ಕರ್ನಾಟಕ

ಕರೀನಾ ಕಪೂರ್ ನೋಡಲು ಮುಗಿಬಿದ್ದ ಬೆಳಗಾವಿ ಜನತೆ

Pinterest LinkedIn Tumblr

kareena-kapoorಬೆಳಗಾವಿ: ಬಾಲಿವುಡ್ ನ ಜನಪ್ರಿಯ ನಟಿ ಕರೀನಾ ಕಪೂರ್. ಕಾಲೇಜು ಹುಡುಗ-ಹುಡುಗಿಯರ ನೆಚ್ಚಿನ ನಾಯಕಿ. ಈ ಬೇಗಂ ಸೊಸೆಯನ್ನು ನೋಡಲು ಜನರು, ಅಭಿಮಾನಿಗಳು ಮುಗಿಬಿದ್ದ ಪ್ರಸಂಗ ಬೆಳಗಾವಿಯ ಕಾಲೇಜು ರಸ್ತೆಯಲ್ಲಿರುವ ಆದರ್ಶ ಪ್ಯಾಲೇಸ್‌ ಪಕ್ಕದಲ್ಲಿ ಶನಿವಾರ ಮಲಬಾರ್‌ ಗೋಲ್ಡ್‌ ಆಂಡ್‌ ಡೈಮಂಡ್ಸ್‌ನ 150ನೇ ಮಳಿಗೆಯ ಉದ್ಘಾಟನೆ ವೇಳೆ ನಡೆಯಿತು.

ಜ್ಯುವೆಲ್ಲರಿ ಮಳಿಗೆ ಸುತ್ತಮುತ್ತ ಸಾವಿರಾರು ಜನ ಜಮಾಯಿಸಿದ್ದರು. ಅಲ್ಲಿ ಕರೀನಾ ಕಪೂರ್‌ ಮಳಿಗೆ ಉದ್ಘಾಟಿಸಿ ಮೇರೆ ಫೋಟೊ ಕೋ ಸೀನೆ ಸೇ ಯಾರ್‌… ಚಿಪಾಕೆ ಲೇ ಸೈಯಾ ಫೇವಿಕಾಲ್‌ ಸೇ ಎಂಬ ದಬಂಗ್‌-2 ಚಿತ್ರದ ಹಾಡಿಗೆ ಹೆಜ್ಜೆ ಹಾಕಿದರು.

ಹಾಡಿನ ಮಧ್ಯದಲ್ಲಿ ಜನರತ್ತ ಕೈಬೀಸಿ ಫ್ಲೈಯಿಂಗ್‌ ಕಿಸ್‌ ನೀಡಿದರು. ಈ ವೇಳೆ, ಕರೀನಾ ಅವರ ಕೈಕುಲುಕಲು, ಅವರ ಜತೆ ಸೆಲ್ಫಿ ತೆಗೆಸಿಕೊಳ್ಳಲು ಯುವಕರು ಮುಗಿಬಿದ್ದರು. ಗುಂಪನ್ನು ನಿಯಂತ್ರಿಸಲು ಪೊಲೀಸರು ಸ್ವಲ್ಪ ಮಟ್ಟಿಗೆ ಲಾಠಿ ಪ್ರಹಾರ ತೋರಿಸಬೇಕಾಯಿತು. ಬಳಿಕ, ಮಲಬಾರ್‌ ಗೋಲ್ಡ್‌ನ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಿಬ್ಬಂದಿ ಜತೆ ಸೆಲ್ಫಿಗೆ ಮುಖವೊಡ್ಡಿದರು.

Write A Comment