ಗಲ್ಫ್

ಪತ್ನಿಗೆ ಥಳಿಸಿದ ಪತಿಗೆ ಸಾರ್ವಜನಿಕವಾಗಿ 20 ಛಡಿ ಏಟಿನ ಶಿಕ್ಷೆ ನೀಡಿದ ಸೌದಿ !

Pinterest LinkedIn Tumblr

punish

ದುಬೈ: ಇಸ್ಲಾಮಿಕ್ ರಾಷ್ಟ್ರಗಳು ಕಠಿಣ ಕಾನೂನುಗಳಿಗೆ ಹೆಸರುವಾಸಿ. ಇದೀಗ ಸೌದಿ ಅರೇಬಿಯಾದಲ್ಲಿ ಪತ್ನಿಗೆ ಥಳಿಸಿದ ಪತಿಗೆ ಸಾರ್ವಜನಿಕವಾಗಿ 20 ಛಡಿ ಏಟಿನ ಶಿಕ್ಷೆ ನೀಡಲಾಗಿದೆ.

ಕಳೆದ ತಿಂಗಳು ಪತ್ನಿ 30 ವರ್ಷದ ಗಂಡನ ವಿರುದ್ಧ ದೂರು ದಾಖಲಿಸಿದ್ದಳು. ಅಲ್ಲದೆ ಪತಿ ತನ್ನ ಮೇಲೆ ಹಲ್ಲೆ ಮಾಡಿರುವ ಕುರಿತ ವೈದ್ಯಕೀಯ ವರದಿಯನ್ನು ಸಲ್ಲಿಸಿದ್ದಳು. ಈ ವರದಿ ಅನ್ವಯ ಸೌದಿ ಅರೇಬಿಯಾ ಕೋರ್ಟ್ ಆರೋಪಿಗೆ 20 ಛಡಿ ಏಟಿನ ಶಿಕ್ಷೆ ನೀಡಿದೆ.

ವಿಚಾರಣೆ ವೇಳೆ ಪತಿರಾಯ ತಾನು ಹೆಂಡತಿಗೆ ಹೊಡೆದಿಲ್ಲ ತಾನು ಹೊಡೆಯುತ್ತೇನೆಂದು ತಮಾಷೆ ಮಾಡುತ್ತಿದ್ದೆ ಅಷ್ಟೇ ಎಂದು ಹೇಳಿದ್ದ. ರಾಜಿ ಮಾತುಕತೆ ಬಳಿಕ ಹೆಂಡತಿ ಪ್ರಕರಣವನ್ನು ಹಿಂಪಡೆಯುವುದಾಗಿ ಹೇಳಿದ್ದಳು. ಆದರೆ ಇದನ್ನು ನಿರಾಕರಿಸಿದ ಕೋರ್ಟ್ ಪತಿಗೆ ಶಿಕ್ಷೆ ನೀಡಿ ಆದೇಶ ಹೊರಡಿಸಿದ್ದಾರೆ.

Write A Comment