ಸ್ಮಾರ್ಟ್ಫೋನ್ ಮತ್ತು ಕಂಪ್ಯೂಟರ್ಗಳ ಯುಗ ಅಂತ್ಯವಾಗಲಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಅಭಿಪ್ರಾಯಪಟ್ಟಿದ್ದಾರೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆ್ಯಪಲ್ ಕಂಪನಿಯ ಉತ್ಪನ್ನಗಳು ಮಾರಾಟದಲ್ಲಿಯೂ ಲಾಭ ಗಳಿಸುವುದರಲ್ಲಿಯೂ ಹಿನ್ನಡೆ ಸಾಧಿಸಿರುವ ಬೆನ್ನಲ್ಲೇ ಪಿಚೈ ಈ ರೀತಿಯ ಅಭಿಪ್ರಾಯವೊಂದನ್ನು ಹೇಳಿದ್ದಾರೆ .
ಗೂಗಲ್ ನೌಕರರಿಗಾಗಿ ಬರೆದ ತೆರೆದ ಪತ್ರವೊಂದರಲ್ಲಿ ಮುಂದಿನ ಡಿವೈಸ್ಲೆಸ್ (ಸಾಧನ ರಹಿತ) ಬದುಕಿನ ಬಗ್ಗೆ ಪಿಚೈ ಬೆಳಕು ಚೆಲ್ಲಿದ್ದಾರೆ. ತಂತ್ರಜ್ಞಾನ ಮುಂದುವರಿಯುತ್ತಿದ್ದಂತೆ ದೊಡ್ಡ ಗಾತ್ರದ ಕಂಪ್ಯೂಟರ್ಗಳನ್ನು ಅದೃಶ್ಯ ಲ್ಯಾಪ್ಟಾಪ್ಗಳು ಹಿಂದಿಕ್ಕಿವೆ. ಯಾವುದೇ ವಿಷಯವನ್ನು ಮನೆಗೆ ಹೋಗಿ ಹುಡುಕುವ ಕಾಲ ಹೋಯಿತು. ಈಗ ಎಲ್ಲವೂ ಆನ್ಲೈನ್ ಮೂಲಕ ಬೆರಳ ತುದಿಯಲ್ಲಿ ಸಿಕ್ಕಿ ಬಿಡುತ್ತದೆ. 300 ಮಿಲಿಯನ್ಗಿಂತ 3 ಬಿಲಿಯನ್ ಬಳಕೆದಾರರವರೆಗೆ ಎಲ್ಲರೂ ಮೊಬೈಲ್ ಫೋನ್ನ ದಾಸರಾಗಿದ್ದೇವೆ. ಮೊಬೈಲ್ ಫೋನ್ ಗಳು ನಮ್ಮೆಲ್ಲಾ ಕೆಲಸವನ್ನು ಸುಲಭವಾಗುವಂತೆ ಮಾಡಿ ಸಮಯವನ್ನು ಉಳಿಸುತ್ತದೆ. ಹೀಗೆಲ್ಲಾ ಆಗಬಹುದೆಂದು ಯಾರಾದರೂ ಊಹಿಸಿದ್ದರೆ? ಆದರೆ ಗೂಗಲ್ ಎಲ್ಲವನ್ನೂ ಸಾಧಿಸಿಯೇ ಬಿಟ್ಟಿತು.
ಈ ತೆರೆದ ಪತ್ರದಲ್ಲಿ ಅವರು ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಅವುಗಳು ಹೀಗಿವೆ
ಮುಂಬರುವ ವರುಷಗಳಲ್ಲಿ ಕೃತಕ ಬುದ್ಧಿಮತ್ತೆ (ಆರ್ಟಿಫಿಶಲ್ ಇಂಟೆಲಿಜೆನ್ಸ್) ಮೊಬೈಲ್ ಫೋನ್ಗಳನ್ನು ಹಿಂದಿಕ್ಕಲಿವೆ. ಅಂದರೆ ಮುಂದೆ ಜನರ ಕೈಯಲ್ಲಿ ಯಾವುದೇ ಸಾಧನ (ಡಿವೈಸ್) ವಿರುವುದಿಲ್ಲ, ಎಲ್ಲದಕ್ಕೂ ಆರ್ಟಿಫಿಶನ್ ಇಂಟೆಲಿಜೆನ್ಸ್ ಮೂಲವಾಗಲಿದೆ.
ತಂತ್ರಜ್ಞಾನವು ತುಂಬಾ ಬೆಳೆದು ಬಿಟ್ಟಿದೆ. ಕಿಲೋಗಳಿಂದ ಗ್ರಾಂಗಳಿಗೆ, ತೂಕ ರಹಿತದಿಂದ ಅದೃಶ್ಯ ವಸ್ತುಗಳನ್ನು ನಿರ್ಮಿಸುವರೆಗೆ ಎಲ್ಲವೂ ತಂತ್ರಜ್ಞಾನದ್ದೇ ಕಾರುಬಾರು. 0.5 ಕೆಜಿ ಫೋ ನ್ ಬಳಸುತ್ತಿದ್ದ ಆ ಕಾಲ ಹೋಯಿತು. ತಂತ್ರಜ್ಞಾನದ ಲೋಕದಲ್ಲಿ ಗೂಗಲ್ ಚಮತ್ಕಾರವನ್ನೇ ಮಾಡಿದೆ ಎಂದು ಪಿಚೈ ಹೇಳಿದ್ದಾರೆ.