ಕರ್ನಾಟಕ

ನಟ ವಿನಯ್ ರಾಜ್‍ಕುಮಾರ್ ಅಭಿನಯದ ರನ್ ಆ್ಯಂಟನಿ ಚಿತ್ರದ ಟೀಸರ್‍ ….ಫೇಸ್‍ಬುಕ್‍ನಲ್ಲಿ ನಡೆದ ವಾರ್ ಏನು…?

Pinterest LinkedIn Tumblr

ಬೆಂಗಳೂರು: ನಟ ವಿನಯ್ ರಾಜ್‍ಕುಮಾರ್ ಅಭಿನಯದ ರನ್ ಆ್ಯಂಟನಿ ಚಿತ್ರದ ಟೀಸರ್‍ನಲ್ಲಿ ತಮ್ಮ ಹಸರು ಇಲ್ಲದ್ದಕ್ಕೆ ಚಿತ್ರದ ಸಂಭಾಷಣೆಕಾರ ಹರಿ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಹಾಕಿದ ಹರಿ, ಟೀಸರ್‍ನಲ್ಲಿ ಎಲ್ಲರಿಗೂ ಕ್ರೆಡಿಟ್ ಇದೆ. ಆದರೆ ಸಂಭಾಷಣೆಕಾರನಿಗೆ ಮಾತ್ರ ಇಲ್ಲ. ಟೀಸರ್‍ನಲ್ಲಿ ಸಂಭಾಷಣೆ ಇಲ್ಲದ್ದಕ್ಕೆ ಕ್ರೆಡಿಟ್ ಕೊಟ್ಟಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸ್ಟೇಟಸ್‍ಗೆ ಪ್ರತಿಯಾಗಿ ನಿರ್ದೇಶಕ ರಘುಶಾಸ್ತ್ರಿ ಕೂಡ ಸ್ಟೇಟಸ್ ಹಾಕಿ ಹೆಸರು ಬಿಟ್ಟಿದ್ದಕ್ಕೆ ವಿವರಣೆ ನೀಡಿದ್ದಾರೆ. ಟೀಸರ್‍ನಲ್ಲಿ ಎಲ್ಲಾ ವಿಭಾಗಗಳ ಹೆಸರು ಸೇರಿಸಲು ಕಾಲ ಮಿತಿಯಿಲ್ಲ. ಇದರಿಂದ ನೋವಾಗಿದ್ದರೆ ಕ್ಷಮಿಸಿ. ಟೀಸರ್‍ನಲ್ಲಿ ಹೆಸರು ಬಿಟ್ಟು ಹೋಗಿರಬಹುದು ಆದ್ರೆ ಟ್ರೇಲರ್ ಹಾಗೂ ಸಿನಿಮಾದಲ್ಲಿ ನಿಮ್ಮ ಹೆಸರು ಇರಲಿದೆ ಎಂದಿದ್ದಾರೆ.

run-antony-hari-1

run-antony-raghu

Write A Comment