ಮುಂಬೈ

ಮಹಾರಾಷ್ಟ್ರ: ಮೂರು ದಶಕಗಳ ನಂತರ ಕಾಣಿಸಿಕೊಂಡ ನೀರಿನಲ್ಲಿ ಮುಳುಗಿದ್ದ ದೇವಾಲಯಗಳು

Pinterest LinkedIn Tumblr

Maharashtra

ಚಂದೋಲಿ: ಮಹಾರಾಷ್ಟ್ರದಲ್ಲಿ ಕಳೆದ ಮೂರು ದಶಕಗಳ ಹಿಂದೆ ನೀರಿನಲ್ಲಿ ಮುಳುಗಿದ್ದ ದೇವಾಲಯಗಳು ಈಗ ಮತ್ತೆ ಕಾಣಿಸಿಕೊಂಡಿವೆ.

ಮಹಾರಾಷ್ಟ್ರದಲ್ಲಿ ಬರ ಪರಿಸ್ಥಿತಿ ಉಂಟಾಗಿರುವ ಪರಿಣಾಮ ನೀರಿನಲ್ಲಿ ಮುಳುಗಿದ್ದ ದೇವಾಲಯಗಳು ಈಗ ಮತ್ತೆ ಕಾಣಿಸಿಕೊಂಡಿವೆ. ಚಂದೋಲಿ ಗ್ರಾಮದಲ್ಲಿ ಹರಿಯುವ ಗೋದಾವರಿ ನದಿಯಲ್ಲಿ ನೀರು ಕಡಿಮೆಯಾಗದ್ದು 1982 ರಲ್ಲಿ ಕಾಣಿಸಿಕೊಂಡಿದ್ದ ದೇವಾಲಯಗಳು ಈಗ ಮತ್ತೆ ಕಾಣಲಾರಂಭಿಸಿವೆ.

ನೀರಿನಲ್ಲಿ ಮುಳುಗಿಹೋಗಿದ್ದ ದೇವಾಲಯಗಳ ಬಗ್ಗೆ ಪುರಾತತ್ವ ಇಲಾಖೆ ಬಳಿ ಮಾಹಿತಿ ಇಲ್ಲ, ಆದರೆ ನಾಸಿಕ್ ನ ಗೆಜೆಟಿಯರ್ ನಲ್ಲಿ ಈ ದೇವಾಲಯದ ವಿನ್ಯಾಸ ಹಾಗೂ ಘಾಟ್ ಗಳ ಬಗ್ಗೆ ಮಾಹಿತಿ ಲಭ್ಯವಿದೆ. ಬೇಸಿಗೆ ದಿನಗಳಲ್ಲಿ ದೇವಾಲಯದ ಗೋಪುರಗಳಷ್ಟೇ ಕಾಣಿಸುತ್ತಿದ್ದವು. 1982 ರಲ್ಲಿ ದೇವಾಲಯಗಳು ಪೂರ್ತಿಯಾಗಿ ಕಾಣಿಸುತ್ತಿದ್ದವು ಎಂದು ಗ್ರಾಮದ ಹಿರಿಯರು ನೆನಪಿಸಿಕೊಳ್ಳುತ್ತಾರೆ ಈ ಬಾರಿ ಬೆಸಿಗೆಯಿಂದ ಬರದ ಛಾಯೆ ಹೆಚ್ಚಿರುವುದರಿಂದ ಮತ್ತೊಮ್ಮೆ ದೇವಾಲಯಗಳು ಕಾಣಿಸಿಕೊಂಡಿವೆ ಎಂದು ಸ್ಥಳಿಯರು ಹೇಳಿದ್ದಾರೆ.

Write A Comment