ರಾಷ್ಟ್ರೀಯ

ಬಿಸಿಲಿನ ತಾಪಕ್ಕೆ ಚಪ್ಪಡಿ ಕಲ್ಲಿನ ಮೇಲೆ ರೆಡಿಯಾಯ್ತು ಆಮ್ಲೆಟ್! ಈ ವೀಡಿಯೋ ನೋಡಿ…

Pinterest LinkedIn Tumblr

https://youtu.be/7MVdySlgcBM

ಹೈದರಾಬಾದ್: ಇಡೀ ರಾಷ್ಟ್ರ ಈ ಬಾರಿ ರಣಬಿಸಿಲಿಗೆ ತತ್ತರಿಸಿದೆ. ಅದು ಯಾವ ರೀತಿ ಅಂದ್ರೆ ನೆಲವು ಕೂಡ ಕಾದ ಕಾವಲಿಯಂತಾಗಿದೆ. ಇದಕ್ಕೆ ನಿದರ್ಶನ ಎಂಬಂತೆ ತೆಲಂಗಾಣದ ಕರೀಂನಗರದಲ್ಲಿ ಮಹಿಳೆಯೊಬ್ಬರು ಮನೆಮುಂದಿನ ಚಪ್ಪಡಿ ಮೇಲೆ ಮೊಟ್ಟೆ ಹೊಡೆದು ಹಾಕಿದ್ದು, ಅದು ಕೆಲವೇ ಕ್ಷಣಗಳಲ್ಲಿ ಆಮ್ಲೆಟ್ ಆಗಿದೆ.

ಅದನ್ನ ಕಂಡ ಮಹಿಳೆ ಅಚ್ಚರಿಗೊಂಡಿದ್ದಾರೆ. ನಂಬಲಿಕ್ಕೆ ಅಸಾಧ್ಯವಾದ್ರೂ ಈ ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ತೆಲಂಗಾಣದಲ್ಲಿ ಈ ಭಾರಿ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಈಗಾಗಲೇ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

Write A Comment