ಕರ್ನಾಟಕ

ಕೋಟಿ ರೂ. ಯ ಕಾರಿನಲ್ಲಿ ರಾಜ್ಯ ಪ್ರವಾಸ ಮಾಡಲ್ಲವಂತೆ ಯಡಿಯೂರಪ್ಪ !

Pinterest LinkedIn Tumblr

yaddi

ಬೆಂಗಳೂರು: ಕೋಟಿ ರೂ. ಮೌಲ್ಯದ ಕಾರಿನಲ್ಲಿ ರಾಜ್ಯ ಪ್ರವಾಸ ಮಾಡಲು ನಿರ್ಧರಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಈಗ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ದುಬಾರಿ ಕಾರು ಬಳಕೆ ವಿಚಾರ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾದ ಹಿನ್ನೆಲೆಯಲ್ಲಿ ರೈಲಿನಲ್ಲೇ ಬರ ಪ್ರವಾಸ ಮಾಡಲಿರುವುದಾಗಿ ಬಿಎಸ್‍ವೈ ತಿಳಿಸಿದ್ದಾರೆ.

ನಾನು ರಾಜ್ಯದಾದ್ಯಂತ ಬರ ಪ್ರವಾಸಕ್ಕೆ ರೈಲಿನಲ್ಲಿ ಪ್ರಯಾಣ ಮಾಡ್ತೇನೆ. ಮುರುಗೇಶ್ ನಿರಾಣಿ ಕೊಟ್ಟ ಕಾರನ್ನು ಬಳಸಲ್ಲ. ಹತ್ತಿರದ ಜಿಲ್ಲೆಗಳಿಗೆ ಪ್ರವಾಸ ಮಾಡಲಿಕ್ಕೆ ಮಾತ್ರ ಕಾರು ಬಳಸ್ತೇನೆ. ನನಗೆ ಮೊದಲಿನಿಂದಲೂ ರೈಲಿನಲ್ಲೇ ಪ್ರಯಾಣ ಮಾಡಿ ಅಭ್ಯಾಸ. ರೈಲಿನಲ್ಲಿ ಪ್ರಯಾಣ ಮಾಡೋದು ಆರೋಗ್ಯಕ್ಕೂ ಒಳ್ಳೆಯದು ಎಂದು ಯಡಿಯೂರಪ್ಪ ಹೇಳಿದ್ದಾರೆ.

ನಿನ್ನೆ ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ಕೊಟ್ಟಿದ್ದ ಯಡಿಯೂರಪ್ಪ ದುಬಾರಿ ಕಾರು ಬಳಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದ್ದರು. ಆದರೆ, ಇವತ್ತು ಅವರ ನಿರ್ಧಾರ ಬದಲಾಗಿದೆ.

Write A Comment