ರಾಷ್ಟ್ರೀಯ

ಗುಜರಾತಿನಲ್ಲಿ ವೃದ್ಧನ ಮೇಲೆ ಬಿಜೆಪಿ ಸಂಸದನ ದರ್ಪ…ಇಲ್ಲಿದೆ ವೀಡಿಯೋ

Pinterest LinkedIn Tumblr

ಅಹಮದಾಬಾದ್: ಗುಜರಾತ್‍ನ ಪೋರಬಂದರ್ ಕ್ಷೇತ್ರದ ಬಿಜೆಪಿ ಸಂಸದ ವಿಠ್ಠಲ್ ರಾದಾಡಿಯಾ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ.

ರಾಜ್ ಕೋಟ್ ಜಿಲ್ಲೆಯ ಗ್ರಾಮವೊಂದರಲ್ಲಿ ಏರ್ಪಡಿಸಿದ್ದ ಸಾಯಿಬಾಬಾ ದೇವಾಲಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಹಿರಿಯ ನಾಗರಿಕರೊಬ್ಬರಿಗೆ ಸಂಸದ ರಾದಾಡಿಯಾ ಜಾಡಿಸಿ ಒದ್ದು ತಮ್ಮ ದರ್ಪ ಪ್ರದರ್ಶಿಸಿದ್ದಾರೆ.

ಸಂಸದರ ಅಮಾನವೀಯ ಕೃತ್ಯವನ್ನು ಜನರು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೊಳಪಟ್ಟಿದೆ.

ವೃದ್ಧ ಜನರಲ್ಲಿ ಮೌಡ್ಯ ತುಂಬುವಂತ ಕೆಲಸ ಮಾಡುತ್ತಿದ್ದ. ಹೇಳಿದರೇ ಕೇಳಲಿಲ್ಲ ಎಂದು ಶಾಸಕ ವಿಠ್ಠಲ್ ರಾದಾಡಿಯಾ ಸ್ಪಷ್ಟನೆ ನೀಡಿದ್ದಾರೆ, ನಾನು ಹಲ್ಲೆ ನಡೆಸಿಲ್ಲ ಎಂದು ಆರೋಪ ನಿರಾಕರಿಸಿದ್ದಾರೆ. 2012 ರಲ್ಲಿ ಟೋಲ್‌ಗೇಟ್ ಸಿಬಂದ್ಧಿಗಳ ಮೇಲೆ ಹಲ್ಲೆ ನಡೆಸಿ ಸುದ್ದಿಯಾಗಿದ್ದರು.

Write A Comment