧಿಕರು ಹೇಳಿದ್ದಾರೆ. ಬಳಿಕ ಮಹಿಳೆ ಹಾಗೂ ನವಜಾತ ಶಿಶುವನ್ನು ಹಿಂದೂರಾವ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಹಾಗೂ ಮಗು ಆರೋಗ್ಯವಾಗಿದ್ದು, ಸಮಯಪ್ರe ಮೆರೆದ ಇಬ್ಬರು ಪೊಲೀಸರಿಗೆ ವಿಶೇಷ ಆಯುಕ್ತ ಸಂಜಯ ಬೆನಿವಾಲ ನಗದು ಬಹುಮಾನ ಘೋಷಿಸಿದ್ದಾರೆ.
Comments are closed.