ಮನೋರಂಜನೆ

ಶಾರುಕ್ ಖಾನ್ ನಟನೆಯ ‘ಫ್ಯಾನ್’ ಬಿಡುಗಡೆಯ ದಿನವೇ 19.2 ಕೋಟಿ ಗಳಿಕೆ !

Pinterest LinkedIn Tumblr

fan

ಮುಂಬೈ: ಬಾಲಿವುಡ್ ಬಾದಶಃ ಶಾರುಕ್ ಖಾನ್ ಅವರ ಅತಿನಿರೀಕ್ಷಿತ ಚಿತ್ರ ಬಿಡುಗಡೆಯಾದ ಮೊದಲ ದಿನವೇ 19.2 ಕೋಟಿ ಗಳಿಸಿದೆ. ಮನೀಶ್ ಶರ್ಮಾ ನಿರ್ದೇಶನದ, ಶಾರುಕ್ ದ್ವಿಪಾತ್ರದಲ್ಲಿ ಅಭಿನಯಿಸಿರುವ ‘ಫ್ಯಾನ್’ ನೆನ್ನೆ ಶುಕ್ರವಾರವಷ್ಟೇ ತೆರೆ ಕಂಡಿದೆ.

ಪ್ರಚಾರ ಮತ್ತು ಜಾಹೀರಾತು ಸೇರಿ 105 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ‘ಫ್ಯಾನ್’ ದೇಶದಾದ್ಯಂತ್ಯ 3500 ಸ್ಕ್ರೀನ್ ಗಳಲ್ಲಿ ಹಾಗು ಜಾಗತಿಕವಾಗಿ 4600 ಸ್ಕ್ರೀನ್ ಗಲ್ಲಿ ಬಿಡುಗಡೆಯಾಗಿದೆ.

‘ಯಶ್ ರಾಜ್ ಫಿಲ್ಮ್ಸ್’ ಬ್ಯಾನರ್ ಅಡಿ ಬಿಡುಗಡೆಯಾಗಿರುವ ‘ಫ್ಯಾನ್’ ತಾರೆ ಆರ್ಯನ್ ಖನ್ನ ಮತ್ತವನ ಹುಚ್ಚು ಅಭಿಮಾನಿ ಗೌರವ್ ನಡುವಿನ ಪ್ರೀತಿ-ಘರ್ಷಣೆಯ ಕಥೆ ಹೊಂದಿದ್ದು, ಕಥೆ ಮತ್ತು ಸ್ಕ್ರಿಪ್ಟ್ ಗೆ ಭಾರಿ ಮೆಚ್ಚುಗೆ ಪಡೆದಿದೆ.

ಸ್ಟಾರ್ ಮತ್ತು ಅಭಿಮಾನಿ ಎರಡೂ ಪಾತ್ರಗಳಲ್ಲಿ ಶಾರುಕ್ ಅಭಿನಯಿಸಿದ್ದಾರೆ. ವಿಮರ್ಶಕರ, ಜನರ ಮೆಚ್ಚುಗೆ ಗಳಿಸಿರುವುದಲ್ಲದೆ ಬಾಲಿವುಡ್ ಮತ್ತು ಇತರ ಚಿತ್ರರಂಗದ ಗಣ್ಯರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ‘ಫ್ಯಾನ್’ ಸಿನೆಮಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Write A Comment