ಮನೋರಂಜನೆ

ಭಾರತದಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ದೂಳೆಬ್ಬಿಸಿದ ದಿ ಜಂಗಲ್ ಬುಕ್

Pinterest LinkedIn Tumblr

The Jungale Book

ನವದೆಹಲಿ: ಭಾರತದಾದ್ಯಂತ ಏಪ್ರಿಲ್ 8 ರಂದು ತೆರೆಗೆ ಬಂದಿದ್ದ ಬಹುನಿರೀಕ್ಷಿತ ಮಕ್ಕಳ ಚಿತ್ರ ದಿ ಜಂಗಲ್ ಬುಕ್ ಬಾಕ್ಸ್ ಆಫೀಸ್ ನಲ್ಲಿ ದೂಳೆಬ್ಬಿಸಿದೆ.

ಬಾಲಿವುಡ್ ಚಿತ್ರಗಳಾದ ಕಪೂರ್ ಅಂಡ್ ಸನ್ಸ್ ಮತ್ತು ನಿರ್ಜಾ ಚಿತ್ರಗಳ ವಾರದ ಕಲೆಕ್ಷನ್ ಅನ್ನು ಹಿಂದಿಕ್ಕಿದ ದಿ ಜಂಗಲ್ ಬುಕ್ ಚಿತ್ರ ಮೊದಲ ವಾರದಲ್ಲಿ 73.50 ಕೋಟಿ ಗಳಿಕೆ ಮಾಡಿದೆ.

ಇನ್ನು ಭಾರತದಲ್ಲಿ ತೆರೆಕಂಡ ಹಾಲಿವುಡ್ ಡಬ್ ಚಿತ್ರಗಳ ಪೈಕಿ ದಿ ಜಂಗಲ್ ಬುಕ್ 100 ಕೋಟಿ ಕ್ಲಬ್ ಸೇರಲಿರುವ ಮೊದಲ ಚಿತ್ರವಾಗಲಿದೆ. ದಿ ಜಂಗಲ್ ಬುಕ್ ಮತ್ತು ಕಪೂರ್ ಅಂಡ್ ಸನ್ಸ್ ಚಿತ್ರಗಳು ಏಕಕಾಲಕ್ಕೆ ಸುಮಾರು 1500 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿದ್ದವು.

Write A Comment