ರಾಷ್ಟ್ರೀಯ

ಸೆಲ್ಫಿಗೆ ಪೋಸ್ ನೀಡುವಾಗ ಗುಂಡು ಹಾರಿಸಿಕೊಂಡ ಬಾಲಕ !

Pinterest LinkedIn Tumblr

Selfie

ಪಠಾಣ್‍ಕೋಟ್: 14 ವರ್ಷದ ಹುಡುಗನೊಬ್ಬ ತಂದೆಯ ಪಿಸ್ತೂಲ್ ಹಿಡಿದು ಸೆಲ್ಫಿಗೆ ಪೋಸ್ ನೀಡಲು ಹೋಗಿ ಆಕಸ್ಮಿಕವಾಗಿ ಗುಂಡು ಹಾರಿಸಿಕೊಂಡ ಘಟನೆ ಪಂಜಾಬ್‍ನ ಪಠಾಣ್‍ಕೋಟ್‍ನಲ್ಲಿ ನಡೆದಿದೆ.

ಶನಿವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, 9ನೇ ತರಗತಿಯ ರಮಣ್‍ದೀಪ್ ತೀವ್ರವಾಗಿ ಗಾಯಗೊಂಡಿದ್ದಾನೆ. ಈತ ತನ್ನ ತಂದೆ ಕೆಲಸಕ್ಕೆ ಹೋದ ನಂತರ ಅವರ ಪರವಾನಿಗೆಯುತ ಲೋಡೆಡ್ ಗನ್ ತೆಗೆದು ಸೆಲ್ಫಿಗೆ ಪೋಸ್ ನೀಡುತ್ತಿದ್ದ. ಈ ವೇಳೆ ಆಕಸ್ಮಿಕವಾಗಿ ಟ್ರಿಗರ್ ಒತ್ತಿ ತನಗೆ ತಾನೇ ಶೂಟ್ ಮಾಡಿಕೊಂಡಿದ್ದಾನೆ.

ಘಟನೆ ನಡೆದಾಗ ರಮಣ್‍ದೀಪ್‍ನ ತಂಗಿ ಮನೆಯಲ್ಲಿದ್ದಿದ್ದರಿಂದ ತಕ್ಷಣ ಕುಟುಂಬದವರಿಗೆ ವಿಷಯ ತಿಳಿಸಿದ್ದಳು. ನಂತರ ರಮಣ್‍ದೀಪ್‍ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತನ ಸ್ಥಿತಿ ಚಿಂತಾಜನಕವಾಗಿದೆ.

ಘಟನೆಯ ಬಗ್ಗೆ ಪಠಾಣ್‍ಕೋಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹುಡುಗ ಬಳಸಿದ ಪಿಸ್ತೂಲನ್ನು ವಶಪಡಿಸಿಕೊಂಡಿದ್ದಾರೆ.

Write A Comment