ರಾಷ್ಟ್ರೀಯ

ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಮರಕ್ಕೆ ನೇಣು ಹಾಕಿದ ಕಾಮುಕರು

Pinterest LinkedIn Tumblr

girl-hanging_6

ಲಕ್ನೋ: ಹದಿನೈದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಕಾಮುಕರು, ಆಕೆಯನ್ನು ಹತ್ಯೆಗೈದು ಮರಕ್ಕೆ ನೇತು ಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಲಕ್ನೋದ ನನ್ಪರಾದಿಂದ ಬಾಲಕಿಯನ್ನು ಮೂವರು ಕಾಮುಕರು ಅಪಹರಿಸಿದ್ದರು. ಬಳಿಕ ಬಹರೀಚ್ ಎಂಬಲ್ಲಿ ಆಕೆಯ ಮೇಲೆ ಅತ್ಯಾಚರ ನಡೆಸಿ ಕೊಂದು ಹಾಕಿದ್ದಾರೆ. ಆತ್ಮಹತ್ಯೆ ಎಂದು ಬಿಂಬಿಸುವ ಸಲುವಾಗಿ ಮರಕ್ಕೆ ಶವವನ್ನು ನೇತು ಹಾಕಿರುವುದಾಗಿ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ.

Comments are closed.